Jennifer Kotwal Cinema Journey: ಸ್ಯಾಂಡಲ್‌ವುಡ್‌ಗೆ ಮುಂಬೈನಿಂದ ಎಂಟ್ರಿ ಕೊಟ್ಟಿದ್ದ ನಟಿ ಜೆನ್ನಿಫರ್ ಕೊತ್ವಾಲ್  ತಮ್ಮ ಮೊದಲ ಚಿತ್ರದಲ್ಲೇ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಜೊತೆಗೆ ʻಚುಕ್ಕು ಬುಕ್ಕು ರೈಲು ನಿಲ್ಲೋದಿಲ್ಲ ಎಲ್ಲೂ..ʼ ಎಂದು ಹೆಜ್ಜೆ ಹಾಕುವುದರ ಜೊತೆಗೆ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದರು. ಈ ನಟಿ 15ರ ಹರೆಯದಲ್ಲಿ ಜಾಹೀರಾತು ಕ್ಷೇತ್ರಕ್ಕೆ ಪದಾರ್ಪಣೆ ಮಾಡಿ ಕ್ಲೋಸ್ ಅಪ್ ಟೂತ್‌ ಪೇಸ್ಟ್ ಆಡ್‌ನಲ್ಲಿ ಕಾಣಿಸಿಕೊಂಡಿದ್ದರು.


COMMERCIAL BREAK
SCROLL TO CONTINUE READING

ಟೂತ್‌ ಪೇಸ್ಟ್ ಜಾಹೀರಾತು ಈ ನಟಿಯ ವೃತ್ತಿ ಬದುಕನ್ನು ಸಂಪೂರ್ಣ ಬದಲಾಯಿಸಿತ್ತು. ಸಾಲು ಸಾಲು ಜಾಹೀರಾತನಲ್ಲಿ ನಟಿಸುತ್ತಿದ್ದ ಈ ನಟಿ ನಿರ್ದೇಶಕ ಪ್ರೇಮ್ ಕಣ್ಣಿಗೆ ಬಿದ್ದಿದ್ದರು. ಮುಂಬೈನಲ್ಲಿ ಜೆನ್ನಿಫರ್ ಕೊತ್ವಾಲ್ ಆಡ್‌ ಶೂಟ್‌ನಲ್ಲಿ  ಬ್ಯುಸಿಯಾಗಿರುವಾಗ 'ಜೋಗಿ' ಸಿನಿಮಾಗೆ ಆಫರ್ ಬಂದಿತ್ತು. ಈ ನಟಿ ಕಥೆ ಕೇಲಿದ ಬಳಿಕ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಒಪ್ಪಿಕೊಂಡರು. ಆಗ ಜೆನ್ನಿಫರ್‌ಗೆ  ಕೇವಲ 21 ವರ್ಷವಾಗಿದ್ದು, ಈಕೆಗೆ ಕನ್ನಡ ಭಾಷೆ  ಗೊತ್ತಿಲ್ಲದೇ ಇದ್ದರು ಕನ್ನಡಿಗರನ್ನು ಗೆದ್ದಿದ್ದರು.


ಇದನ್ನೂ ಓದಿ: Sunny Leone: ಸ್ವಂತ ಸಹೋದರನೇ ಈ ನಟಿಯ ಆಟೋಗ್ರಾಫ್‌ಯಿರುವ ಬೆತ್ತಲೆಯ ಫೋಟೋಗಳನ್ನು ಮಾರಾಟ ಮಾಡಿ ದುಡ್ಡು ಸಂಪಾದಿಸಿನಂತೆ!


ಇದೀಗ ಜೆನ್ನಿಫರ್ ಕೊತ್ವಾಲ್‌ಗೆ 40 ವರ್ಷ ವಯಸ್ಸು. ಈ ನಟಿ  2011ರಲ್ಲಿ ತೆರೆಕಂಡ 'ಮತ್ತೊಂದು ಮದುವೆನಾ?' ಚಿತ್ರದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ತದನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಈ ನಟಿ ಕನ್ನಡ ಬಿಟ್ಟು ತೆಲುಗಿನಲ್ಲಿ ಎರಡು ಚಿತ್ರಗಳಲ್ಲಿ  ನಟಿಸಿದ್ದರು. ಆದರೆ ಅವುಗಳು ಕೈ ಹಿಡಿಯಲಿಲ್ಲ. ಬಳಿಕ 2014ರಲ್ಲಿ ಕೊನೆಯದಾಗಿ ಹಿಂದಿ ಟಿವಿ ಶೋ 'ಓ ಮೈ ಗೋಲ್ಡ್'ನಲ್ಲಿ ಭಾಘಿಯಾಗಿದ್ದರು. ನಂತರ ಮತ್ತೆ ಈ ನಟಿ ತೆರೆಮೇಲೆ ಬರಲೇ ಇಲ್ಲ. 


ನಟಿ ಜೆನ್ನಿಫರ್ ಕೊತ್ವಾಲ್‌ಗೆ ಡಿಸ್ಕ್ ಇಂಜುರಿ ಆಗಿದ್ದರಿಂದ ವರ್ಕ್‌ಔಟ್ ಮಾಡುವುದಕ್ಕೆ ಆಗದೆ ಮತ್ತು ಬ್ಯೂಟಿಯನ್ನು ಮೆಂಟೈನ್ ಮಾಡಲು ಸಾಧ್ಯವಾಗದೇ, ಸಿನಿಮಾದಿಂದ ದೂರ ಉಳಿದಿದ್ದಾರೆ. ಈಕೆಗೆ ಐಟಂ ಸಾಂಗ್ ಹಾಗೂ ಅತಿಥಿ ಪಾತ್ರಗಳಲ್ಲಿಯೇ ನಟಿಸಲು ಹೆಚ್ಚು ಆಫರ್ ಬರುತ್ತಿದ್ದರೂ, ಈಕೆ ಅವುಗಳನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಸದ್ಯ ತಮ್ಮದೇ ಪ್ರಪಂಚದಲ್ಲಿ ಬ್ಯುಸಿಯಾಗಿರೋ ನಟಿ ಮುಂಬೈನಲ್ಲಿ ನೆಲೆಸಿದ್ದಾರೆ. ಈ ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದು, ಆಗಾಗ ಫೋಟೊ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.