Devara movie song : ಎನ್‌ಟಿಆರ್‌ ಅಭಿಮಾನಿಗಳು ಮಾತ್ರವಲ್ಲದೆ ಪ್ಯಾನ್‌ ವರ್ಲ್ಡ್‌ ಪ್ರೇಕ್ಷಕರೆಲ್ಲ ‘ದೇವರ’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೊರಟಾಲ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಅದರ ಜೊತೆಗೆ ಆರ್‌ಆರ್‌ಆರ್‌ ನಂತಹ ಭರ್ಜರಿ ಹಿಟ್ ನಂತರ ಜೂ.ಎನ್‌ಟಿಆರ್‌ ಅಭಿನಯದ ಚಿತ್ರ ಇದಾಗಿರುವುದರಿಂದ ಎಲ್ಲರೂ ಉತ್ಸುಕರಾಗಿದ್ದಾರೆ.


COMMERCIAL BREAK
SCROLL TO CONTINUE READING

ಈ ನಡುವೆ ಬಿಡುಗಡೆಯಾದ ಫಿಯರ್‌ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಒಂದೇ ಒಂದು ಹಾಡಿನಿಂದ ಚಿತ್ರದಲ್ಲಿ ರಕ್ತಪಾತದ ಯಾವ ರೇಂಜ್‌ಗೆ ಇರಲಿದೆ ಎಂಬುದು ಅರ್ಥವಾಗುತ್ತದೆ. ಅನಿರುದ್ಧ್ ಕಂಪೋಸ್ ಮಾಡಿರುವ ಈ ಹಾಡು ಇಂದಿಗೂ ಸದ್ದು ಮಾಡುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಎರಡನೇ ಸಿಂಗಲ್ ಬಿಡುಗಡೆಯಾಗಿದೆ. 


ಇದನ್ನೂ ಓದಿ:ಒಂದೇ ಒಂದು ಫೊಟೋ ಮೂಲಕ ಇಂಟರ್‌ನೆಟ್‌ ಅಲ್ಲಾಡಿಸಿದ ಅಕ್ಕ-ತಂಗಿ..! ಬಿಟೌನ್‌ ಸಿಸ್ಟರ್ಸ್‌ ಫೋಟೋ ವೈರಲ್‌


ಈ ಸುಮಧುರ ಗೀತೆ ಕೇಳುಗರನ್ನು ತಲ್ಲಣಗೊಳಿಸುತ್ತಿದೆ. ಶಿಲ್ಪಾ ರಾವ್ ಅವರ ಗಾಯನ, ರಾಮಜೋಗಯ್ಯ ಶಾಸ್ತ್ರಿಯವರ ಸಾಹಿತ್ಯ, ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ನಲ್ಲಿ ಅದ್ಭುತವಾಗಿ ಈ ಹಾಡು ಮೂಡಿಬಂದಿದೆ. ಸಧ್ಯ ಈ ಲಿರಿಕಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದೆ.. 


ದೇವರ ಚಿತ್ರದ ಮೊದಲ ಭಾಗ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗಲಿದೆ. ಆಚಾರ್ಯರಂತಹ ಅಲ್ಟ್ರಾ ಡಿಸಾಸ್ಟರ್ ನಂತರ ಕೊರಟಾಲ ಶಿವ ಈ ಚಿತ್ರದ ಮೂಲಕ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಖಳನಾಯಕನಾಗಿ ನಟಿಸುತ್ತಿದ್ದು, ಮೊದಲ ಬಾರಿಗೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಾಯಕಿಯಾಗಿ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.