ಜೀ-ಕನ್ನಡದ ಜನಪ್ರಿಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ 2ನೇ ಆವೃತ್ತಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ಹಿಂದಿನ ಸೀಸನ್ ನಲ್ಲಿ ತೀರ್ಪುಗಾರರಾಗಿದ್ದ ನವರಸನಾಯಕ ಜಗ್ಗೇಶ್, ವಿಕಟಕವಿ ಯೋಗರಾಜ್ ಭಟ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಈ ಆವೃತ್ತಿಗೂ ತೀರ್ಪುಗಾರರಾಗಿದ್ದು ಮತ್ತೆ ಜೊತೆಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಕಾಮಿಡಿ ಕಿಲಾಡಿಗಳ ಮೊದಲ ಸೀಸನ್ ಬಿಂದಾಸ್ ಆಗಿ ಪೂರ್ಣಗೊಂಡಿತ್ತು. ನಂತರ ಜಗ್ಗೇಶ್ ಕಿಲಾಡಿ ಕುಟುಂಬದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ '8MM' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಯೋಗರಾಜ್ ಭಟ್ ತಮ್ಮ ನೂತನ ಚಿತ್ರದಲ್ಲಿ ತಲ್ಲೀನರಾಗಿದ್ದಾರೆ, ರಕ್ಷಿತಾ ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿರುವ 'ಡಾನ್ಸ್ ಕರ್ನಾಟಕ ಡಾನ್ಸ್' ಶೋನಲ್ಲಿ ತೀರ್ಪುಗಾರರಾಗಿದ್ದಾರೆ.


ಆದರೆ, ಈಗ ಎಲ್ಲರನ್ನೂ ಮತ್ತೆ ನಗಿಸಲು 'ಕಾಮಿಡಿ ಕಿಲಾಡಿಗಳು-2' ಪ್ರಾರಂಭವಾಗಲಿದ್ದು, ಈ ಸೀಸನ್ ನಲ್ಲಿಯೂ ನವರಸನಾಯಕ ಜಗ್ಗೇಶ್, ವಿಕಟಕವಿ ಯೋಗರಾಜ್ ಭಟ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಕಾಣಿಸಿಕೊಳ್ಳುವುದು ಎಲ್ಲರಲ್ಲೂ ಕುತೂಹಲವನ್ನು ಹೆಚ್ಚಿಸಿದೆ. 


ಸದ್ಯ ಕಾಮಿಡಿ ಕಿಲಾಡಿಗಳ ತಂಡ ಆಡಿಶನ್ ನಲ್ಲಿ ಬ್ಯುಸಿಯಾಗಿದ್ದು, ಕಾರ್ಯಕ್ರಮ ಯಾವಾಗ ಪ್ರಾರಂಭಗೊಳ್ಳಲಿದೆ ಎಂಬುದು ಮುಂದೆ ತಿಳಿಯಲಿದೆ.