Janhvi kapoor remuneration : ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ 'ಧಡಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸಾಲು ಸಾಲು ಸಿನಿಮಾ ಮಾಡಿದ್ರೂ ಸಹ ಈ ಸುಂದರಿಗೆ ಅಷ್ಟಾಗಿ ಕ್ರೇಜ್‌ ಸಿಗಲಿಲ್ಲ. ಆದರೂ ತನ್ನ ನಟನೆ ಮತ್ತು ಸೌಂದರ್ಯದ ಮೂಲಕ ವಿಶೇಷವಾದ ಗುರುತನ್ನು ಪಡೆದುಕೊಂಡಿದ್ದಾಳೆ. ಸಧ್ಯ ಯಂಗ್ ಟೈಗರ್ ಎನ್‌ಟಿಆರ್ ಜೊತೆ ತೆಲುಗು ಬೆಳ್ಳಿತೆರೆಯಲ್ಲಿ ಮಿಂಚಲು ಜಾನ್ವಿ ರೆಡಿಯಾಗಿದ್ದಾಳೆ. 


COMMERCIAL BREAK
SCROLL TO CONTINUE READING

ಹೌದು.. ಈಗಾಗಲೇ ಶ್ರೀದೇವಿ ಮಗಳಾಗಿ ಬಾಲಿವುಡ್ ನಲ್ಲಿ ಒಳ್ಳೆಯ ಹೆಸರು ಪಡೆದಿರುವ ಜಾನ್ವಿ, ಅಮ್ಮನಂತೆ ದಕ್ಷಿಣದ ಚಿತ್ರಗಳಲ್ಲೂ ನಟಿಸಲು ರೆಡಿಯಾಗಿದ್ದಾಳೆ. ಇದು ಶ್ರೀದೇವಿಯವರ ಆಸೆಯೂ ಸಹ ಹೌದು. ಅದಕ್ಕಾಗಿ ʼದೇವರʼ ಸಿನಿಮಾ ಮೂಲಕ ಅಮ್ಮನ ಆಸೆ ಈಡೇರಿಸಲು ಜಾನ್ವಿ ಈ ಆಫರ್‌ ಒಪ್ಪಿಕೊಂಡಿದ್ದಾಳೆ.


ಇದನ್ನೂ ಓದಿ:ಬಿಗ್‌ ಬಾಸ್ ಮನೆಯಲ್ಲಿ ಈ ಸ್ಪರ್ಧಿಗೆ ಕಪಾಳಮೋಕ್ಷ.. ತಾರಕಕ್ಕೇರಿದ ಜಡೆ ಜಗಳದಿಂದ ನಡೆದೇ ಹೋಯ್ತು ಬಿಗ್‌ ಫೈಟ್!‌


'ಆರ್‌ಆರ್‌ಆರ್' ಯಶಸ್ಸಿನೊಂದಿಗೆ ಎನ್‌ಟಿಆರ್ ಗ್ಲೋಬರ್‌ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. ಸಧ್ಯ ಕೊರಟಾಲ ಶಿವ ನಿರ್ದೇಶನದ ಪ್ಯಾನ್ ಸಿನಿಮಾ ‘ದೇವರ’ದಲ್ಲಿ ತಾರಕ್ ಎದುರು ಎನ್‌ಟಿಆರ್ ನಾಯಕಿಯಾಗಿ ಜಾನ್ವಿ ನಟಿಸುತ್ತಿದ್ದಾರೆ. ಆರ್‌ಆರ್‌ಆರ್‌ ನಂತರ ಎನ್‌ಟಿಆರ್‌ ಈ ಸಿನಿಮಾ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಹಾಗೇಯೆ ಜಾನ್ವಿ ಕಪೂರ್‌ ಸೌಥ್‌ ಸಿನಿರಂಗದಲ್ಲಿ ಅದೃಷ್ಟ ಪರಿಕ್ಷೆಗಿಳಿದಿದ್ದಾರೆ.


ಇನ್ನು ಎನ್‌ಟಿಆರ್‌ ಸಾಕಷ್ಟು ಗ್ಯಾಪ್‌ ನಂತರ ಈ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದು, ಈ ಚಿತ್ರದ ಮೇಲೆ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಇದೆ. ಈ ಹಿಂದೆ ಕೊರಟಾಲ ಮತ್ತು ಎನ್ ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ‘ಜನತಾ ಗ್ಯಾರೇಜ್’ ಸೂಪರ್‌ ಹಿಟ್‌ ಆಗಿತ್ತು. ‘ದೇವರ’ ಅದಕ್ಕಿಂತಲೂ ಹೆಸರು ಮಾಡಲಿದೆ ಎನ್ನುವುದು ಎನ್‌ಟಿಆರ್‌ ಅಭಿಮಾನಿಗಳು ಹಾರೈಕೆ.


ಇದನ್ನೂ ಓದಿ:ದರ್ಶನ್ ಹುಟ್ಟು ಹಬ್ಬಕ್ಕೆ 1 ತಿಂಗಳು ಮುನ್ನವೇ ಫ್ಯಾನ್ಸ್‌ ಬಳಿ ವಿಶೇಷ ಮನವಿ


ʼದೇವರʼ ಸಿನಿಮಾದಲ್ಲಿ ತಂದೆ ಮತ್ತು ಮಗನಾಗಿ ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ವಿಲನ್ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಚಿತ್ರದ ಗ್ಲಿಂಪ್ಸಸ್ ವಿಡಿಯೋಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದಲ್ಲದೆ, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.


ಜಾನ್ವಿ ಕಪೂರ್ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ 'ದೇವರ' ಚಿತ್ರಕ್ಕಾಗಿ ಈ ಚೆಲುವೆ ಕೋಟಿ ಕೋಟಿ ಹಣ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೌದು.. ಈ ಚಿತ್ರದಲ್ಲಿ ನಟಿಸಲು ಜಾನ್ವಿ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ಇದು ಅಧಿಕೃತವಲ್ಲ.


 


ದೇವರ ಚಿತ್ರಕ್ಕಾಗಿ ಜಾನ್ವಿ ಕಪೂರ್ ಅವರಿಗೆ 6 ಕೋಟಿ ಸಂಭಾವನೆ ನೀಡಲಾಗುತ್ತಿದೆ ಎಂಬ ಮಾಹಿತಿ ಚಿತ್ರತಂಡದಿಂದ ಬಂದಿದೆ. ದೇವರ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದ್ದು, ಈ ಕ್ರಮದಲ್ಲಿ ಎರಡೂ ಭಾಗಗಳಿಗೆ 6 ಕೋಟಿ ಕೊಡುತ್ತಿದ್ದೀರಾ? ಅಥವಾ ಪ್ರತಿ ಭಾಗಕ್ಕೆ 6 ಕೋಟಿ? ಎಂಬುದು ತಿಳಿಯಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.