ಮುಂಬೈ: 1987 ರಲ್ಲಿ ತೆರೆಗೆ ಬಂದ ಈ ತೇಜಾಬ್ ಚಿತ್ರದ ಏಕ ದೋ ತೀನ್ ಹಾಡು ಹಾಡಿನಿಂದಲೇ ಮಾಧುರಿ ದೀಕ್ಷಿತ್ ಬಾಲಿವುಡ್ ನಲ್ಲಿ  ಡ್ಯಾನ್ಸ್ ದಿವಾ ಎಂದು ಖ್ಯಾತಿ ಪಡೆದವಳು.


COMMERCIAL BREAK
SCROLL TO CONTINUE READING

ಈ ಹಾಡಿನ ರೀಮಿಕ್ಸ್ ಹಾಡಿಗೆ ಬಾಲಿವುಡ್ ಹಾಟ್ ಬೆಡಗಿ ಎಂದೇ ಹೆಸರು ಮಾಡಿರುವ ಶ್ರೀಲಂಕಾದ ರಾಜಕುಮಾರಿ  ಜಾಕ್ವೆಲಿನಾ ಫರ್ನಾಂಡಿಸ್ ಟೈಗರ್ ಶ್ರಾಫ್ ಅಭಿನಯದ ಭಾಗಿ 2 ಚಿತ್ರದಲ್ಲಿ  ಹೆಜ್ಜೆ ಹಾಕಿದ್ದಾಳೆ.




ಇದಕ್ಕೆ ಪ್ರತಿಕ್ರಿಯಿಸಿರುವ ಜಾಕ್ವೆಲಿನಾ ಈ ಹಾಡನ್ನು ನಾನು ಮಾಧುರಿ ಮೇಡಂ ವೀಕ್ಷಿಸುವುದಕ್ಕೆ ಕಾತರಳಾಗಿದ್ದೇನೆ, ಮೂಲ ಹಾಡಿನಲ್ಲಿ ಮಾಧುರಿ ನೀಡಿರುವ ನೃತ್ಯದ ಪ್ರದರ್ಶನಕ್ಕೆ ಯಾರು ಅವಳಿಗೆ ಸರಿಸಾಟಿಯಾಗಲಾರರು ಎಂದು ತಿಳಿಸಿದ್ದಾರೆ.