Manasa Manohar: ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ 'ಜೊತೆ ಜೊತೆಯಲಿ' ಸೀರಿಯಲ್ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಅವರಿಗೆ ಆರ್ಯವರ್ಧನ್ ಪಾತ್ರ ಒಂದೊಳ್ಳೆ ಬ್ರೇಕ್ ನೀಡಿತ್ತು. ಅನು ಸಿರಿಮನೆ ಪಾತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ನಟಿ ಮೇಘಾ ಶೆಟ್ಟಿ ಅವರಿಗೆ ಬೆಳ್ಳಿತೆರೆಗೆ ಉತ್ತಮ ಅವಕಾಶಗಳು ದೊರೆತವು. ಈ ಧಾರವಾಹಿಯಲ್ಲಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ, ಆರ್ಯವರ್ಧನ್ ರನ್ನು ಪ್ರೀತಿಸುತ್ತಿದ್ದ 'ಮೀರಾ' ಪಾತ್ರಧಾರಿಯ ಮಾನಸ ಮನೋಹರ್ ಕೂಡ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು. 


COMMERCIAL BREAK
SCROLL TO CONTINUE READING

'ಜೊತೆ ಜೊತೆಯಲಿ' ಸೀರಿಯಲ್ ನಲ್ಲಿ ಆರ್ಯವರ್ಧನ್ ಗೆ ಬಲಗೈಯಂತಿದ್ದ ಇಡೀ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಮೀರಾ ಒಂದು ಕಂಪನಿಯಲ್ಲಿ ಉದ್ಯೋಗಿ ಹೇಗಿರಬೇಕು ಎಂಬುದಕ್ಕೆ ಉತ್ತಮ ನಿದರ್ಶನದಂತಿದ್ದರು. 


'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಮೀರಾ ಆಗಿ ಕಾಣಿಸಿಕೊಂಡಿದ್ದ ಮಾನಸ ಮನೋಹರ್ ಸಿಕ್ಕಾಪಟ್ಟೆ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾರೆ. ಅವರ ಸ್ಟೈಲ್, ಡ್ರೆಸ್ಸಿಂಗ್ ಸೆನ್ಸ್, ಸಿಂಪಲ್ ಮೇಕಪ್ ಗೆ ಪಡ್ಡೆ ಹೈಕಳು ಫಿದಾ ಆಗಿದ್ದರು. ಇದೀಗ ಮೀರಾ ತಮ್ಮ ಫ್ಯಾನ್ಸ್ ಜೊತೆಗೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ- ತಾಯಿಯೊಂದಿಗೆ ಇಡೀ ರಾತ್ರಿ ರಸ್ತೆಯಲ್ಲಿ ಕಳೆದಿದ್ದ ಖ್ಯಾತ ನಟಿ..! ಕ್ರೇಜಿ ಕ್ವೀನ್ ನೋವಿನ ಕಹಾನಿ..! 


ಎಂಗೇಜ್ ಆದ ಮಾನಸ ಮನೋಹರ್: 
ಮಾನಸ ಮನೋಹರ್ ತಮ್ಮ ಎಂಗೆಜ್ಮೆಂಟ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೊಮ್ಮೆ ಮದುವೆಯಾಗಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ಮಾನಸ ಕೈ ಹಿಡಿಯಲಿರುವ ಭಾವೀ ಪತಿ ಫುಟ್ ಬಾಲ್ ಪ್ಲೇಯರ್ ಎಂದು ತಿಳಿದುಬಂದಿದೆ. ಅವರ ಹೆಸರು ಪ್ರೀತಂ ಚಂದ್ರ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.