Richest Actress Of India : ಭಾರತ ಶ್ರೀಮಂತ ನಟಿ ಯಾರೆಂದಾಗ ಮೊದಲು ತಲೆಗೆ ಬರೋದು ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಅವರ ಹೆಸರು. ರೇಖಾ, ಶ್ರೀದೇವಿಯಂತಹ ಮಾಜಿ ನಟಿಯರೂ ಈ ಪಟ್ಟಿಯಲ್ಲಿದ್ದಾರೆ. ಆದರೆ ಇವರೆಲ್ಲರಿಗಿಂತ ಹೆಚ್ಚು ಹಣ ಗಳಿಸಿದ ಮತ್ತೊಬ್ಬ ನಾಯಕಿ ಇದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಚಿತ್ರರಂಗದಲ್ಲಿ ಕೆಲವು ನಾಯಕಿಯರು ಹೀರೋಗಳಷ್ಟೇ ಸಂಭಾವನೆ ಪಡೆಯುತ್ತಾರೆ. ಸತತ ಹಿಟ್‌ಗಳಾದರೆ ಕೋಟ್ಯಂತರ ರೂಪಾಯಿ ಸಂಭಾವನೆ ಕೇಳುತ್ತಾರೆ. ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ನಮ್ಮ ದೇಶದಲ್ಲಿ ಒಳ್ಳೆಯ ಸ್ಟಾರ್‌ಡಮ್‌ನೊಂದಿಗೆ ಭಾರಿ ಹಣ ಗಳಿಸಿದ ನಾಯಕಿಯರಾಗಿದ್ದಾರೆ. ಆದರೆ ಈ ನಟಿ ಇವರೆಲ್ಲರಿಗಿಂತ ಹೆಚ್ಚು ಹಣ ಗಳಿಸಿದ್ದಾರೆ. ಆಕೆಯ ಬಳಿ ಹತ್ತು ಸಾವಿರಕ್ಕೂ ಹೆಚ್ಚು ಸೀರೆಗಳು, 1250 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನ ಇತ್ತು. 


ನಟಿಯಾಗಿ ಮೋಡಿ ಮಾಡಿ, ರಾಜಕಾರಣಿಯಾಗಿ ಮಿಂಚಿದ ಜಯಲಲಿತಾ ಅವರು ಭಾರತದ ಅತ್ಯಂತ ಶ್ರೀಮಂತ ನಟಿ ಎಂದು ಹೆಸರುವಾಸಿಯಾಗಿದ್ದಾರೆ. 1997ರ ಹೊತ್ತಿಗೆ ಜಯಲಲಿತಾ ರಾಜಕೀಯದಲ್ಲಿ ನೆಲೆಯೂರಿದ್ದರು. ಆ ವೇಳೆ ಚೆನ್ನೈನಲ್ಲಿರುವ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಚಾರ್ಜ್ ಶೀಟ್ ನಲ್ಲಿ ಜಯಲಲಿತಾ ಆಸ್ತಿ 188 ಕೋಟಿ ಎಂದು ಘೋಷಿಸಿದ್ದಾರೆ. ಆದರೆ ಜಯಲಲಿತಾ ನಿವ್ವಳ ಮೌಲ್ಯ ಸುಮಾರು 900 ಕೋಟಿ ಎಂದು ಅಧಿಕಾರಿಗಳು ಆರೋಪಿಸಿದ್ದರು.  


ಇದನ್ನೂ ಓದಿ:   ರಾಜ್‌ ಕುಮಾರ್‌ 5 ಮಕ್ಕಳು.. 11 ಮೊಮ್ಮಕ್ಕಳು ಹೇಗಿದ್ದಾರೆ ನೋಡಿದ್ದೀರಾ? ಪುತ್ರರಂತೆ ಅಳಿಯ ಸಹ ಫೇಮಸ್‌ ನಟ ! 


