Janhvi Kapoor In Pushpa 2: ಬಾಲಿವುಡ್‌ ಸುರ ಸುಂದರಿ ಜಾನ್ವಿ ಕಪೂರ್ ಶೀಘ್ರದಲ್ಲೇ ಎನ್‌ಟಿಆರ್ ಅವರ ದೇವರ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ. ಈ ಸಿನಿಮಾದ ಜೊತೆಗೆ ತೆಲುಗಿನಿಂದ ಹಲವು ಆಫರ್ ಗಳನ್ನು ಜಾನ್ವಿ ಕಪೂರ್ ಪಡೆಯುತ್ತಿದ್ದಾರೆ. ಇದೀಗ ಈ ಬ್ಯೂಟಿ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಜಾನ್ವಿ ಕಪೂರ್ ಸದ್ಯ ಬಾಲಿವುಡ್‌ನಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಿರುವ ನಟಿ. ಮತ್ತೊಂದೆಡೆ, ರಾಮ್ ಚರಣ್ ಅವರ ಮುಂದಿನ ಚಿತ್ರದಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸದ್ಯ ಟಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿರುವ ಪುಷ್ಪಾ ಚಿತ್ರದಲ್ಲಿ ಈ ಬಾಲಿವುಡ್ ನಟಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.


ಸಮಂತಾ ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಊ ಅಂತಾವಾ ಉಹೂ ಅಂತಾವಾ ಹಾಡು ಈ ಸಿನಿಮಾದ ಹೈಲೈಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ಈ ಹಾಡಿನಂತೆಯೇ ಪುಷ್ಪ 2 ಚಿತ್ರದಲ್ಲಿಯೂ ದೇವಿ ಶ್ರೀ ಪ್ರಸಾದ್ ಹೊಸ ಐಟಂ ಸಾಂಗ್ ಕಂಪೋಸ್ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಐಟಂ ಸಾಂಗ್‌ಗೆ ಸ್ಟೆಪ್‌ ಹಾಕಲು ಜಾನ್ವಿ ಕಪೂರ್ ಆಯ್ಕೆಯಾಗುತ್ತಿದ್ದಾರೆ ಎಂಬ ಸುದ್ದಿ‌ ಹರಿದಾಡುತ್ತಿದೆ. ಆದರೆ ತೆಲುಗಿನಲ್ಲಿ ಕೆರಿಯರ್ ಆರಂಭಿಕ ಹಂತದಲ್ಲಿರುವ ಈ ಹೊತ್ತಿನಲ್ಲಿ ಜಾನ್ವಿ ಇಷ್ಟೊಂದು ರಿಸ್ಕ್ ತೆಗೆದುಕೊಳ್ಳುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ. 


ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಕೊಟ್ರು ಗುಡ್‌ ನ್ಯೂಸ್..‌ ಮದುವೆ ವದಂತಿ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಕ್ತು ಸರ್‌ಪ್ರೈಸ್‌.! 


ಯಾಕೆಂದರೆ ಪ್ರಾಕ್ಟಿಕಲ್ ಆಗಿ ಯೋಚಿಸಿದರೆ ಪುಷ್ಪ 1ರಲ್ಲಿ ಐಟಂ ಸಾಂಗ್ ಹಾಡಿದ ಸಮಂತಾ  ಈಗಾಗಲೇ ತೆಲುಗಿನಲ್ಲಿ ಉತ್ತಮ ಸ್ಟಾರ್ ಸ್ಟೇಟಸ್ ಹೊಂದಿದ್ದರು. ಎಲ್ಲಾ ನಾಯಕರ ಜೊತೆ ಸಿನಿಮಾ ಮಾಡಿದ ಅನುಭವ ಕೂಡ ಹೊಂದಿದ್ದರು. ಸಮಂತಾ ಇಮೇಜ್‌ಗೆ ಧಕ್ಕೆ ಆಗಿಲ್ಲ. ಆದರೆ ಇಲ್ಲಿ ಜಾನ್ವಿ ಹಾಗಲ್ಲ. ಜಾನ್ವಿ ಇನ್ನೂ ಈಗ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ದೇವರ ಚಿತ್ರಕ್ಕೂ ಮುನ್ನವೇ ಆಗಸ್ಟ್ 15 ರಂದು ಪುಷ್ಪ ಬಿಡುಗಡೆಯಾಗಲಿದೆ. 


ಹಾಗೊಂದು ವೇಳೆ ಪುಷ್ಪಾ 2 ಸಿನಿಮಾದಲ್ಲಿನ ಐಟಂ ಸಾಂಗ್ ಗೆ ಜಾನ್ವಿ ಒಪ್ಪಿಕೊಂಡರೆ ಅದರ ಪರಿಣಾಮ ಅವರ ಮುಂದಿನ ಸಿನಿಮಾಗಳ ಮೇಲೆ ಆಗಬಹುದೇ ಎಂಬುದು ಅವರ ಅಭಿಮಾನಿಗಳ ಆತಂಕವಾಗಿದೆ. ಈ ಹಾಡನ್ನು ಮೊದಲ ಲಿರಿಕಲ್ ವಿಡಿಯೋವನ್ನಾಗಿ ಬಿಡುಗಡೆ ಮಾಡಲು ಮೈತ್ರಿ ತಂಡ ಯೋಚಿಸುತ್ತಿದೆ. ಆದರೆ ಈ ಹಾಡಿನ ಚಿತ್ರೀಕರಣ ಪೂರ್ಣಗೊಳ್ಳದ ಹೊರತು ಈ ಬಗ್ಗೆ ಸ್ಪಷ್ಟತೆ ಸಿಗುವುದಿಲ್ಲ.


ಇದನ್ನೂ ಓದಿ: ‌Rashmika Mandanna: ವಿದೇಶದಲ್ಲಿ ರಶ್ಮಿಕಾ ಕ್ರೇಜ್.. ನ್ಯಾಷನಲ್‌ ಕ್ರಷ್‌ಗೆ ಅದ್ಧೂರಿ ಸ್ವಾಗತ ನೀಡಿದ ಜಪಾನ್ ಫ್ಯಾನ್ಸ್! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.