Jailer Box Office Collections: ರಜನಿಕಾಂತ್ ಅಭಿನಯದ ಆಕ್ಷನ್ ಎಂಟರ್‌ಟೈನರ್ ಜೈಲರ್ ಶುಕ್ರವಾರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ 300 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ. ವ್ಯಾಪಾರ ಮೂಲಗಳ ಆರಂಭಿಕ ಅಂದಾಜಿನ ಪ್ರಕಾರ ಜೈಲರ್ ಚಿತ್ರ ಆಗಸ್ಟ್ 24 ರಂದು ಎಲ್ಲಾ ಭಾಷೆಗಳು ಸೇರಿ ರೂ. 3 ಕೋಟಿ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತೀಯ ಬಾಕ್ಸ್ ಆಫೀಸ್ ಒಟ್ಟು ರೂ. 298.75 ಕೋಟಿ. ಜೈಲರ್ ಚಿತ್ರವು ಬಿಡುಗಡೆಯಾದಾಗಿನಿಂದ ವಿಶ್ವದಾದ್ಯಂತ ಕಲೆಕ್ಷನ್ 582.65 ಕೋಟಿಗಳನ್ನು ತಲುಪಿದೆ.


COMMERCIAL BREAK
SCROLL TO CONTINUE READING

ಕಾಲಿವುಡ್ ಚಿತ್ರ ಅಂಕಣಗಾರ್ತಿ ಮನೋಬಾಲಾ ವಿಜಯಬಾಲನ್ ಟ್ವಿಟ್ಟರ್ ಮೂಲಕ ಬಹಿರಂಗಪಡಿಸಿರುವ ವಿವರಗಳ ಪ್ರಕಾರ.. ಜೈಲರ್ ಚಿತ್ರ ಮೊದಲ ವಾರದಲ್ಲಿ 450.80 ಕೋಟಿ ಮತ್ತು 2 ನೇ ವಾರದಲ್ಲಿ 124.18 ಕೋಟಿ ಕಲೆಕ್ಷನ್ ಮಾಡಿದೆ. 


ಮೊದಲ ವಾರ - ರೂ. 450.80 ಕೋಟಿ


ಎರಡನೇ ವಾರ - ರೂ. 124.18 ಕೋಟಿ


ಮೂರನೇ ವಾರ - ರೂ. 7.67 ಕೋಟಿ


ಒಟ್ಟು - ರೂ. 582.65 ಕೋಟಿ


ಮನೋಬಾಲಾ ಅವರ ಬಾಕ್ಸ್ ಆಫೀಸ್ ವಿವರಗಳ ಪ್ರಕಾರ, ಜೈಲರ್ ಚಿತ್ರದ ವಿಶ್ವಾದ್ಯಂತ ಕಲೆಕ್ಷನ್ ರೂ. 600 ಕೋಟಿ ಗಡಿ ಮುಟ್ಟುವ ಹಂತದಲ್ಲಿದೆ. 2.0 ಸಿನಿಮಾದ ನಂತರ ಜೈಲರ್ ಸಿನಿಮಾ ಮತ್ತೆ ಈ ಗುರುತನ್ನು ಮುಟ್ಟಿದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2.0 ಚಿತ್ರ ಈ ದಾಖಲೆಯನ್ನು ಹೊಂದಲು ಕೇವಲ 9 ದಿನಗಳನ್ನು ತೆಗೆದುಕೊಂಡಿತು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್ ಚಿತ್ರ 48 ಕೋಟಿ ರೂಪಾಯಿಗಳ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚು ಏಕದಿನ ಕಲೆಕ್ಷನ್‌ಗಳಲ್ಲಿ ಒಂದಾಗಿದೆ. 


ಇದನ್ನೂ ಓದಿ: ಈ ನಟಿ 200 kg ಚಿನ್ನಾಭರಣ ಧರಿಸಿ ನಟಿಸುವಾಗ ಸುತ್ತಲೂ ಇದ್ದರು 50 ಭದ್ರತಾ ಸಿಬ್ಬಂದಿ!!


ಈ ಚಿತ್ರದ ಮೂಲ ತಮಿಳು ಆವೃತ್ತಿಯನ್ನು ಹಿಂದಿ, ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಡಬ್ ಮಾಡಲಾಗಿದೆ. ಆಗಸ್ಟ್ 10 ರಂದು ಬಿಡುಗಡೆಯಾದ ಜೈಲರ್ ಚಿತ್ರವು 'OMG 2' ಮತ್ತು 'ಗದರ್ 2: ಏಕ್ ಕಥಾ' ಚಿತ್ರಗಳೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿ ನಡೆಸುತ್ತಿದೆ ಮತ್ತು ಹೆಚ್ಚು ಕಲೆಕ್ಷನ್‌ಗಳನ್ನು ಪಡೆಯುತ್ತಿದೆ.


ಜೈಲರ್ ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಜೈಲರ್ ಪಾತ್ರದಲ್ಲಿ ನಟಿಸಿದ್ದಾರೆ. ಗ್ಯಾಂಗ್ ತನ್ನ ನಾಯಕನನ್ನು ಜೈಲಿನಿಂದ ಬಿಡಿಸಲು ಪ್ರಯತ್ನಿಸಿದಾಗ ಏನಾಗುತ್ತದೆ ಎಂಬುದು ಜೈಲರ್ ಚಿತ್ರದ ಕಥೆ. ವಿನಾಯಕನ್, ರಮ್ಯಾ ಕೃಷ್ಣ, ವಸಂತ ರವಿ, ಸುನೀಲ್, ಯೋಗಿಬಾಬು ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಮೋಹನ್ ಲಾಲ್, ಶಿವರಾಜ್ ಕುಮಾರ್, ತಮನ್ನಾ ಭಾಟಿಯಾ, ಜಾಕಿ ಶ್ರಾಫ್, ನಾಗಬಾಬು, ಮಕರಂದ್ ದೇಶಪಾಂಡೆ ಇತರ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದ ಜೈಲರ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಒಟ್ಟಿನಲ್ಲಿ ಜೈಲರ್ ಚಿತ್ರದ ಕಲೆಕ್ಷನ್ ಮತ್ತೊಮ್ಮೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಸ್ಟಾಮಿನಾವನ್ನು ತೋರಿಸಿದೆ. 


ಇದನ್ನೂ ಓದಿ: ಧೋನಿಗೆ ಅಂದು ನಟ ಅಂಬರೀಶ್ ಕೊಟ್ಟ ಹಣ ಎಷ್ಟು? ಕಷ್ಟದಲ್ಲಿ ಕ್ರಿಕೆಟಿಗನ ಕೈ ಹಿಡಿದ ಮಂಡ್ಯದ ಗಂಡು! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.