Barma Movie : ಭರ್ಜರಿ ಚೇತನ್ ನಿರ್ದೇಶನದ ಹೊಸ ಸಿನಿಮಾ ಟೈಟಲ್ ರಿವೀಲ್‌ ಆಗಿದೆ. ಜೇಮ್ಸ್ ನಂತರ ಡೈರೆಕ್ಟರ್ ಚೇತನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಜೇಮ್ಸ್‌ ಸಿನಿಮಾ ಸಿಕ್ಕಾಪಟ್ಟೆ ಹಿಟ್‌ ಆಗಿತ್ತು. ಇದೀಗ ಮತ್ತೊಂದು ಕಮರ್ಷಿಯಲ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಚೇತನ್ ಕುಮಾರ್ ಬರುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಪ್ರತಿ ಸಿನಿಮಾಗೂ ಡಿಫ್ರೆಂಟ್ ಹಾಗೂ ಕ್ಯಾಚಿ ಟೈಟಲ್ ಫಿಕ್ಸ್ ಮಾಡೋ ನಿರ್ದೇಶಕ ಚೇತನ್‌, ಈ ಬಾರಿ ಇಂಟ್ರೆಂಸ್ಟಿಂಗ್ ಟೈಟಲ್ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿದ್ದಾರೆ. ಚಿತ್ರಕ್ಕೆ ‘ಬರ್ಮ’ ಅನ್ನೋ ಟೈಟಲ್ ಇಡೋ ಮೂಲಕ ಕ್ಯೂರಿಯಾಸಿಟಿ ಮೂಡಿಸಿದ್ದಾರೆ.


ಟೈಟಲ್ ರಿವಿಲ್ ಗೂ ಮೊದಲೇ ಸಿನಿಮಾದ ಆಡಿಯೋ ರೈಟ್ಸ್ ಸೋಲ್ಡ್ ಔಟ್ ಆಗಿದೆ. ಐದು ಭಾಷೆಯಲ್ಲಿ ತೆರೆಗೆ ಬರ್ತಿರೋ ‘ಬರ್ಮ’ ಸಿನಿಮಾ ಆಡಿಯೋ ರೈಟ್ಸ್ ಡಿ ಬೀಟ್ಸ್ ಕಂಪನಿಗೆ ಸೇಲ್ ಆಗಿದೆ. ಬರ್ಮ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗ್ತಿರೋ ಚಿತ್ರವಾಗಿದೆ.


ಇದನ್ನೂ ಓದಿ: ಜೈಲರ್ 14 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಇದು.. 1000 ಕೋಟಿ ಕ್ಲಬ್ ಸೇರುತ್ತಾ ತಲೈವಾ ಸಿನಿಮಾ?


ಶ್ರೀ ಸಾಯಿ ಆಂಜನೇಯ ಕಂಪನಿ ಪ್ರಸೆಂಟ್ ನಲ್ಲಿ ‘ಬರ್ಮ’ ಸಿನಿಮಾ ನಿರ್ಮಾಣವಾಗಲಿದೆ. ‘ಬರ್ಮ’ ಸಿನಿಮಾದಲ್ಲಿ ವಿ ಹರಿಕೃಷ್ಣ ಹಾಗೂ ಚೇತನ್ ಕುಮಾರ್ ಕಾಂಬಿನೇಷನ್ ಮತ್ತೆ ಒಂದಾಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. 


ಈಗಾಗಲೇ ಹಿಟ್ ಸಿನಿಮಾಗಳನ್ನ ನೀಡಿರೋ ಚೇತನ್ ಹಾಗೂ ಹರಿಕೃಷ್ಣ ಜೋಡಿ ಈ ಸಿನಿಮಾದಲ್ಲೂ ಕಮಾಲ್‌ ಮಾಡುವ ನಿರೀಕ್ಷೆಯಿದೆ. ‘ಬರ್ಮ’ ಸಿನಿಮಾ ಮೂಲಕ ‘ ರಕ್ಷ್ ರಾಮ್ ’ ಸಿನಿಮಾರಂಗಕ್ಕೆ ಅದ್ದೂರಿ ಎಂಟ್ರಿ ಕೊಡಲಿದ್ದಾರೆ. ರಕ್ಷ್ ರಾಮ್ ಕಿರುತೆರೆಯ ಸ್ಟಾರ್ ಹೀರೋ ಆಗಿದ್ದಾರೆ.ಕಿರುತೆರೆಯಲ್ಲಿ 'ಪುಟ್ಟಗೌರಿ ಮದುವೆ'  ಹಾಗೂ 'ಗಟ್ಟಿಮೇಳ' ಸೀರಿಯಲ್ ಗಳಲ್ಲಿ ನಾಯಕನಾಗಿ ಮಿಂಚಿ  ಕನ್ನಡಿಗರ  ಹೃದಯದಲ್ಲಿ ತನ್ನದೇ  ಆದಂತಹ ವಿಭಿನ್ನ ಛಾಪು ಮೂಡಿಸಿದ್ದಾರೆ. ' ರಕ್ಷ್ ರಾಮ್ ಬರ್ಮ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ.


ಇದನ್ನೂ ಓದಿ: ಈ ಬಾಲಿವುಡ್ ನಟಿಯರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಎಷ್ಟು ಕೋಟಿ ಶುಲ್ಕ ಪಡೆಯುತ್ತಾರೆ ಗೊತ್ತೇ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.