ನವದೆಹಲಿ: ಸೈಫ್ ಅಲಿ ಖಾನ್, ತಬ್ಬು ಹಾಗೂ ಅಲಿಯಾ ಎಫ್ ಅಭಿನಯದ ಅವರ ಮುಂಬರುವ ಚಿತ್ರ 'ಜವಾನಿ ಜಾನೆಮನ್' ಚಿತ್ರದ ಜಬರ್ದಸ್ತ್ ಟ್ರೈಲರ್ ಕೆಲ ಸಮಯದ ಹಿಂದೆಯೇ ಬಿಡುಗಡೆಯಾಗಿದೆ. ಈ ಟ್ರೈಲರ್ ವೀಕ್ಷಿಸಿ ನೀವು ಕೂಡ ನಗೆಗಡಲಲ್ಲಿ ತೇಲುವುದು ಮಾತ್ರ ಗ್ಯಾರಂಟಿ. ಏಕೆಂದರೆ ಈ ಟ್ರೈಲರ್ ನಲ್ಲಿ ಚಿತ್ರದ ಮೂರು ಪಾತ್ರಗಳನ್ನೂ ತೋರಿಸಲಾಗಿದ್ದು, ಮೂರು ಪಾತ್ರಗಳ ಮಧ್ಯೆ ಏರ್ಪಟ್ಟ ಪರಿಸ್ಥಿತಿ ನಿಮಗೂ ಕೂಡ ಕಚಗುಳಿ ಇಡಲಿದೆ.


COMMERCIAL BREAK
SCROLL TO CONTINUE READING

ನಿತಿನ್ ಕಕ್ಕಡ್ ನಿರ್ದೇಶನದಡಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಹಾಗೂ ತಬ್ಬು ಅವರ ಜೊತೆಗೆ ಪೂಜಾ ಬೇಡಿ ಅವರ ಪುತ್ರಿ ಅಲಿಯಾ ಎಫ್. ಕೂಡ ಕಾಣಿಸಿಕೊಳ್ಳಲಿದ್ದಾರೆ. ಅಲಿಯಾ ಎಫ್. ಈ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಅಷ್ಟೇ ಅಲ್ಲ ಅಲಿಯಾ ಈ ಚಿತ್ರದ ಮುಖ್ಯ ಆಕರ್ಷಣೆ ಕೂಡ ಆಗಿದ್ದಾರೆ. ಚಿತ್ರದ ಪ್ರತಿಯೊಂದು ಸನ್ನಿವೇಶ ಇಂದಿನ ಲೈಫ್ ಸ್ಟೈಲ್ ಹಾಗೂ ಅದರಿಂದ ಆಗುತ್ತಿರುವ ತೊಂದರೆಗಳನ್ನು ತೋರಿಸುವಲ್ಲಿ ಯಶಸ್ವಿಯಾಗಿದೆ.



ಟ್ರೈಲರ್ ಆರಂಭದಲ್ಲಿ ಅಲಿಯಾ ಹಾಗೂ ಸೈಫ್ ಅಲಿ ಖಾನ್ ಅವರನ್ನು ಅಪರಿಚಿತರಾಗಿ ಭೇಟಿಯಾಗುವುದನ್ನು ತೋರಿಸಲಾಗಿದೆ. ನಂತರ ಅಲಿಯಾ ಸೈಫ್ ಅವರಿಗೆ ನಾನು ನಿಮಗೆ ಪುತ್ರಿಯಾಗಬಹುದು ಎನ್ನುವುದನ್ನು ತೋರಿಸಲಾಗಿದೆ. ಇತ್ತ ನಟಿ ತಬ್ಬೂ ಕೂಡ ಹಿಪ್ಪಿ ಗರ್ಲ್ ಪಾತ್ರದಲ್ಲಿ ಸಕತ್ ಕಾಣಿಸಿಕೊಂಡಿದ್ದಾರೆ. ಫರೀದಾ ಜಲಾಲ್ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಇದುವರೆಗೆ ಬಿಡುಗಡೆಗೊಂಡ ಈ ಚಿತ್ರದ ಪೋಸ್ಟರ್ ಹಾಗೂ ಹಾಡುಗಳೂ ಕೂಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ. ಜಾಕಿ ಭಾಗ್ನಾನಿ ಈ ಚಿತ್ರದ ನಿರ್ಮಾಪಕನ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರ ಜನವರಿ 31ಕ್ಕೆ ಬೆಳ್ಳಿ ಪರದೆಗೆ ಬರಲಿದೆ.