Jacqueline Fernandez : ತನ್ನ ಮೊದಲ `ಕ್ರಶ್` ಹೆಸರು ಬಾಯಿಬಿಟ್ಟ ನಟಿ ಜಾಕ್ವೆಲಿನ್ ಫರ್ನಾಂಡೀಸ್
ಅರ್ಜುನ್ `ಬಾಕ್ ಬಾಕ್ ವಿಥ್ ಬಾಬಾ` ಎಂಬ ಸೋಶಿಯಲ್ ಮೀಡಿಯಾ ಚಾಟ್ ಶೋ ಅನ್ನು ಆರಂಭಿಸಿದ್ದಾರೆ, ಇದರಲ್ಲಿ ನಟ ತನ್ನ ಉದ್ಯಮದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡುತ್ತಾ ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸಿಕೊಡುತ್ತಾರೆ.
ನವದೆಹಲಿ : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ತನ್ನ 'ಭೂತ್ ಪೊಲೀಸ್' ಸಹನಟ ಅರ್ಜುನ್ ಕಪೂರ್ ಜೊತೆಗಿನ ಚಾಟ್ ಸೆಷನ್ ನಲ್ಲಿ ಸಾಮಾಜಿಕ ಮಾಧ್ಯಮದ ಕೆಲವು ಟೀಕೆಗಳು ತನಗೆ ಅರ್ಥವಾಗುತ್ತವೆ. ಅವುಗಳನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅರ್ಜುನ್(Arjun Kapoor) 'ಬಾಕ್ ಬಾಕ್ ವಿಥ್ ಬಾಬಾ'(Bak Bak With Baba) ಎಂಬ ಸೋಶಿಯಲ್ ಮೀಡಿಯಾ ಚಾಟ್ ಶೋ ಅನ್ನು ಆರಂಭಿಸಿದ್ದಾರೆ, ಇದರಲ್ಲಿ ನಟ ತನ್ನ ಉದ್ಯಮದ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಮಾತನಾಡುತ್ತಾ ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿಸಿಕೊಡುತ್ತಾರೆ. ನಿನ್ನೆ ಈ ಶೋನಲ್ಲಿ ಜಾಕ್ವೆಲಿನ್ ಭಾಗವಹಿಸಿದ್ದರು, ಆಗ ಮಾತನಾಡಿದ ಅವರು ತಮ್ಮ ಮೊದಲ ಬಾಲಿವುಡ್ ಕ್ರಶ್, ಫಿಟ್ನೆಸ್, ಪ್ರಯಾಣ ಮತ್ತು ಟ್ರೋಲ್‌ಗಳನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ಕೆಲ ಇಂಟರಸ್ಟಿಂಗ್ ಮಾಹಿತಿ ಬಹಿರಂಗಪಡಿಸಿದ್ದಾರೆ
ಇದನ್ನೂ ಓದಿ : Raj Kundra case :'ಆತ ಏನು ಮಾಡುತ್ತಿದ್ದಾನೆ ಎಂದು ತಿಳಿಯಲು ನಾನು ತುಂಬಾ ಬ್ಯುಸಿಯಾಗಿದ್ದೆ'
ಜಾಕ್ವೆಲಿನ್ ಭಯಾನಕ ಎಂದ ಫ್ಯಾನ್ಸ್
