ಬೆಂಗಳೂರು: ಉಸಿರಾಟದ ತೊಂದರೆಯಿಂದ ಅಸ್ವಸ್ತಗೊಂಡು ಸೋಮವಾರ(ಮಾರ್ಚ್ 26) ನಗರದ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಅಭಿನಯ ಶಾರದೆ ನಟಿ ಜಯಂತಿ ಅವರ ಆರೋಗ್ಯದಲ್ಲಿ ಮಂಗಳವಾರ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಜಯಂತಿ ಅವರ ಪುತ್ರ ಕೃಷ್ಣಕುಮಾರ್, ನಮ್ಮ ತಾಯಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಬಗ್ಗೆ ಹರಡಿರುವ ಸುದ್ದಿ ಸುಳ್ಳು ವದಂತಿ, ಜನತೆ ಆ ವದಂತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.


ಜಯಂತಿಗೆ ಶ್ರದ್ಧಾಂಜಲಿ ಅರ್ಪಿಸಿ ಬಿಜೆಪಿ ಶಾಸಕನ ಟ್ವೀಟ್: 'ನಾಗರಹಾವು ಚಿತ್ರದ ಒನಕೆ ಓಬವ್ವ ಇನ್ನಿಲ್ಲ. ಖ್ಯಾತ ನಟಿ ಜಯಂತಿಯವರ ನಿಧಾನಕ್ಕೆ ನನ್ನ ಶ್ರದ್ಧಾಂಜಲಿ' ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಮಂಗಳವಾರ(ಮಾರ್ಚ್ 27) ರಾತ್ರಿ 10:34ರಲ್ಲಿ ಟ್ವೀಟ್ ಮಾಡಿದ್ದರು. 


ನಂತರ ತಮ್ಮ ಮೊದಲ ಟ್ವೀಟ್ ಅನ್ನು ಡಿಲೀಟ್ ಮಾಡಿ, 'ಖ್ಯಾತ ನಟಿ ಜಯಂತಿಯವರ ಕುರಿತಾದ ಹರಿದಾಡುತ್ತಿರುವ ಸುದ್ಧಿಗಳು ಕೇವಲ ವದಂತಿಗಳಷ್ಟೇ!. ಜಯಂತಿಯವರು ಬೇಗ ಹುಷಾರಾಗಿ ಆರೋಗ್ಯವಂತರಾಗಿ  ಹೊರಗೆ ಬರಲಿ. ಎಂದು ರಾತ್ರಿ 10:59ಕ್ಕೆ ಮತ್ತೆರಡು ಟ್ವೀಟ್ ಮಾಡಿದ್ದಾರೆ.




ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸುರೇಶ್ ಕುಮಾರ್ ಅವರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.