ನವದೆಹಲಿ: ‘ಅವತಾರ್: ದಿ ವೇ ಆಫ್ ವಾಟರ್’ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ್ದು, ವಿಶ್ವದಾದ್ಯಂತ $1 ಬಿಲಿಯನ್ ಗಳಿಕೆ ಮಾಡಿದೆ. ಕೇವಲ 14 ದಿನಗಳಲ್ಲಿ ಅತ್ಯಂತ ವೇಗವಾಗಿ ಈ ಮೈಲಿಗಲ್ಲು ಸಾಧಿಸಿದ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಸೆಂಬರ್ 16ರಂದು ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾದ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಈ ಸಿನಿಮಾ ಭಾರತದಲ್ಲೇ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ.


COMMERCIAL BREAK
SCROLL TO CONTINUE READING

ಕ್ರಿಸ್‌ಮಸ್ ಸಮಯದಲ್ಲಿ ಬಿಡುಗಡೆಯಾದ ರಣವೀರ್ ಸಿಂಗ್ ಅವರ ‘ಸರ್ಕಸ್’ ಚಿತ್ರವನ್ನು ‘ಅವತಾರ್-2’ ಧೂಳಿಪಟ ಮಾಡಿದೆ. ಡಿಸೆಂಬರ್ 30ರ ಶುಕ್ರವಾರ 10.50 ಕೋಟಿ ರೂ. ಕೆಲೆಕ್ಷನ್ ಮಾಡುವ ಮೂಲಕ ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್‍ನಲ್ಲಿ ಒಟ್ಟು 304 ಕೋಟಿ ರೂ.ಗಳಿಕೆ ಮಾಡಿ ದಾಖಲೆ ನಿರ್ಮಿಸಿದೆ.


ಇದನ್ನೂ ಓದಿ: Kiccha Sudeep : ಬಿಗ್‌ ಬಾಸ್‌ ವೇದಿಕೆ ಮೇಲೆ ಕಣ್ಣೀರಿಟ್ಟ ಕಿಚ್ಚ! ಯಾಕೆ ಗೊತ್ತಾ?


ಬಾಕ್ಸ್ ಆಫೀಸ್ ಕಲೆಕ್ಷನ್ಸ್ ದಾಖಲೆ!


‘ಅವತಾರ್-2’ ಶೀಘ್ರವೇ 2022ರಲ್ಲಿ ಬಿಡುಗಡೆಯಾದ ‘ಟಾಪ್ ಗನ್: ಮೇವರಿಕ್’ ಅತ್ಯಧಿಕ ಗಳಿಕೆಯ(770 ಮಿಲಿಯನ್ ಡಾಲರ್) ಅಂತಾರಾಷ್ಟ್ರೀಯ ಸಿನಿಮಾದ ದಾಖಲೆಯನ್ನು ಮುರಿಯಲಿದೆ. ವರದಿಗಳ ಪ್ರಕಾರ ‘ಅವತಾರ್2’ ‘ಅವೆಂಜರ್ಸ್ ಎಂಡ್‌ಗೇಮ್‌’ನ ಭಾರತದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಅಂತಾರಾಷ್ಟ್ರೀಯ ಚಲನಚಿತ್ರವೆಂಬ ದಾಖಲೆ ಮುರಿಯುವ ಹಾದಿಯಲ್ಲಿದೆ. ‘ಅವೆಂಜರ್ಸ್ ಎಂಡ್‌ಗೇಮ್’ ಭಾರತದಲ್ಲಿ 373 ಕೋಟಿ ರೂ. ಗಳಿಸಿತ್ತು. ಇದೀಗ ‘ಅವತಾರ್-2’ ಭಾರತದಲ್ಲಿ ಎಂಡ್‌ಗೇಮ್‌ನ ಆರಂಭಿಕ ವಾರಾಂತ್ಯದ ಗಳಿಕೆಯ ದಾಖಲೆ ಮುರಿಯಲು 40 ಕೋಟಿ ರೂ. ಮಾತ್ರ ಗಳಿಸಬೇಕಿದೆ. ಹೆಚ್ಚಿನ ಸಂಖ್ಯೆಯ ಜನರು ಈ ಸಿನಿಮಾ ವೀಕ್ಷಿಸಲು ಥಿಯೇಟರ್‍ಗೆ ಆಗಮಿಸಿದರೆ ಮುಂದಿನ ವಾರವೇ ‘ಎಂಡ್‌ಗೇಮ್‌’ನ ದಾಖಲೆಯನ್ನು ಎಂಡ್ ಮಾಡುವ ಸಾಧ್ಯತೆಯಿದೆ.


20th Century Studios ಮತ್ತು ಡಿಸ್ನಿ ನಿರ್ಮಾಣದ ‘ಅವತಾರ್-2’ ಸಿನಿಮಾ ಬಿಡುಗಡೆ ದಿನದಿಂದಲೇ ಬಾಕ್ಸ್ ಆಫೀಸ್‍ನಲ್ಲಿ ಕಮಾಲ್ ಮಾಡುತ್ತಿದೆ. ಈ ಮೂಲಕ ಅವತಾರ್ ಮೊದಲ ಭಾಗ 19 ದಿನಗಳಲ್ಲಿ ಗಳಿಸಿದ್ದ 1 ಬಿಲಿಯನ್ ಡಾಲರ್ ದಾಖಲೆಯನ್ನು ಸರಿಗಟ್ಟಿದೆ. 2009ರಲ್ಲಿ ಬಿಡುಗಡೆಯಾಗಿದ್ದ ‘ಅವತಾರ್-1’ ಸಾರ್ವಕಾಲಿಕ ಅತಿಹೆಚ್ಚು ಗಳಿಕೆಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 10 ವರ್ಷ ಕಳೆದರೂ ತನ್ನ ದಾಖಲೆಯನ್ನು ಹಾಗೆಯೇ ಉಳಿಸಿಕೊಂಡಿದೆ. 2019ರಲ್ಲಿ ತೆರೆಕಂಡ ಮಾರ್ವೆಲ್‍ನ ‘ಅವೆಂಜರ್ಸ್: ಎಂಡ್‍ಗೇಮ್‍’ 2ನೇ ಸ್ಥಾನದಲ್ಲಿದ್ದರೆ, 3ನೇ ಸ್ಥಾನದಲ್ಲಿ ಜೇಮ್ಸ್ ಕ್ಯಾಮರೂನ್ ಅವರೇ ನಿರ್ದೇಶಿಸಿದ ‘ಟೈಟಾನಿಕ್’ ಇದೆ.


ಇದನ್ನೂ ಓದಿ: BBK 9 Winner: ರೂಪೇಶ್ ಶೆಟ್ಟಿ ಮುಡಿಗೆ ಬಿಗ್ ಬಾಸ್ ಕಿರೀಟ, ರನ್ನರ್‌ ಅಪ್‌ ಆದ ರಾಕೇಶ್‌ ಅಡಿಗ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.