Juhi Chawla husband Jai Mehtha Net Woth: ಕನ್ನಡಿಗರ ಮನಗೆದ್ದ ಈ ನಟಿ ಒಂದು ಕಾಲದ ಬಹು ಬೇಡಿಕೆಯ ಹೀರೋಯಿನ್.‌ ಇವರು ಕನ್ನಡದ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಭಾರತೀಯ ಕಂದಾಯ ಸೇವೆಯ (IRS) ಅಧಿಕಾರಿಯೊಬ್ಬರ ಮಗಳು 1986 ರಲ್ಲಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 90ರ ದಶಕದಲ್ಲಿ ಬೆಳ್ಳಿಪರದೆ ಮೇಲೆ ಮೋಡಿ ಮಾಡಿದರು. ಆ ಕಾಂತಿಯುಕ್ತ ಕಣ್ಣು ಮೋಹಕ ನಗು ಸಿನಿ ಪ್ರಿಯರ ಮನಗೆದ್ದಿತು. 


COMMERCIAL BREAK
SCROLL TO CONTINUE READING

ಶಾರುಖ್ ಖಾನ್, ಅಜಯ್ ದೇವಗನ್, ಅಮೀರ್ ಖಾನ್, ಸನ್ನಿ ಡಿಯೋಲ್, ರಿಷಿ ಕಪೂರ್ ಮತ್ತು ಗೋವಿಂದರಂತಹ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿದ ಈ ನಟಿ ವೃತ್ತಿಜೀವನ ಉತ್ತುಂಗದಲ್ಲಿದಾಗಲೇ ವಿವಾಹಿತ ವ್ಯಕ್ತಿಯ ಜೊತೆಯೇ ಮದುವೆಯಾದರು. 1986 ರಲ್ಲಿ 'ಸುಲ್ತಾನತ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, 90 ರ ದಶಕದ ಅತ್ಯಂತ ಬೇಡಿಕೆಯ ನಟಿಯಾಗಿದ್ದವರು ಇವರು. 


ಈ ನಟಿ ಬೇರಾರೂ ಅಲ್ಲ, ಜೂಹಿ ಚಾವ್ಲಾ. ನವೆಂಬರ್ 13, 1967 ರಂದು ಲುಧಿಯಾನಾದಲ್ಲಿ ಜನಿಸಿದ ಜೂಹಿ ಚಾವ್ಲಾ ತಂದೆ ಡಾ. ಎಸ್. ಚಾವ್ಲಾ ಪಂಜಾಬಿ ಮೂಲದವರು. ಆದರೆ ತಾಯಿ ಮೋನಾ ಗುಜರಾತಿ ಕುಟುಂಬಕ್ಕೆ ಸೇರಿದವರಾಗಿದ್ದರು. ಜೂಹಿಯ ತಂದೆ ಐಆರ್‌ಎಸ್‌ ಅಧಿಕಾರಿಯಾಗಿದ್ದರು. ಜೂಹಿ ಚಾವ್ಲಾ ತನ್ನ ಮದುವೆಯನ್ನು ಮುಚ್ಚಿಟ್ಟು ಬಾಲಿವುಡ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಎಂಬ ವದಂತಿಯೊಂದಿದೆ. ಮದುವೆಯಾಗಿ ಸುಮಾರು 6 ವರ್ಷಗಳ ಕಾಲ ತಾನು ಮದುವೆಯಾಗಿಲ್ಲ ಎಂದೇ ಹೇಳುತ್ತ ಬಂದಿದ್ದರಂತೆ.


ಇದನ್ನೂ ಓದಿ: ಒಂದು ಶಬ್ದ ಹೇಳಲು 75 ಲಕ್ಷ ಸಂಭಾವನೆ, ಈ ಸೂಪರ್ ಸ್ಟಾರ್ ನಟಿಸಿದ FLOP ಚಿತ್ರವೂ 1000 ಕೋಟಿ ಗಳಿಸುತ್ತದೆ.! 


ಜೂಹಿ ಚಾವ್ಲಾ ಮದುವೆ ವಿಚಾರ ಬಯಲಾಗುತ್ತಿದ್ದಂತೆ ಅವರ ವೃತ್ತಿ ಜೀವನ ಅವನತಿಯತ್ತ ಸಾಗಿತು. ಮದುವೆಯನ್ನು ಮರೆಮಾಚಿದ ವಿಚಾರವನ್ನು ಜೂಹಿ ಸ್ವತಃ ಅನೇಕ ಬಾರಿ ಒಪ್ಪಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಜೂಹಿ ಚಾವ್ಲಾ ಈ ವಿಚಾರಕ್ಕೆ ಕಾರಣ ಕೂಡ ನೀಡಿದ್ದರು.


ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಜೈ ಮೆಹ್ತಾ ಅವರನ್ನು ವಿವಾಹವಾದರು. ಜೈ ಮೆಹ್ತಾ ಅವರಿಗೆ ಆಗಲೇ ಒಂದು ಮದುವೆಯಾಗಿತ್ತು. ಆದರೆ ಅವರ ಮೊದಲ ಪತ್ನಿ ಸುಜಾತಾ ಬಿರ್ಲಾ ಅಪಘಾತದಲ್ಲಿ ನಿಧನರಾಗಿದ್ದರು. ಸುಜಾತಾ ಉದ್ಯಮಿ ಯಶ್ ಬಿರ್ಲಾ ಅವರ ಸಹೋದರಿ. ಸುಜಾತಾ ನಿಧನದ ಬಳಿಕ ಜೂಹಿ ಚಾವ್ಲಾ ಅವರನ್ನು ಜೈ ಮೆಹ್ತಾ ಮದುವೆಯಾದರು. 


ವರದಿಗಳ ಪ್ರಕಾರ, ಇತರರಂತೆ ಜೂಹಿ ಚಾವ್ಲಾ ತನ್ನ ತಂದೆಯ ಮಾತಿಗೆ ವಿರುದ್ಧವಾಗಿಯೇ ಜೈ ಮೆಹ್ತಾ ಅವರನ್ನು ಮದುವೆಯಾದರು. ಅವರ ಕುಟುಂಬ ಸದಸ್ಯರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು, ಆದರೆ ನಂತರ ಅವರು ತಮ್ಮ ಮಗಳ ನಿರ್ಧಾರವನ್ನು ಗೌರವಿಸಿದರು. ಜೈ ಅವರನ್ನು ತಮ್ಮ ಅಳಿಯನನ್ನಾಗಿ ಸ್ವೀಕರಿಸಿದರು.


ಇದನ್ನೂ ಓದಿ: ಕೀರ್ತಿ ಸುರೇಶ್ ಗೆ ಸಿಕ್ತು ಬಂಪರ್ ಆಫರ್.. ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಲಕ್ಕಿ ಚಾನ್ಸ್ !


ಇಂದು ಜೂಹಿ ಚಿತ್ರರಂಗದ ಶ್ರೀಮಂತ ನಟಿಯರಲ್ಲಿ ಒಬ್ಬರಾಗಿದ್ದಾರೆ. ಜೂಹಿ ಚಾವ್ಲಾ ಅವರ ಒಟ್ಟು ಆಸ್ತಿ ಸುಮಾರು 44 ಕೋಟಿ ಆಗಿದೆ. ಅವರ ಪತಿ ಜೈ ಮೆಹ್ತಾ ಅವರ ಒಟ್ಟು ಸಂಪತ್ತು 2300 ಕೋಟಿ ರೂ. ಆಗಿದೆ. ಮೆಹ್ತಾ ಗ್ರೂಪ್‌ನ ವ್ಯವಹಾರವು ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹರಡಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.