Anirudh Ravichander Property: ಅನಿರುದ್ಧ್ 2011 ರಲ್ಲಿ ಬಿಡುಗಡೆಯಾದ 3 ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರ ಸಂಗೀತ ಪ್ರತಿಭೆಯನ್ನು ಮೆಚ್ಚಿದ ನಟ ಧನುಷ್ ಅವರನ್ನು ತಮ್ಮ ಚಿತ್ರದ ಮೂಲಕ ಪರಿಚಯಿಸಿದರು ಸಿನಿರಂಗಕ್ಕೆ ಪರಿಚಯಿಸಿದರು. ಈ ಚಿತ್ರದಲ್ಲಿ ಅನಿರುದ್ಧ್ ಅವರ ಹಾಡು 'Y ದಿಸ್ ಕೊಲವೇರಿ' ನವೆಂಬರ್ 2011 ರಲ್ಲಿ ಬಿಡುಗಡೆಯಾಗಿ, ಅದೇ ದಿನದಲ್ಲಿ ವೈರಲ್ ಆಗಿತ್ತು.


COMMERCIAL BREAK
SCROLL TO CONTINUE READING

ಮೊದಲ ಚಿತ್ರದಲ್ಲೇ ತಮ್ಮ ಸಂಪೂರ್ಣ ಪ್ರತಿಭೆ ತೋರಿದ ಅನಿರುದ್ಧ್ ಗೆ ಕಾಲಿವುಡ್ ನಲ್ಲಿ ಧನುಷ್ ಸತತ ಅವಕಾಶಗಳನ್ನು ನೀಡಿದರು. ಅನಿರುದ್ಧ್ ಸಂಯೋಜಿಸಿದ ಎಲ್ಲಾ ಹಾಡುಗಳು ಹಿಟ್ ಆದ ನಂತರ, ವಿಜಯ್ ಅವರ ಚಿತ್ರಕ್ಕೆ ಸಂಗೀತ ಸಂಯೋಜಿಸಲು ಗ್ರೀನ್‌ ಸಿಗ್ನಲ್‌ ನೀಡಿದ್ದರು. 


ಇದನ್ನೂ ಓದಿ-Rajinikanth: ಇದು ರಜನಿ ಅವರ ಕೊನೆಯ ಚಿತ್ರವೇ? ರಹಸ್ಯ ಬಿಚ್ಚಿಟ್ಟ ಖ್ಯಾತ ನಿರ್ದೇಶಕ..!


ಈಗ ಅನಿರುದ್ಧ್ ತಮಿಳು ಚಿತ್ರರಂಗದ ಮ್ಯೂಸಿಕ್ ಸೆನ್ಸೇಷನ್. ತಮಿಳಿನಲ್ಲಿ ಮಾತ್ರವಲ್ಲದೆ ತೆಲುಗು, ಹಿಂದಿಯಂತಹ ಭಾಷೆಗಳಲ್ಲಿಯೂ ಅವರಿಗೆ ಸಿನಿಮಾ ಅವಕಾಶಗಳು ಒಲಿದು ಬರುತ್ತಿವೆ. ಅನಿರುದ್ಧ್ ಬಳಿ ಸದ್ಯ ತಮಿಳಿನ ಟಾಪ್ ಹೀರೋಗಳಾದ ವಿಜಯ್, ಅಜಿತ್, ರಜನಿ ಮತ್ತು ಕಮಲ್ ಅವರ 4 ಚಿತ್ರಗಳಿವೆ. ಸದ್ಯ ವಿಜಯ್ ಅವರ ಲಿಯೋ ಬಿಡುಗಡೆಗೆ ರೆಡಿಯಾಗಿದೆ. ಪ್ರಸ್ತುತ ಕಾಲಿವುಡ್‌ನಲ್ಲಿ ಅನಿರುದ್ಧ್ ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆಯಲ್ಲಿ ಮಿಂಚಲಿದ್ದಾರೆ.


ಇದನ್ನೂ ಓದಿ-'ಚಿಕ್ಕಿಯ ಮೂಗುತಿ' ಚಿತ್ರದ ಪವರ್ ಫುಲ್ ಟೀಸರ್ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್


ಈ ಮಧ್ಯ ಸಂಗೀತ ಸಂಯೋಜಕ ಅನಿರುದ್ಧ್ ಇಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಾಲಿವುಡ್, ಬಾಲಿವುಡ್, ಟಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದ ಗಣ್ಯರು ಅವರಿಗೆ ಅಭಿನಂದನೆಗಳ ಸುರಿಮಳೆಗೈಯುತ್ತಿದ್ದಾರೆ. ಅವರು ತಮ್ಮ ಹುಟ್ಟುಹಬ್ಬದ ಉಡುಗೊರೆಯಾಗಿ ತಮ್ಮ ಅಭಿಮಾನಿಗಳಿಗೆ ಲಿಯೋ ಚಿತ್ರವನ್ನು ನೀಡಿದ್ದಾರೆ. ಚಿತ್ರ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ. ಚಿತ್ರ ಹಿಟ್ ಆಗಲಿದೆ ಎಂದು ಈಗಾಗಲೇ ಅನಿರುದ್ಧ್ ಹೇಳಿರುವುದರಿಂದ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.


33ರ ಹರೆಯದಲ್ಲಿ ಅನಿರುದ್ಧ್ ಬಹುಕೋಟಿ ಆಸ್ತಿಗೂ ಒಡೆಯ. ಅವರ ಆಸ್ತಿ ಮೌಲ್ಯ ರೂ.50 ಕೋಟಿಗೂ ಹೆಚ್ಚು ಎನ್ನಲಾಗಿದೆ. ಅನಿರುದ್ಧ್ ಪ್ರಸ್ತುತ ಕಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಂಗೀತ ಸಂಯೋಜಕರಾಗಿದ್ದಾರೆ. ಒಂದು ಚಿತ್ರಕ್ಕೆ ರೂ.10 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ. ಅನಿರುದ್ಧ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಜೈಲರ್ ಗೆಲುವಿನ ನಂತರ ಕಲಾನಿಧಿ ಮಾರನ್ ಇತ್ತೀಚೆಗೆ ಪೋರ್ಷೆ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.