Jabardasth actor death : ಸಾವು ಯಾವಾಗ ಬರುತ್ತೆ ಅಂತ ಹೇಳೋಕೆ ಆಗಲ್ಲ. ಶೂಟಿಂಗ್‌ಗೆ ಅಂತ ತೆರಳುತ್ತಿದ್ದ ನಟ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಅವರ ಅಗಲಿಗೆ ಕುಟುಂಬಕ್ಕೆ ಆಘಾತ ನೀಡಿದೆ. ಈ ಘಟನೆ ತೆಲಂಗಾಣದ ಕೊತಗುಡೆಂನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ರಾಣ ತೆತ್ತಿದ್ದಾರೆ ಎಂದು ತಿಳಿದು ಬಂದಿದೆ.. 


COMMERCIAL BREAK
SCROLL TO CONTINUE READING

ಕೊಟ್ಟಗುಡೆಂ ರೈಲ್ವೆ ಪೊಲೀಸರ ಪ್ರಕಾರ, ಚುಂಚುಪಲ್ಲಿ ಮಂಡಲ ನಂದತಾಂಡದ ಮೇದಾರ ಮೊಹಮ್ಮದ್ದೀನ್‌ (53) ಬೆಳಗ್ಗೆ ಭದ್ರಾಚಲಂ ರಸ್ತೆ ರೈಲು ನಿಲ್ದಾಣಕ್ಕೆ (ಕೊತ್ತಗುಡ್ಡೆ) ಬಂದಿದ್ದರು. ಅದೇ ಸಾಗುತ್ತಿದ್ದ ಕಾಕತೀಯ ಎಕ್ಸ್ ಪ್ರೆಸ್ ಹತ್ತಲು ಯತ್ನಿಸಿ, ಕೆಳಗೆ ಬಿದ್ದ ಅವರು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡರು. 


ಇದನ್ನೂ ಓದಿ: ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿ


ಕೂಡಲೇ ಒಳಗಿದ್ದ ಪ್ರಯಾಣಿಕರು ಚೈನ್ ಎಳೆದು ಲೊಕೊ ಪೈಲಟ್ ರೈಲನ್ನು ನಿಲ್ಲಿಸಿದರು. ರೈಲ್ವೆ ಪೊಲೀಸ್ ಸಿಬ್ಬಂದಿಯ ನೆರವಿನಿಂದ ಮೊಹಮ್ಮದ್ದೀನ್‌ನನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೊಂಟ ಮತ್ತು ಪಕ್ಕೆಲುಬುಗಳಿಗೆ ತೀವ್ರವಾದ ಗಾಯಗಳಾಗಿದ್ದರಿಂದ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಖಮ್ಮಂಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಾಗಿದೆ.


ಮೊಹಮ್ಮದ್ದೀನ್ ಈಟಿವಿ ಜಬರ್ದಸ್ತ್ ನಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಇದುವರೆಗೆ ಸುಮಾರು 50 ಸಂಚಿಕೆಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶುಕ್ರವಾರ ಶೂಟಿಂಗ್ ಇದೆ ಎಂದು ಹೇಳಿ ಹೈದರಾಬಾದ್‌ಗೆ ಹೋಗಲು ಬೆಳಗ್ಗೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು. ಆದ್ರೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.