Janhvi Kapoor : ಬಾಲಿವುಡ್‌ ಸುಂದರಿ ಜಾನ್ವಿ ಕಪೂರ್ ಹಿಟ್ ಸಿನಿಮಾ ನೀಡಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಧಡಕ್, ಮರಾಠಿ ಚಲನಚಿತ್ರ ಸೈರಾಟ್‌ನ ರಿಮೇಕ್ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಶ್ರೀದೇವಿ ಮಗಳಿಗೆ ಈ ಸಿನಿಮಾ ಅಷ್ಟು ಡಿಮ್ಯಾಂಡ್‌ ಕ್ರಿಯೇಟ್‌ ಮಾಡಲಿಲ್ಲ. ಆದರೆ, ಜಾನ್ವಿ ಸೌಂದರ್ಯಕ್ಕೆ ಎಲ್ಲರೂ ಮಾರು ಹೋದರು. ಎಷ್ಟೇ ಸೌಂದರ್ಯವಿದ್ದರೆನಂತೆ ಅದೃಷ್ಟ ಕೈಯಿಡಿಯಬೇಕು ಅಲ್ಲವೆ.


COMMERCIAL BREAK
SCROLL TO CONTINUE READING

ಹೌದು... ಜಾನ್ವಿ ಕಪೂರ್ ಅವರ ಎಲ್ಲಾ ಸಿನಿಮಾಗಳು ಒಟಿಟಿಯಲ್ಲಿ ಪ್ರಸಾರವಾಗಿವೆ. ಕೊರೊನಾ ಸಾಂಕ್ರಾಮಿಕ ಹಾವಳಿಗೆ ಅವರ ಹೆಚ್ಚು ಚಿತ್ರಗಳು OTT ನಲ್ಲಿ ಬಿಡುಗಡೆಯಾಗದವು. ʼಮಿಲಿʼ ಚಿತ್ರವೊಂದೇ ಥಿಯೇಟರ್‌ಗೆ ಬಂತು. ಕಳೆದ ವರ್ಷ ಈ ಸಿನಿಮಾ ಹಿಟ್ ಆಗುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ, ಆ ಚಿತ್ರವೂ ನೆಲಕಚ್ಚಿತು. ಸಿನಿಮಾಗಳ ವಿಚಾರ ಏನೇ ಇರಲಿ, ಜಾನ್ವಿ ಕಪೂರ್ ಯಾವಾಗಲೂ ಹಾಟ್ ಟಾಪಿಕ್ ಆಗಿರುತ್ತಾರೆ. 



ಇದನ್ನೂ ಓದಿ:ಅಭಿಮಾನಿಯ ಅಗಲಿಕೆಗೆ ಕಂಬನಿ ಮಿಡಿದ ʼದಾಸʼ..! ಪ್ಯಾನ್ಸ್‌ಗೆ ದಚ್ಚು ಮಾಡಿದ ಮನವಿ ಏನು..?


ಆಕೆಯ ಅಪರೂಪದ ಸೌಂದರ್ಯ ಇಂಟರ್‌ನೆಟ್‌ನಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅಲ್ಲದೆ, ಸೀಕ್ರೆಟ್ ಬಾಯ್ ಫ್ರೆಂಡ್ ಜೊತೆಗಿನ ಡೇಟಿಂಗ್ ವದಂತಿಗಳು ಸೇರಿದಂತೆ ಹಲವಾರು ವಿಚಾರಗಳಲ್ಲಿ ಜಾನ್ವಿ ಸದಾ ಸುದ್ದಿಯಲ್ಲಿರುತ್ತಾಳೆ. ಜಾನ್ವಿ ಕಪೂರ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದೀಗ ಆ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ.


ವಿಡಿಯೋದಲ್ಲಿ, ಜಾನ್ವಿ ಸಿನಿಮಾ ಒಂದರ ಶೂಟಿಂಗ್‌ ಸೆಟ್‌ನಲ್ಲಿ ಬಣ್ಣದ ಎರಚಾಡಿದ್ದಾರೆ. ಇದೇ ವಿಡಿಯೋವನ್ನು ಹಂಚಿಕೊಂಡಿರುವ ಸುಂದರಿ, ʼಮಾರ್ಚ್‌ನಲ್ಲಿ ಹೋಳಿ ತನಕ ಕಾಯಲು ಸಾಧ್ಯವಿಲ್ಲʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಜಾನ್ವಿ ಶೀಘ್ರದಲ್ಲೇ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕೊರಟಾಲ ಶಿವ ಚಿತ್ರದಲ್ಲಿ ಜಾನ್ವಿ ಜೂ. ಎನ್‌ಟಿಆರ್ ಜೊತೆ ನಟಿಸಲಿದ್ದಾರೆ. ಜಸ್ಟ್‌ ಚಿತ್ರಂಡ ಈ ಕುರಿತು ಅಧಿಕೃತ ಘೋಷಣೆ ಮಾಡಬೇಕಿದೆ ಅಷ್ಟೇ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.