Jr NTR: ಜಪಾನ್ ಭೂಕಂಪದಲ್ಲಿ ಸಿಲುಕಿದ ಜೂನಿಯರ್ ಎನ್‌ಟಿಆರ್ ಫ್ಯಾಮಿಲಿ..!
Junior NTR caught in Japan earthquake: ಜೂನಿಯರ್ ಎನ್‌ಟಿಆರ್ ಅಭಿಮಾನಿಗಳಿಗೆ ಹೊಸ ವರ್ಷದ ಆರಂಭದಲ್ಲೇ ಬಹುದೊಡ್ಡ ಶಾಕಿಂಗ್ ಸಂಗತಿ ಕಾದಿತ್ತು.
Junior NTR caught in Japan earthquake: ನ್ಯೂ ಇಯರ್ ಮೊದಲ ದಿನವೇ ಜಪಾನ್‌ನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದೆ. ಜಪಾನ್‌ನ ಪಶ್ಚಿಮ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಅಪಾರ ಹಾನಿಯಾಗಿದೆ. ಹೊಸ ವರ್ಷದ ಮೊದಲ ದಿನವೇ ಜಪಾನ್‌ನಲ್ಲಿ ಭೂಮಿ ಸುಮಾರು 21 ಬಾರಿ ಕಂಪಿಸಿತು. ರಿಕ್ಟರ್ ಮಾಪಕದಲ್ಲಿ 7.6 ರ ತೀವ್ರತೆ ದಾಖಲಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಜಪಾನ್ ಸರ್ಕಾರ ದೇಶದ ಪಶ್ಚಿಮ ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಿದೆ. ಈ ಅಲೆಗಳು ಐದು ಮೀಟರ್‌ಗಳಷ್ಟು ಎತ್ತರದಲ್ಲಿ ಬರಬಹುದು ಎನ್ನಲಾಗಿದೆ.
ಜಪಾನ್ ಭೂಕಂಪದ ಬಗ್ಗೆ ಕಳವಳ ವ್ಯಕ್ತವಾಗುತ್ತಿರುವ ಹೊತ್ತಲ್ಲೇ ಟಾಲಿವುಡ್ ಯಂಗ್ ಟೈಗರ್ ಎನ್ ಟಿಆರ್ ಮತ್ತು ಅವರ ಕುಟುಂಬ ಕೂಡ ಈ ಭೂಕಂಪದಲ್ಲಿ ಸಿಲುಕಿದ್ದರು ಎಂಬ ಸುದ್ದಿ ಹೊರಬಿದ್ದಿದೆ. ಇದರ ಬಗ್ಗೆ ಖುದ್ದು ಎನ್‌ಟಿಆರ್ ಟ್ವೀಟ್ ಮಾಡಿದ್ದಾರೆ. "ನಾನು ಕಳೆದ ವಾರ ಜಪಾನ್‌ನಲ್ಲಿದ್ದೆ. ನಾನಿದ್ದ ಪ್ರದೇಶದಲ್ಲಿ ಭೂಕಂಪ ಸಂಭವಿಸಿತು. ಇದು ನನ್ನ ಹೃದಯವನ್ನು ಸ್ಪರ್ಶಿಸಿತು. ಭೂಕಂಪ ಪೀಡಿತ ಪ್ರದೇಶಗಳಲ್ಲಿ ಜನರು ಶೀಘ್ರವಾಗಿ ಚೇತರಿಸಿಕೊಳ್ಳಲಿ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ʻಸತ್ಯʼ ನಟಿ ಗೌತಮಿ ಜಾಧವ್ ರಿಯಲ್ ಗಂಡ ಯಾರು ಗೊತ್ತಾ, ಇವರೂ ಸಿನಿರಂಗದವರೇ..!
ಈ ಭೂಕಂಪದಿಂದಾಗಿ ಜಪಾನ್‌ನಲ್ಲಿ ಸುಮಾರು 36 ಗಂಟೆಗಳ ಕಾಲ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ದೇಶಾದ್ಯಂತ ಹಲವು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಈ ಭೂಕಂಪದಿಂದಾಗಿ ವಾಜಿಮಾ ಪಟ್ಟಣದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಪ್ರದೇಶಗಳಲ್ಲಿ ರೈಲು ಮತ್ತು ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಇನ್ನೂ ಹೆಚ್ಚು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಕ್ರಮದಲ್ಲಿ ಟೋಕಿಯೊದಲ್ಲಿನ ಭಾರತೀಯ ರಾಯಭಾರಿ ಕಚೇರಿ ತುರ್ತು ಸಂಪರ್ಕ ಕೊಠಡಿಯನ್ನು ಸ್ಥಾಪಿಸಿದೆ ಮತ್ತು ಸಿಬ್ಬಂದಿಯ ಫೋನ್ ಸಂಖ್ಯೆಗಳು ಮತ್ತು ಮೇಲ್ ಐಡಿಗಳನ್ನು ಸಹ ನೀಡಿದೆ.
ಜೂನಿಯರ್ ಎನ್‌ಟಿಆರ್ ಅವರ RRR ಚಿತ್ರ ಇಡೀ ವಿಶ್ವಾದ್ಯಂತ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಿಂದಲೇ ಅವರಿಗೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿತ್ತು. ಜಪಾನ್‌ನಲ್ಲಿಯೂ RRR ಸಿನಿಮಾ ರಿಲೀಸ್ ಆಗಿತ್ತು. ಜಪಾನ್‌ನಲ್ಲಿ ಈ ಚಿತ್ರ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಯಿತು.
ಇದನ್ನೂ ಓದಿ : ಶಾರುಖ್ ಸಹ ಡಂಕಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲ್ಲ ಎಂದಿದ್ರಂತೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.