ಜವಾನ್ 4ನೇ ದಿನ : ವಾರಾಂತ್ಯದಲ್ಲಿ ಹೇಗಿತ್ತು ಬಾಕ್ಸ್ ಆಫೀಸ್ ಕಲೆಕ್ಷನ್
Jawan Movie : ಇತ್ತೀಚಿಗಷ್ಟೇ ತೆರೆಕಂಡ ʼಜವಾನ್ʼ ಸಿನಿಮಾ ವಾರಾಂತ್ಯದಲ್ಲಿ ಸಖತ್ ಕಲೆಕ್ಷನ್ ಮಾಡಿದ್ದು, ವಾರಾಂತ್ಯದ ಮೊತ್ತ ಇಲ್ಲಿದೆ.
Box Office Collection : ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಅಟ್ಲೀ ನಿರ್ದೇಶನದ ಸಿನಿಮಾ ʼಜವಾನ್ʼ ಗುರುವಾರ ರಿಲೀಸ್ ಆಗಿದ್ದು, 5ನೇ ದಿನಕ್ಕೆ ಕಾಲಿಟ್ಟಿದೆ. ವಾರಾಂತ್ಯದಲ್ಲಿ ಸಕತ್ ಸದ್ದು ಮಾಡಿದ್ದು, ಇಲ್ಲಿಯವರೆಗೆ ಒಟ್ಟು 287 ಕೋಟಿ ಕಲೆಕ್ಷನ್ ಮಾಡಿದೆ. ಶನಿವಾರ 77.83 ಕೋಟಿ ಸಂಗ್ರಹಣೆ ಮಾಡಿದ್ದು, ಭಾನುವಾರ 81 ಕೋಟಿ ಕಲೆಕ್ಷನ್ ಮಾಡಿದೆ.
ಭಾನುವಾರ ಚಲನಚಿತ್ರ ವ್ಯಾಪಾರಕ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಸೋಮವಾರ ಅವರು X ( ಹಿಂದೆ ಟ್ವಿಟರ್‌ನಲ್ಲಿ) ಹಂಚಿಕೊಂಡಿದ್ದು, " ʼಜವಾನ್ʼ ಇತಿಹಾಸವನ್ನು ಸೃಷ್ಟಿಸುತ್ತದೆ. ಮತ್ತು 4ನೇ ದಿನದಲ್ಲಿ ಭಾರತದಲ್ಲಿ ಟ್ರ್ಯಾಕ್ ಮಾಡಿದ ಶೋಗಳಿಂದ ದಾಖಲೆಯ 2875961 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ."
ಜೈಲರ್ ಬ್ಲಾಕ್ ಬಸ್ಟರ್ ಹಿಟ್, ಚಿತ್ರತಂಡಕ್ಕೆ ಸಿಕ್ತು ಭರ್ಜರಿ ಉಡುಗೊರೆ
ಇತರ ವಿವರಗಳನ್ನು ಹಂಚಿಕೊಂಡ ಅವರು ವಿಶ್ವದಾದ್ಯಂತ 500 ಕೋಟಿ ಗ್ರಾಸ್ ಕ್ಲಬ್‌ಗೆ ತಲುಪಿದೆ. ಮತ್ತು ಒಂದೇ ವರ್ಷದಲ್ಲಿ ಎರಡು ಬಾರಿ ಈ ಸಾಧನೆ ಮಾಡಿದ ಏಕೈಕ ನಟ ಶಾರುಖ್ ಖಾನ್. ಚಿತ್ರದ ಹಿಂದಿ ಪ್ರದರ್ಶನಗಳು- 15404 ಒಟ್ಟು - 76.07 ಕೋಟಿ. ತಮಿಳು ಪ್ರದರ್ಶನಗಳು - 918 ಒಟ್ಟು -5.59 ಕೋಟಿ. ತೆಲುಗು ಪ್ರದರ್ಶನಗಳು - 798 ಒಟ್ಟು - 3.44 ಕೋಟಿ. ರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚೈನ್ಸ್ PVR - 4,29,729 INOX -3,69,775 ಸಿನಿಪೊಲಿಸ್ -1,58,007
ವಿಶೇಷವಾಗಿ ಶಾರುಖ್ ಅವರ ಹಿಂದಿನ ಚಿತ್ರ ʼಪಠಾಣ್ʼ ಮೊದಲ ವಾರಾಂತ್ಯದಲ್ಲಿ 280.75 ಕೋಟಿ ಕಲೆಕ್ಷನ್ ಮಾಡಿತ್ತು, ಆದರೆ ʼಜವಾನ್ʼ ಅದನ್ನು ಹಿಂದಿಕ್ಕಿ ಮೊದಲ ವಾರಾಂತ್ಯದಲ್ಲೇ 287 ಕೋಟಿ ಕಲೆಕ್ಷನ್ ಮಾಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.