ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಈಗಾಗಲೇ ನಾಲ್ಕೇ ದಿನಗಳಲ್ಲಿ ಬರೋಬ್ಬರಿ 100 ಕೋಟಿ ರೂ. ಗಳಿಕೆ ಮಾಡಿ ದೊಡ್ಡ ದಾಖಲೆ ಬರೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Kabza:'ಕಬ್ಜ' ಕೈ ಬಿಟ್ರಾ ಕಿಚ್ಚ ಸುದೀಪ್? ಸಿನಿಮಾ ಬಗ್ಗೆ ಹರಿದಾಡ್ತಿರುವ ಈ ಸುದ್ದಿ ನಿಜಾನಾ?


ಪುನೀತ್ ನಿಧನದ ನಂತರ ತೆರೆಕಂಡ ಈ ಸಿನಿಮಾವನ್ನು ಅಭಿಮಾನಿಗಳು ವಿಶೇಷವಾಗಿ ಸ್ವೀಕರಿಸಿದರು. ಮಾರ್ಚ್‌ 17ರಂದು ವಿಶ್ವಾದ್ಯಂತ ತೆರೆಗೆ ಬಂದಿದ್ದ ಈ ಸಿನಿಮಾ, ಈಗ ಓಟಿಟಿಗೆ ಬರಲು ಸಿದ್ಧವಾಗಿದೆ. 'ಜೇಮ್ಸ್' (James) ಸಿನಿಮಾದ ಓಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್ ಆಗಿದೆ. ಒಟ್ಟು ಐದು ಭಾಷೆಗಳಲ್ಲಿ ಈ ಸಿನಿಮಾದ ತೆರೆಕಂಡಿತ್ತು. 


'ಜೇಮ್ಸ್' ಚಿತ್ರದ ಓಟಿಟಿ ಹಕ್ಕುಗಳು ಸೋನಿ ಲೈವ್‌ಗೆ (Sony Live) ಸೇಲ್ ಆಗಿದ್ದು, ಏಪ್ರಿಲ್ 14ರಿಂದ ಪ್ರಸಾರ ಆಗಲಿದೆ. ಓಟಿಟಿ (OTT) ರಿಲೀಸ್ ಡೇಟ್ ಘೋಷಣೆ ಆಗಿದ್ದರೂ ಕೂಡ ಚಿತ್ರಮಂದಿರದಲ್ಲಿ 'ಜೇಮ್ಸ್' ಹವಾ ಮಾತ್ರ ಕಮ್ಮಿ ಆಗಿಲ್ಲ. ಪುನೀತ್ ರಾಜ್‌ಕುಮಾರ್ ಅವರ 'ಜೇಮ್ಸ್' ಸಿನಿಮಾ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ಸಿನಿಮಾವೂ ಮಾಡದ ಸಾರ್ವಕಾಲಿಕ ದಾಖಲೆ ಬರೆದಿದೆ. 


ಇದನ್ನೂ ಓದಿ: Sadasya:ಪ್ರೇಕ್ಷಕರನ್ನು ನಕ್ಕು ನಗಿಸಲು ಬರ್ತಿದ್ದಾನೆ 'ಸದಸ್ಯ'!


ಮೊದಲ ದಿನವೇ ಜೇಮ್ಸ್‌ ಸಿನಿಮಾ 30 ಕೋಟಿ ರೂ.ಗಳಿಗೂ ಅಧಿಕ ಲೂಟಿ ಮಾಡಿತ್ತು. 'ಜೇಮ್ಸ್' ತೆರೆಕಂಡ ಮೊದಲ ದಿನವೇ ವಿಶ್ವಾದ್ಯಂತ ಸುಮಾರು 4 ಸಾವಿರ ಪ್ರದರ್ಶನ ಕಂಡಿತ್ತು. ಇದೀಗ ಈ ಸಿನಿಮಾ ಓಟಿಟಿಗೆ ಬರುತ್ತಿದ್ದು, ಅಭಿಮಾನಿಗಳು ಕಾತುರರಾಗಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.