Jaya Bachchan Viral Video: ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಯಾರೂ ಸಹ ವಿಶ್‌ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೆಟ್ಟಿಗರ ಮನದಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ. 


COMMERCIAL BREAK
SCROLL TO CONTINUE READING

ಐಶ್ವರ್ಯಾ ರೈ ಹಾಗೂ ಅಭೀಷೇಕ್‌ ಬಚ್ಚನ್‌ ನಡುವಿನ ಸಂಬಂಧ ಹದಗೆಟ್ಟಿದೆ ಎಂಬುದಕ್ಕೆ ಒಂದಲ್ಲ ಒಂದು ವಿಷಯ ಹಾಗೂ ಕುಟುಂಬದವರ ನಡೆ ಪುಷ್ಠಿ ನೀಡುತ್ತಲೇ ಬರುತ್ತಿದೆ, ಅದರಲ್ಲೂ ಇತ್ತೀಚೆಗೆ ನಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬಚ್ಚನ್‌ ಕುಟುಂಬದವರು ಯಾರೂ ಕೂಡ ನಟಿಗೆ ವಿಶ್‌ ಮಡದೆ ಇರುವುದು ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿದೆ. ಈ ಜೋಡಿ ವಿಚ್ಛೇದನ ಪಡೆಯುವುದು ಕನ್‌ಫರ್ಮ್‌ ಎಂದು ಬಿ ಟೌನ್‌ ಮಾತಾನಡಿಕೊಳ್ಳಲು ಆರಂಭಿಸಿದೆ.


ಈ ಎಲ್ಲಾ ಊಹಾಪೋಹಗಳ ನಡುವೆ, ಜಯಾ ಬಚ್ಚನ್‌ ಅವರ ವಿಡಿಯೋ ಒಂದು ವೈರಲ್‌ ಆಗುತ್ತಿದ್ದು, ಈಕೆಯ ನಡೆ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಸದ್ಯ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ, ಜಯಾ ಬಚ್ಚನ್‌ ಒಂಟಿಯಾಗಿ ಕಾಣಿಸಿಕೊಂಡಿದ್ದಾರೆ, ಕಗ್ಗತ್ತಲಲ್ಲಿ ಕುಟುಂಬದವರ ಜೊತೆ ಅಲ್ಲದೆ, ಒಂಟಿಯಾಗಿ ಸುತ್ತಾಡುತ್ತಿದ್ದಾರೆ, ಈ ನಡೆ ನೆಟ್ಟಿಗರಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ.


ಜಯಾ ಅವರ ಈ ವಿಡಿಯೋ ಕುರಿತು ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳು ಹೊರಹೊಮ್ಮಿವೆ. ಪಾಪ್ಪರಾಜಿಗಳು ಎಷ್ಟೆ ಜಯಾ ಬಚ್ಚನ್‌ ಅವರನ್ನು ಮಾತನಾಡಿಸಿದರೂ ಕೂಡ ಆಕೆ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಕಾರಣಕ್ಕೆ ಜಯಾ ಬಚ್ಚನ್‌ ತನ್ನ ನಡುವಳಿಕೆಯ ಕುರಿತಾಗಿ ಮತ್ತೆ ಟ್ರೋಲ್‌ ಆಗುತ್ತಿದ್ದಾರೆ. ಜಯಾ ಬಚ್ಚನ್ ಅವರನ್ನು ರಾತ್ರಿಯ ಕತ್ತಲೆಯಲ್ಲಿ ದೆವ್ವ ಎಂದು ಹಲವರು ಬಣ್ಣಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 



https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