ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ದಿನ ಇದ್ದೇ ಇರುತ್ತದೆ. ಅದು ಸಾಮಾನ್ಯ ವ್ಯಕ್ತಿಯಾಗಿರಬಹುದು ಅಥವಾ ಪ್ರಸಿದ್ದ ನಟ-ನಟಿಯರಾಗಿರಬಹುದು. ಕೆಲವು ಘಟನೆಗಳು, ವಿಚಾರಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಸ್ಯಾಂಡಲ್ ವುಡ್ ನ ಖ್ಯಾತ ಕಿಚ್ಚ ಸುದೀಪ್ ಜೀವನದಲ್ಲಿ ಜುಲೈ 6 ಯಾವಾಗಲೂ ಸ್ಪೆಷಲ್ ಅಂತೆ. ಯಾಕೆ ಅಂತಾ ಗೊತ್ತಾ! 


COMMERCIAL BREAK
SCROLL TO CONTINUE READING

ಕನ್ನಡ ಚಿತ್ರರಂಗದಲ್ಲಿ ಸುದೀಪ್, 'ಕಿಚ್ಚ ಸುದೀಪ್'ನಾಗಿ ಖ್ಯಾತಿ ಪಡೆದದ್ದು ಹುಚ್ಚ ಚಿತ್ರದ ಮೂಲಕ. 2001ರ ಜುಲೈ 6ರಂದು ಸುದೀಪ್ ಅಭಿನಯದ 'ಹುಚ್ಚ' ಚಿತ್ರ ಬಿಡುಗಡೆಯಾಗಿತ್ತು. ಆ ಚಿತ್ರದ ಮೂಲಕವೇ ಸುದೀಪ್ ಒಬ್ಬ ಪ್ರಸಿದ್ಧ ನಟನಾಗಿ ಗುರುತಿಸಿಕೊಂಡರು. ಇನ್ನು ತೆಲುಗು ಮತ್ತು ತಮಿಳಿನಲ್ಲಿ ಮೂಡಿ ಬಂದ 'ಈಗ' ಚಿತ್ರ 2012 ರ್ ಜುಲೈ 6 ರಂದು ತೆರೆಕಂಡಿತು. ಈ ಚಿತ್ರದ ಮೂಲಕ ಕನ್ನಡದ ಕುವರ ದೇಶಾದ್ಯಂತ ಹೆಸರುವಾಸಿಯಾದರು. ಹಾಗಾಗಿ ಜುಲೈ 6 ಕಿಚ್ಚನ ಬಾಳಿನಲ್ಲಿ ಎಂದೂ ಮರೆಯದ ದಿನ. 



ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, #ಹುಚ್ಚ ಮತ್ತು #ಈಗ ಚಿತ್ರ ತಂಡಗಳಿಗೆ ನನ್ನ ಧನ್ಯವಾದಗಳು. ಈ ದಿನ(ಜುಲೈ 6) ನನಗೆ ಬಹಳ ವಿಶೇಷವಾದದ್ದು.... ಒಂದು ಚಿತ್ರ ನನ್ನನ್ನು ನಟನಾಗಿ ಪರಿಚಿಸಿತು ಮತ್ತು ನನ್ನ ರಾಜ್ಯದ ಜನರ ಹೃದಯದಲ್ಲಿ ನನ್ನನ್ನು ಇರಿಸಿತು. ಮತ್ತೊಂದು ಚಿತ್ರ ನನ್ನನ್ನು ಜಗತ್ತಿಗೆ ಪರಿಚಯಿಸಿತು. ಜುಲೈ 6.... ನನ್ನ ಜೀವನದಲ್ಲಿ ನನಗೆ ಯಾವಾಗಲೂ ಒಂದು ವಿಶೇಷ ದಿನ ಎಂದು ಸ್ಮರಿಸಿಕೊಂಡಿದ್ದಾರೆ.