Jyothi Rai : ಕನ್ನಡದ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದೀಗ ಈ ಕುರಿತು ಅವರ ಅಭಿಮಾನಿಗಳು ಬೆಂಗಳೂರು ಪೊಲೀಸರಿಗೆ ಆದಷ್ಟು ಬೇಗ ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ನಟಿ ಜ್ಯೋತಿ ರೈ ಅವರು ತೆಲಂಗಾಣದ ಹೈದ್ರಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ತೆಲುಗು ನಿರ್ದೇಶಕರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟಿ, ಅಲ್ಲಿಯೇ ವಾಸಿಸುತ್ತಿದ್ದಾರೆ. ಸಧ್ಯ ವೆಬ್‌ ಸಿರೀಸ್‌ ಮತ್ತು ಹಲವಾರು ಸೂಪರ್‌ ಹಿಟ್‌ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಸಧ್ಯ ನಟಿಗೆ ಸಂಬಂಧಿಸಿ ಕೆಲ ಅಶ್ಲೀಲ ವಿಡಿಯೋಗಳು ಸೊಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ.


ಇದನ್ನೂ ಓದಿ:ಸುಸೈಡ್‌ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್‌ ಸ್ಟಾರ್‌ ಲೈಫ್‌!!


ಜ್ಯೋತಿ ರೈ ಖಾಸಗಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೆ, ನಟಿ ಮೌನ ಮುರಿದಿದ್ದು, ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ತಮ್ಮ ಹಾಗು ತಮ್ಮ ಕುಟುಂಬದ ಮಾನಹಾನಿಗೆ ಪ್ರಯತ್ನ ನಡೆಯುತ್ತಿದೆ ಅಂತ ದೂರಿದ್ದಾರೆ. ನಟಿಯ ಖಾಸಗಿತನಕ್ಕೆ ಧಕ್ಕೆ ತಂದಿರುವ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ಸಹ ನೀಡಿದ್ದಾರೆ ಎನ್ನಲಾಗಿದೆ.


ಯಾರೋ ಕಿಡಿಗೇಡಿಗಳು ತಮ್ಮ ಯೂಟ್ಯೂಬ್ ಚಾನೆಲ್ 1000 ಚಂದಾದಾರರನ್ನು ತಲುಪಿದರೆ ನಟಿಯ ಎಲ್ಲಾ ವೀಡಿಯೊಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದಕ್ಕಾಗಿ ಆದಷ್ಟು ಬೇಗ ಈ ಕುರಿತು ಪೊಲೀಸರು ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳುವಂತೆ ನಟಿಯ ಅಭಿಮಾನಿಗಳು ಬೆಂಗಳೂರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಪೊಲೀಸರಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ ಎನ್ನಲಾಗಿದೆ. 


ಇದನ್ನೂ ಓದಿ:ಕೆಂಡ ಸಂಪಿಗೆ ಧಾರಾವಾಹಿಯಿಂದ  ನಟಿ ಕಾವ್ಯ ಶೈವ ಔಟ್..! ಕೊನೆಗೂ ಬಯಲಾಯ್ತು ನಾಯಕಿ ಬದಲಾವಣೆಯ ಅಸಲಿ ಸತ್ಯ


ಜ್ಯೋತಿ ರೈ ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಜೋಗುಳ', 'ಕಿನ್ನರಿ' ಮೂಲಕ ಜನಪ್ರಿಯರಾದರು. ಜ್ಯೋತಿ ರೈ ಅವರು ಸೀತಾರಾಮ ಕಲ್ಯಾಣ, ಗಂಧದ ಗುಡಿ ಮತ್ತು 99 ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ, ನಟ ತೆಲುಗು ಶೋ ಗುಪೆದಂತ ಮನಸು ಮೂಲಕ ಹೆಚ್ಚು ಮೆಚ್ಚುಗೆ ಗಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.