Jailer: ಆರಂಭದಲ್ಲಿ ಜೈಲರ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರಂತೆ ಸೂಪರ್ ಸ್ಟಾರ್.. ಕಾರಣ ಏನು ಗೊತ್ತಾ?
Rajanikath: ನಟ ರಜನಿಕಾಂತ್ ಅಭಿನಯದ ಜೈಲರ್ ಚಿತ್ರ 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ನ ದಾಖಲೆಗಳನ್ನು ಧೂಳಿಪಟ ಮಾಡಿದೆ. ಸದ್ಯ ಈ ಸಿನಿಮಾದ ಬಗ್ಗೆ ಮತ್ತೊಂದು ಬಿಸಿ ಬಿಸಿ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
Jailer: ನಟ ರಜನಿಕಾಂತ್ ಅವರ ಬಹುನಿರೀಕ್ಷಿತ ಜೈಲರ್ ಸಿನಿಮಾ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡಿತ್ತು. ವಿಭಿನ್ನ ಪಾತ್ರವರ್ಗದಿಂದ ಅಭಿಮಾನಿಗಳ ಗಮನ ಸೆಳೆದ ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ತಮನ್ನಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ನಟ ರಜನಿಕಾಂತ್ ಜೈಲರ್ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಈ ಚಿತ್ರ ವಿಮರ್ಶಕರಿಂದ ಅತ್ಯುತ್ತಮ ವಿಮರ್ಶೆಗಳನ್ನು ಪಡೆಯುತ್ತಾ ಭರ್ಜರಿ ಕಲೆಕ್ಷನ್‌ನ್ನು ಸಹ ಮಾಡಿತ್ತು. ಹೀಗೆ ಉತ್ತಮ ರೆಸ್ಪಾನ್ಸ್ ಪಡೆದುಕೊಂಡ ಜೈಲರ್ ಸಿನಿಮಾ ಒಟ್ಟು 700 ಕೋಟಿ ರೂಗಿಂತ ಹೆಚ್ಚು ಕಲೆಕ್ಷನ್ ಮಾಡಿ ಗೆದ್ದು ಬೀಗಿದೆ.
ನೆಲ್ಸನ್ ದಿಲೀಪ್‌ಕುಮಾರ್ ಚಿತ್ರಕಥೆ ಬರೆದು ಅಭಿಮಾನಿಗಳನ್ನು ಸೆಳೆದ ಈ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಟಿಸಿದ್ದರು. ಇವರ ಪಾತ್ರಕ್ಕೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ದೊರಕಿತ್ತು. ಸದ್ಯ ರಜನಿಕಾಂತ್ ಈ ಜೈಲರ್ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು ಎನ್ನುವ ಚರ್ಚೆಯೊಂದು ಶುರುವಾಗಿದೆ. ಹಾಗಾದ್ರೆ ಇದಕ್ಕೆ ಕಾರಣವೇಣಿರಬಹುದು ಅಂತೀರಾ ಮುಂದೆ ಓದಿ...
ಈ ಹಿಂದೆಯೇ ನೆಲ್ಸನ್ ತೆಲುಗಿನ ಸ್ಟಾರ್ ನಟ ಚಿರಂಜೀವಿ ಅವರಿಗಾಗಿಯೇ ಈ ಚಿತ್ರದ ಕಥೆಯನ್ನು ತಯಾರಿಸಿದ್ದರು ಎಂದು ಈಗ ವರದಿಯಾಗಿದ್ದು, ನಿರ್ದೇಶಕ ಈ ಚಿತ್ರದ ಕಥೆಯನ್ನು ಚಿರಂಜೀವಿ ಅವರಿಗೆ ಹೇಳಿದಾಗ, ಕಥೆ ಕೇಳಿದ ಚಿರಂಜೀವಿ, ಚಿತ್ರದಲ್ಲಿ ಹಾಡುಗಳಿಲ್ಲ, ರೊಮ್ಯಾನ್ಸ್ ದೃಶ್ಯಗಳಿಲ್ಲ ಎಂದು ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದರಂತೆ. ಇದರ ಬೆನ್ನಲ್ಲೇ ನೆಲ್ಸನ್ ಈ ಕಥೆಯನ್ನು ರಜನಿ ಬಳಿ ಹೇಳಿದ್ದರಂತೆ ಆಗ ರಜನಿ ಸಹ ಚಿತ್ರದಲ್ಲಿ ನಟಿಸಲು ಹಿಂಜರಿದಿದ್ದರೂ ಎಂದು ಹೇಳಾಗುತ್ತಿದೆ.
ಇನ್ನು ಈ ಜೈಲರ್ ಸಿನಿಮಾ ಸದ್ಯ ಸೂಪರ್ ಹಿಟ್ ಆಗಿದದ್ದು, 700 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗಿದೆ. ಈ ಚಿತ್ರದ ಗೆಲುವಿಗೆ ಕಾರಣರಾದ ಎಲ್ಲರಿಗೂ ಸನ್ ಪಿಕ್ಚರ್ಸ್ ಮಾಲೀಕ ಕಲಾನಿಧಿ ಮಾರನ್ ಅವರು ಚಿತ್ರದ ಪ್ರತಿಯೊಬ್ಬ ಕಲಾವಿದರಿಗೂ ಉಡುಗೊರೆ ನೀಡಿ ಚಿತ್ರದ ಯಶಸ್ಸನ್ನು ಸಂಭ್ರಮಿಸಿದ್ದಾರೆ.
ಇದನ್ನೂ ಓದಿ-Review : ನೆನ್ನೆಯಷ್ಟೇ ತೆರೆಕಂಡ ʼಜಾನೇ ಜಾನ್ʼ ಸಿನಿಮಾ ಹೇಗಿದೆ, ಇಲ್ಲಿದೆ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.