Janhvi Kapoor : ಜಾನ್ವಿ ಕಪೂರ್ ಭಾವಿ ಪತಿ ಹೇಗಿರಬೇಕು ಗೊತ್ತೆ..? ಆ ಗುಣ ಇದ್ರೆ ಸುಂದರಿಗೆ ಓಕೆ ಅಂತೆ.. ನೋಡಿ..
Janhvi Kapoor on Marriage : ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜಾನ್ವಿ, ಇತ್ತೀಚಿಗೆ ಸಂದರ್ಶನವೊಂದರಲ್ಲಿ, ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.. ಚೆಲುವೆಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Janhvi Kapoor : ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈಗ ತೆಲುಗು ತೆರೆಗೆ ಪರಿಚಯವಾಗಲಿದ್ದಾರೆ. ಯಂಗ್ ಟೈಗರ್ ಎನ್ಟಿಆರ್ ಎದುರು ದೇವರ ಸಿನಿಮಾದಲ್ಲಿ ಈ ಚೆಲುವೆ ನಟಿಸಲಿದ್ದಾರೆ. ಅಲ್ಲದೆ, ರಾಮ್ ಚರಣ್ ಮುಂಬರುವ ಸಿನಿಮಾದಲ್ಲಿಯೂ ಸಹ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸದ್ಯದಲ್ಲೇ ಮಿಸ್ಟರ್ ಅಂಡ್ ಮಿಸಸ್ ಮಹಿ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ..
ಸದ್ಯ ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಜಾನ್ವಿ, ಇತ್ತೀಚಿಗೆ ಸಂದರ್ಶನವೊಂದರಲ್ಲಿ, ತಮ್ಮ ಭಾವಿ ಪತಿ ಹೇಗೆ ಇರಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.. ಹೌದು.. ಇತ್ತೀಚೆಗೆ, ಈ ಚಿತ್ರದ ಮೊದಲ ಸಿಂಗಲ್ ʼದೇಖಾ ತೇನುʼ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಜಾನ್ವಿಗೆ ಕುತೂಹಲಕಾರಿ ನಿಮ್ಮನ್ನ ಮದುವೆಯಾಗುವ ಹುಡುಗ ಹೇಗಿರಬೇಕು ಅಂತ ಪ್ರಶ್ನೆ ಕೇಳಲಾಯಿತು.
ಇದನ್ನೂ ಓದಿ: ಎನ್ಟಿಆರ್ ಅಭಿಮಾನಿಗಳಿಗೆ ಬಿಗ್ ನ್ಯೂಸ್..! ʼದೇವರʼ ಫಸ್ಟ್ ಸಾಂಗ್ ರಿಲೀಸ್ ಡೇಟ್ ಫಿಕ್ಸ್
ಅದಕ್ಕೆ ಜಾನ್ವಿ, ನನ್ನ ಕನಸುಗಳನ್ನು ಅವನ ಕನಸು ಎಂದು ತಿಳಿದು.. ಯಾವಾಗಲೂ ನನ್ನ ಪಕ್ಕದಲ್ಲಿ ಇರಬೇಕು. ಯಾವಾಗಲೂ ನನಗೆ ಸಂತೋಷವನ್ನು ನೀಡಬೇಕು. ನನ್ನನ್ನು ನಗುವಂತೆ ಮಾಡಬೇಕು. ನಾನು ಅಳುವಾಗ ನನ್ನ ಪಕ್ಕದಲ್ಲಿ ನಿಂತು ನನಗೆ ಧೈರ್ಯ ತುಂಬುವ ಗುಣಗಳಿರುವ ವ್ಯಕ್ತಿ ಬೇಕು ಅಂತ ಜ್ವನಿ ಹೇಳಿಕೊಂಡಿದ್ದಾರೆ. ಸದ್ಯ ಜಾನ್ವಿ ಮಾಡಿರುವ ಕಾಮೆಂಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಸಧ್ಯ ಜಾನ್ವಿ ಕೆಲ ವರ್ಷಗಳಿಂದ ಶಿಖರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಜೋಡಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಪಾರ್ಟಿಗಳು ಮತ್ತು ಸಿನಿಮಾ ಸಮಾರಂಭಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು, ಸುದ್ದಿಯಾಗುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.