ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ವೈರಲ್ ಆಗಿರುವ ವೀಡಿಯೋ ವೊಂದರಲ್ಲಿ ಕೈ ಚಿಹ್ನೆಗೆ ಮತ ಹಾಕಲು ಕೇಳಿಕೊಂಡಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


COMMERCIAL BREAK
SCROLL TO CONTINUE READING

ಈ ವರ್ಷದ ಮಾರ್ಚ್‌ನಲ್ಲಿ ಸಿಂಧಿಯಾ ಕಾಂಗ್ರೆಸ್ ತೊರೆದಿದ್ದರು ಮತ್ತು 22 ಶಾಸಕರು ಕ್ಯಾಬಿನೆಟ್ ಗೆ ರಾಜೀನಾಮೆ ನೀಡಿದ್ದರು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಕಮಲ್ ನಾಥ್ ಸರ್ಕಾರ ಪತನಗೊಂಡಿತು.



ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಬಿಜೆಪಿ ಅಭ್ಯರ್ಥಿ ಇಮಾರ್ತಿ ದೇವಿ ಪರ ಪ್ರಚಾರ ಮಾಡುತ್ತಿದ್ದ ಮಾಜಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಹೀಗೆ ಹೇಳುತ್ತಾರೆ: …ನಿಮ್ಮ ಮುಷ್ಟಿಯನ್ನು ಮುಚ್ಚಿ ಮತ್ತು ನವೆಂಬರ್ 3 ರಂದು 'ಕೈ' ಗುಂಡಿಯನ್ನು ಒತ್ತಿ ಎಂದು ಹೇಳಿ ತಕ್ಷಣ ಸರಿ ಪಡಿಸಿಕೊಂಡು ಕಮಲದ ಚಿಹ್ನೆಗೆ ಮತ ಹಾಕಲು ವಿನಂತಿಸಿಕೊಳ್ಳುತ್ತಾರೆ.


ಈ ಭಾಷಣ ವೈರಲ್ ಆಗುತ್ತಿದ್ದಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷವು 'ಸಿಂಧಿಯಾ ಜಿ, ಮಧ್ಯಪ್ರದೇಶದ ಜನರು ನವೆಂಬರ್ 3 ರಂದು ಕೈ ಚಿಹ್ನೆಗೆ ಒತ್ತುವುದನ್ನು ಭರವಸೆ ನೀಡುತ್ತಾರೆ' ಎಂದು ಹೇಳಿದೆ.ಏತನ್ಮಧ್ಯೆ, ಚುನಾವಣಾ ಆಯೋಗ ಶನಿವಾರ ಚುನಾವಣಾ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ದೇವಿ ನವೆಂಬರ್ 1 ರಂದು ರಾಜ್ಯದಲ್ಲಿ ಒಂದು ದಿನ ಪ್ರಚಾರ ಮಾಡುವುದನ್ನು ನಿರ್ಬಂಧಿಸಿದೆ.