ಬೆಂಗಳೂರು : ಈ ಹಿಂದೆ ಬಿಡುಗಡೆಯಾಗಿದ್ದ ಟ್ರಾನ್ಸ್ ಸಾಂಗ್ ಮೂಲಕ ವ್ಯಾಪಕ ಕ್ರೇಜ್ ಸೃಷ್ಟಿಸಿದ್ದ ಚಿತ್ರ `ಕೈಲಾಸ ಕಾಸಿದ್ರೆ’. ಹಾಡುಗಳ ಮೂಲಕ ಹಂತ ಹಂತವಾಗಿ ಜನ ಮನ ಸೆಳೆಯುತ್ತಾ ಸಾಗಿ ಬಂದಿರುವ ಈ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ. ಚಿತ್ರದ ಹಾಡುಗಳಂತೆ ಇದರ ಟ್ರೈಲರ್ ಕೂಡಾ   ವೀಕ್ಷಕರ ಮನಸೂರೆ ಗೊಂಡಿದೆ. 


COMMERCIAL BREAK
SCROLL TO CONTINUE READING

ಈ ಹಿಂದೆ ತಾರಕಾಸುರ ಚಿತ್ರದ ರಗಡ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದವರು ರವಿ. ಚಿತ್ರವಿಚಿತ್ರ ಪಾತ್ರಗಳ ಮೂಲಕ ಅಚ್ಚರಿ ಮೂಡಿಸಿದ್ದ ರವಿ ಈ ಟ್ರೈಲರ್ ನಲ್ಲಿ ಲವರ್ ಬಾಯ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ.   ವಯಸ್ಸಿನ ತುಮುಲಗಳಿಗೆ ವಶವಾಗಿ, ನಶೆಯ ಜಗತ್ತಿನೊಳಗೆ ಪ್ರವೇಶಿಸುವ ಯುವಕನೋರ್ವನ ಕಥಾ ಸಾರಾಂಶವನ್ನು ಧ್ವನಿಸುವಂತಿರುವ ಈ ಟ್ರೈಲರ್ ಅನ್ನು ನಾಗ್ ವೆಂಕಟ್ ಪರಿಣಾಮಕಾರಿಯಾಗಿ  ಹೊರ ತಂದಿದ್ದಾರೆ. 


ಇದನ್ನೂ ಓದಿ : ʻಲಕ್ಷ್ಮೀ ನಿವಾಸʼ ಸಿದ್ಧೇ ಗೌಡ ಪಾತ್ರದಲ್ಲಿ ಮಿಂಚುತ್ತಿರುವ ಈ ನಟ ಯಾರು ಗೊತ್ತೇ!


ನಾಯಕ ರವಿ ಸೇರಿದಂತೆ ಒಂದಷ್ಟು ಪಾತ್ರಗಳ ಮಜಲುಗಳು ಈ ಮೂಲಕ ಪ್ರೇಕ್ಷಕರೆದುರು ತೆರೆದುಕೊಂಡಿವೆ. ವಿಶೇಷವಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾತ್ರವಿಲ್ಲಿ ಪ್ರಧಾನವಾಗಿಯೇ ಸೆಳೆದಿದೆ.ನಾಯಕನಿಗೆ ಸರಿ ಸಮನಾಗಿರುವ ಆ ಪಾತ್ರ ಕೂಡಾ ಈ ಟ್ರೈಲರ್ ನ ಹೈಲೈಟ್ ಗಳಲ್ಲೊಂದು. ಇನ್ನುಳಿದಂತೆ ಒಂದು ಪಾತ್ರದ ಸುತ್ತಲೇ ನಿರೀಕ್ಷೆ ಮೊಳೆತುಕೊಳ್ಳುವಂಥಾ ಅಪರೂಪದ ಸೆಳೆತವೊಂದು ಈ ಟ್ರೈಲರ್ ನಲ್ಲಿ ಕಾಣಿಸುತ್ತದೆ. ಅದರ ಜೊತೆಜೊತೆಗೇ ದೃಷ್ಯ ಶ್ರೀಮಂತಿಕೆಯೂ ಸ್ಪಷ್ಟವಾಗಿ ಗೋಚರಿಸುವಂತಿದೆ. ಮಾಸ್ ಮಾತ್ರವಲ್ಲದೇ ಭರಪೂರ ನಗುವಿಗೂ ಕೊರತೆಯೇನಿಲ್ಲ ಎಂಬ ನಿಖರ ಸಂದೇಶವೊಂದು ಈ ಟ್ರೈಲರ್ ಮೂಲಕವೇ ರವಾನಿಸಲಾಗಿದೆ. 


ರವಿ ಗೆ ಜೋಡಿಯಾಗಿ ಸುಕನ್ಯಾ ನಟಿಸಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದ ಸುಕನ್ಯಾ ಈ ಮೂಲಕ ನಾಯಕಿಯಾಗಿದ್ದಾರೆ. ವಾಸಿಕ್ ಅಲ್ಸಾದ್ ನಿರ್ಮಾಣ ಮಾಡಿರುವ ಕೈಲಾಸ ಚಿತ್ರಕ್ಕೆ ಆಶಿಕ್ ಅರುಣ್ ಸಂಗೀತ, ತ್ಯಾಗರಾಜನ್ ಸಂಕಲನ, ಲೇಖಕ್ ಎಂ ಸಾಹಿತ್ಯ, ವಿನೋದ್ ರಾಜೇಂದ್ರನ್ ಛಾಯಾಗ್ರಹಣ, ಧನಂಜಯ ಬಿ ನೃತ್ಯ ನಿರ್ದೇಶನವಿದೆ. ವಾಸಿಕ್ ಅಲ್ಸಾದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಾಫ್ಟ್‍ವೇರ್ ಜಗತ್ತಿನಿಂದ ಆಗಮಿಸಿರುವ ನಾಗ್ ವೆಂಕಟ್ ಚೊಚ್ಚಲ ನಿರ್ದೇಶನದ ಚಿತ್ರವಿದು.ಇದೇ ಮಾರ್ಚ್ 8ನೇ ತಾರೀಕಿನಂದು ಈ ಸಿನಿಮಾ ತೆರೆಗಾಣಲಿದೆ.


ಇದನ್ನೂ ಓದಿ : ಲಾಪತಾ ಲೇಡಿಸ್ ಸಿನಿಮಾ ಸ್ಕ್ರೀನಿಂಗ್ ನಲ್ಲಿ 3 ಈಡಿಯಟ್ಸ್ ಪುನರ್ಮಿಲನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.