Jailer audio launch pass : ಮುಂದಿನ ತಿಂಗಳು 10 ರಂದು ಬಿಡುಗಡೆಯಾಗಲಿರುವ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಸ್ಟಾರ್‌ ಡೈರೆಕ್ಟರ್‌ ನೆಲ್ಸನ್ ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಮಲಯಾಳಂ ನಟ ಮೋಹನ್‌ ಲಾಲ್‌ ನಟಿಸಿದ್ದಾರೆ.


COMMERCIAL BREAK
SCROLL TO CONTINUE READING

ಜೈಲರ್ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಸಿನಿಮಾದಲ್ಲಿ ರಜನಿಕಾಂತ್, ಮಲಯಾಳಂ ನಟ ಮೋಹನ್ ಲಾಲ್, ನಟ ಶಿವರಾಜ್ ಕುಮಾರ್ ಮತ್ತು ತೆಲುಗು ನಟ ಸುನೀಲ್ ನಟಿಸಿದ್ದಾರೆ. ಅಲ್ಲದೆ, ತಮನ್ನಾ, ರಮ್ಯಾ ಕೃಷ್ಣನ್, ಪ್ರಿಯಾಂಕಾ ಮೋಹನ್, ವಸಂತ ರವಿ ಮುಂತಾದ ಸ್ಟಾರ್‌ ಕಲಾವಿದರದಂಡೇ ಈ ಚಿತ್ರದಲ್ಲಿದೆ. ಚಿತ್ರದಲ್ಲಿ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ನಟ ರಜಿನಿ ನಿರ್ವಹಿಸಲಿದ್ದಾರೆ.


ಇದನ್ನೂ ಓದಿ: 'ಬೇಬಿ' ವೈಷ್ಣವಿಗೆ ಬಿಗ್‌ ಆಫರ್‌..! ಪ್ರಸಿದ್ಧ ಸಿನಿ ನಿರ್ಮಾಣ ಕಂಪನಿಯೊಂದಿಗೆ ಒಪ್ಪಂದ..?


ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾ, ಸೂಪರ್‌ ಹಿಟ್ ಆಗಿವೆ. 'ಕವಾಲಾ' ಹಾಡಂತೂ ಸಖತ್‌ ವೈರಲ್‌ ಆಗುತ್ತಿದೆ. ಈ ಹಾಡಿನಲ್ಲಿ ತಮನ್ನಾ  ನೃತ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಹಾಡಿನ ವಿಡಿಯೋ ರೀಲ್‌ಗಳು ವೈರಲ್‌ ಆಗುತ್ತಿವೆ.


ಆಸ್ಪತ್ರೆಯ ಬೆಡ್‌ ಮೇಲೆ ಕದಲದ ಸ್ಥಿತಿಯಲ್ಲಿ ಮೌನಿ ರಾಯ್..! 'ಬ್ರಹ್ಮಾಸ್ತ್ರ' ಸುಂದರಿಗೆ ಏನಾಯ್ತು..?


ಇನ್ನು ಜುಲೈ 28ರಂದು ಸಂಜೆ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಜೈಲರ್‌ ಸಿನಿಮಾದ ಆಡಿಯೋ ರಿಲೀಸ್‌ ಇವೆಂಟ್‌ ನಡೆಯಲಿದೆ. ಈ ಸಮಾರಂಭಕ್ಕೆ ಅಭಿಮಾನಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆ ನಿಟ್ಟಿನಲ್ಲಿ ಸನ್ ಪಿಕ್ಚರ್ಸ್ ಅಭಿಮಾನಿಗಳಿಗೆ 1000 ಉಚಿತ ಪಾಸ್ ನೀಡುವುದಾಗಿ ಟ್ವಿಟರ್ ನಲ್ಲಿ ಪ್ರಕಟಿಸಿದೆ. 1000 ಉಚಿತ ಪಾಸ್‌ಗಳು ಸಿದ್ಧವಾಗಿವೆ... ನೀವೂ ಸಿದ್ಧರಾಗಿ... ಭೇಟಿಯಾಗೋಣ. ನಾಳೆ (ಜುಲೈ 24) ಮಧ್ಯಾಹ್ನ 1 ಗಂಟೆಯಿಂದ ಪಾಸ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ವೆಬ್ ಸೈಟ್ ಲಿಂಕ್ ನೀಡಲಾಗಿದೆ. ಇದರಲ್ಲಿ ನೋಂದಾಯಿಸಿ 500 ಜನರಿಗೆ ಈ ಪಾಸ್ ನೀಡಲಾಗುವುದು, ಪ್ರತಿ ವ್ಯಕ್ತಿಗೆ 2 ಪಾಸ್ ಎಂದು ತಿಳಿಸಿದೆ. 


ಜೈಲರ್ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಯಸುವವರು ನಾಳೆ ಮಧ್ಯಾಹ್ನ 1 ಗಂಟೆಗೆ ಸನ್ ಪಿಕ್ಚರ್ಸ್ ಒದಗಿಸುವ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಪಾಸ್‌ಗಳನ್ನು ಕಾಯ್ದಿರಿಸಬಹುದಾಗಿದೆ. ಅಲ್ಲದೆ ಈ ಕಾರ್ಯಕ್ರಮವನ್ನು ಸನ್ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.