ಈ ಆಸ್ತಿ ಮೌಲ್ಯವು ಪ್ರಸ್ತುತ 800 ಕೋಟಿ ಆಸ್ತಿಗೆ ಒಡತಿಯಾಗಿರುವ ಐಶ್ವರ್ಯಾ ರೈಗಿಂತ ಹೆಚ್ಚು. ಭಾರತದ ಇತರ ಟಾಪ್ ನಾಯಕಿಯರಾದ ಪ್ರಿಯಾಂಕಾ ಚೋಪ್ರಾ 600 ಕೋಟಿ, ದೀಪಿಕಾ ಪಡುಕೋಣೆ 560 ಕೋಟಿ ಮತ್ತು ಆಲಿಯಾ ಭಟ್ 550 ಕೋಟಿ ಆಸ್ತಿ ಹೊಂದಿದ್ದಾರೆ. 


ಜಯಲಲಿತಾ ಅವರ ಮನೆಯಲ್ಲಿ 10,500 ಸೀರೆಗಳು, 750 ಜೋಡಿ ಚಪ್ಪಲಿಗಳು, 91 ವಾಚ್‌ಗಳು, 800 ಕೆಜಿ ಬೆಳ್ಳಿ ಮತ್ತು 28 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 2016ರಲ್ಲಿ ನಡೆದ ಮತ್ತೊಂದು ತನಿಖೆಯಲ್ಲಿ ಆಕೆಯ ಬಳಿ 1,250 ಕೆಜಿ ಬೆಳ್ಳಿ ಹಾಗೂ 21 ಕೆಜಿ ಚಿನ್ನ ಇರುವುದು ಬೆಳಕಿಗೆ ಬಂದಿದೆ. ಜಯಲಲಿತಾ ಅವರು ಎಂಟು ಐಷಾರಾಮಿ ಕಾರುಗಳು ಮತ್ತು 42 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.


ಜಯಲಲಿತಾ ಅವರು 1948 ರಲ್ಲಿ ಮೈಸೂರು ರಾಜ್ಯದ ಮಂಡ್ಯದಲ್ಲಿ ಜನಿಸಿದರು. ಅವರು 1961 ರಲ್ಲಿ ಕನ್ನಡ ಭಾಷೆಯ "ಶ್ರೀ ಶೈಲ ಮಹಾತ್ಮ" ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸುವ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಚಲನಚಿತ್ರಗಳು ಮತ್ತು ನಾಟಕಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ ನಂತರ ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. 


1968 ರಲ್ಲಿ ಧರ್ಮೇಂದ್ರ ಅವರೊಂದಿಗೆ "ಇಜ್ಜತ್" ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 70ರ ದಶಕದಲ್ಲಿ ದಕ್ಷಿಣ ಭಾರತದ ಪ್ರಮುಖ ನಟಿಯಾಗಿದ್ದರು. ಎನ್.ಟಿ.ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಜೈಶಂಕರ್, ಎಂ.ಜಿ. ರಾಮಚಂದ್ರನ್ ಅವರಂತಹ ಅಂದಿನ ಖ್ಯಾತ ನಾಯಕರ ಜೊತೆ ನಟಿಸಿದ್ದಾರೆ.


ಜಯಲಲಿತಾ ಅವರು ಜನವರಿ 1980 ರಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನಕ್ಕೆ ವಿದಾಯ ಹೇಳಿದರು ಮತ್ತು ತಮಿಳುನಾಡು ರಾಜಕೀಯದಲ್ಲಿ ಸಕ್ರಿಯರಾದರು. 1991 ಮತ್ತು 2016 ರ ನಡುವೆ ಅವರು ಆರು ಅವಧಿಗೆ ಮತ್ತು 14 ವರ್ಷಗಳಿಗಿಂತ ಹೆಚ್ಚು ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ಡಿಸೆಂಬರ್ 2016 ರಲ್ಲಿ ತಮ್ಮ 68 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಈ ಶ್ರೀಮಂತ ನಟಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗಲೇ ತೀರಿಕೊಂಡರು.


ಇದನ್ನೂ ಓದಿ:  "ನೋಡಲು ಕಪ್ಪಾಗಿದ್ದೀಯಾ, ಕಾಣಲು ದಪ್ಪಾಗಿದ್ದೀಯಾ..." ಬಾಡಿ ಶೇಮಿಂಗ್ಗೆ ಗುರಿಯಾದ ಈಕೆ ಇಂದು ಸೂಪರ್ಸ್ಟಾರ್ ನಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.