ನಟ ಜಾಕ್ವೆಲಿನ್(Jacqueline Fernandez) ಅವರನ್ನು, 'ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಬಗ್ಗೆ ನೀವು ಓದಿರುವ ಕೆಟ್ಟ ವಿಷಯ ಯಾವುದು?' ಎಂದು ಕೇಳಿದಕ್ಕೆ ಉತ್ತರಿಸಿದ ಜಾಕ್ವೆಲಿನ್ ಫರ್ನಾಂಡೀಸ್ ಅನೇಕ ಕೆಟ್ಟ ವಿಷಯಗಳಿವೆ. ನಾವೆಲ್ಲರೂ ಅಂತಹ ಕಾಮೆಂಟ್ ಗಳನ್ನ ಸ್ವೀಕರಿಸುತ್ತೇವೆ. ನಾನು ಎಷ್ಟು ಭಯಂಕರವಾಗಿ ಕಾಣುತ್ತೇನೆ, ನನ್ನ ಉಚ್ಚಾರಣೆ ಎಷ್ಟು ಭಯಾನಕವಾಗಿದೆ ಮತ್ತು ನಾನು ಹೇಗೆ ಹಿಂದಿ ಮಾತನಾಡುತ್ತೇನೆ, ನನ್ನ ನೋಟಕ್ಕೆ ಕೆಟ್ಟ ಪ್ರತಿಕ್ರಿಯೆಗಳಿವೆ ಎಂದಎಲ್ಲಾ ಫ್ಯಾನ್ಸ್ ಬರೆದಿರುವುದು ತುಂಬಾ ಬೇಜಾರ್ ಆಯ್ತು ಎಂದರು
ಆದರೆ ನಾನು ಇದನ್ನ ಪಾಸಿಟಿವ್ ತೆಗೆದುಕೊಳ್ಳುತ್ತೇನೆ. ಅವರು ಹೇಳಿದರು ನಂತರ, ಕೆಲವು ಸಮಯ ಸುಧಾರಣೆ ಆಗಬಹುದು ಎಂದು ನಾನು ಭಾವಿಸುತ್ತೇನೆ. ಈ ವ್ಯಕ್ತಿಯು ಕೆಟ್ಟವನು ಎಂದು ನೀವು ಭಾವಿಸುವ ಕೆಲವು ಟೀಕೆಗಳಿವೆ. ಆದರೆ ಕೆಲವು ಸಮಯದಲ್ಲಿ ಇದು ಸಂಭವಿಸುವುದಿಲ್ಲ.
ಈ ಹಾಲಿವುಡ್ ಸ್ಟಾರ್ ನಟನ ಮೇಲೆ ಕ್ರಶ್ ಇತ್ತು
ಅರ್ಜುನ್ ಜೊತೆ ಮೊದಲ ಕ್ರಶ್ ಗೆ ಸಂಬಂಧಿಸಿದಂತೆ ಮಾತನಾಡಿದ ಜಾಕ್ವೆಲಿನ್, ನನಗೆ ಶಾಲೆಯಲ್ಲಿ ಓದುವಾಗ ಮೊದಲ ಕ್ರಶ್ ಆಗಿದ್ದು ಎಂದು ಹೇಳಿದರು, ಆದರೆ ನಾನು ಅವರ ಹೆಸರನ್ನು ಹೇಳಲು ಸಾಧ್ಯವಿಲ್ಲ ಎಂದರು, ಹಾಲಿವುಡ್ ಸಿನಿಮಾಗಳಾದ 'ರೋಮಿಯೋ-ಜೂಲಿಯೆಟ್' ಮತ್ತು 'ಟೈಟಾನಿಕ್', 'ಬ್ಯಾಕ್‌ಸ್ಟ್ರೀಟ್ ಬಾಯ್ಸ್' ನೋಡಿದ ನಂತರ, ನನಗೆ ಲಿಯೊನಾರ್ಡೊ ಡಿಕಾಪ್ರಿಯೊ(Leonardo DiCaprio) ಮೇಲೆ ತುಂಬಾ ಕ್ರಶ್ ಆಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ : Actre Bhagyashree : 52 ನೇ ವಯಸ್ಸಿನಲ್ಲಿ ಬಿಕಿನಿ ಧರಿಸಿ ಸ್ವಿಮಿಂಗ್ ಫುಲ್ ನಲ್ಲಿ ಎಂಜಾಯ್ ಮಾಡಿದ ಬಾಲಿವುಡ್ ನಟಿ
ಈ ಕೆಲಸವನ್ನು ಎಂದಿಗೂ ಮಾಡಿಲ್ಲ
ಜಾಕ್ವೆಲಿನ್ ಫರ್ನಾಂಡೀಸ್ ಅರ್ಜುನ್ ಮುಂದೆ ತಾನು ಯಾವತ್ತೂ ಬ್ಲಾಕ್ ಡೇಟ್(Block Date) ಮಾಡಿಲ್ಲ ಎಂದು ಹೇಳಿದರು. ಈ ಚಾಟ್ ಶೋನಲ್ಲಿ ಅವರು ತಮ್ಮ ಆಹಾರ ಪದ್ಧತಿಯ ಬಗ್ಗೆ ಅನೇಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.