Kaatera Trailer: ಸ್ಯಾಂಡಲ್‌ವುಡ್‌ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ 'ಕಾಟೇರ' ಚಿತ್ರದ ಆಕ್ಷನ್ ಪ್ಯಾಕ್ಡ್ ಟ್ರೇಲರ್‌ ಡಿಸೆಂಬರ್‌ 16 ರಂದು ರಿಲೀಸ್ ಆಗಿದ್ದು, ಇದನ್ನು ಹುಬ್ಬಳ್ಳಿಯಲ್ಲಿ ನಡೆದ ಸಿನಿಮಾದ ಟ್ರೇಲರ್‌ ಲಾಂಚ್‌ ಇವೆಂಟ್‌ನಲ್ಲಿ, ಸಿಎಂ ಸಿದ್ದರಾಮಯ್ಯ ಚಿತ್ರತಂಡಕ್ಕೆ ಶುಭ ಕೋರಿ ಬಿಡುಗಡೆ ಮಾಡಿದ್ದಾರೆ. ನಟ ದರ್ಶನ್ ಆರ್ಭಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದು, ಎಲಿವೇಷನ್ ಸೀನ್ಸ್, ಜಬರ್ದಸ್ತ್ ಡೈಲಾಗ್ಸ್, ದರ್ಶನ್ ಖಡಕ್ ಪರ್ಫಾರ್ಮೆನ್ಸ್‌ ಟ್ರೈಲರ್ ನೋಡುಗರಿಗೆ ಮಜಾ ಕೊಡ್ತಿದೆ. ಬಹಳ ವಿಭಿನ್ನವಾದ ಸಿನಿಮಾ ಎಂದು ಚಿತ್ರತಂಡ ಹೇಳ್ತಾ ಬರ್ತಿದ್ದು, ಹೇಳಿದಂತೆ ಒಂದು ವಿಭಿನ್ನ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಈ ಸಿನಿಮಾದಲ್ಲಿ ಭೀಮನಳ್ಳಿ ಎನ್ನುವ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು  ಹೇಳೋಕೆ ಡೈರೆಕ್ಟರ್‌ ತರುಣ್ ಸುಧೀರ್  ಬರ್ತಿದ್ದಾರೆ. 


COMMERCIAL BREAK
SCROLL TO CONTINUE READING

ಚಿತ್ರದ ಟ್ರೇಲರ್‌ನಲ್ಲಿ ಕುಲುಮೆಯಲ್ಲಿ ಮಚ್ಚು ತಟ್ಟುವ ನಾಯಕ ತನ್ನವರಿಗಾಗಿ ತನ್ನ ಊರಿಗಾಗಿ ಒದೆ ತಿನ್ನೋಕು ಸಿದ್ಧ, ಒದೆ ಕೊಡೋಕು ಸಿದ್ದವಾಗಿದ್ದು, ಊರಿನಲ್ಲಿ ಜಮೀನ್ದಾರರ ಆರ್ಭಟ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಸಿಲುಕಿದಾಗ ನಾಯಕ ತಿರುಗಿ ಬೀಳ್ತಾನೆ. ನಾವು ನಡೀಬೇಕು ಅಂದ್ರೆ ಅವರನ್ನು ತುಳಿಬೇಕು ಎಂದುಕೊಂಡ ಜಮೀನ್ದಾರರ ಮಟ್ಟಹಾಕುವ ನಾಯಕನಾಗಿ ದರ್ಶನ್ ಅಬ್ಬರಿಸಿದ್ದು, ಎರುರಾಳಿಗಳು ತಮಗೆ ಕಂಟಕವಾಗಿದ್ದ ನಾಯಕನನ್ನು ಮೋಸದ ಪ್ರಕರಣದಲ್ಲಿ ಜೈಲಿಗೆ ಹೋಗುವಂತೆ ಮಾಡಿರುತ್ತಾರೆ. ಆತನ ಅನುಪಸ್ಥಿತಿಯಲ್ಲಿ ಊರನ್ನೇ ಸ್ಮಶಾನ ಮಾಡಿ ಮೆರೆಯುತ್ತಿರುವಾಗ ಮತ್ತೆ ಜೈಲಿನಿಂದ ತಿರುಗಿ ಬರುವ ನಾಯಕ ಅವರನ್ನೆಲ್ಲಾ ಹೇಗೆ ಮೆಟ್ಟಿ ನಿಲ್ತಾನೆ ಅನ್ನೋದೇ ಚಿತ್ರದ ಒನ್‌ಲೈನ್ ಕಥೆ ಅನ್ನಿಸ್ತಿದೆ. ಅದನ್ನೇ ಫ್ಲ್ಯಾಶ್‌ಬ್ಯಾಕ್ ತಂತ್ರ ಅಳವಡಿಸಿ ಹೇಳುವ ಪ್ರಯತ್ನ ನಡೆದಿದೆ. 


"ನಮ್ಮ ಮನೆಗೆ ಬರೋಕೆ ಅವರಿಗೆ ಹೆದರಿಕೆ ಇರಬೇಕು.": ʻಡಂಕಿʼ, ʻಸಲಾರ್‌ʼಗೆ ಟಕ್ಕರ್‌ ಕೊಟ್ಟ ಚಾಲೆಂಜಿಂಗ್‌ ಸ್ಟಾರ್!


ನಟ ದರ್ಶನ್‌ ಹಳ್ಳಿ ಹೈದನಾಗಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ಮಾತನಾಡುವ ಶೈಲಿ ಬದಲಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ಗಮನ ಸೆಳೆದಿದ್ದು, ನಾಯಕನ ಅಕ್ಕ, ಭಾವ ಆಗಿ ಕುಮಾರ್ ಗೋವಿಂದ್, ಶೃತಿ ನಟಿಸಿದ್ದಾರೆ. ಊರಿನ ಜಮೀನ್ದಾರನಾಗಿ ನೆಗೆಟೀವ್ ರೋಲ್‌ನಲ್ಲಿ ಜಗಪತಿ ಬಾಬು ಮಿಂಚಿದ್ದು, ಇನ್ನುಳಿದಂತೆ ಅಚ್ಯುತ್ ಕುಮಾರ್, ವಿನೋದ್ ಆಳ್ವ, ಅವಿನಾಶ್, ಬಿರಾದಾರ್ ತಾರಾಗಣದಲ್ಲಿದ್ದಾರೆ. ರೆಗ್ಯೂಲರ್ ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ದರ್ಶನ್ ಒಂದು ವಿಭಿನ್ನ ಪ್ರಯತ್ನ ಮಾಡಿದ್ದು, ಈತನಿಗೆ ತರುಣ್ ಸುಧೀರ್ ಅಂಡ್ ಟೀಮ್ ಸಾಥ್ ಕೊಟ್ಟಿದೆ. ಮಾಸ್ತಿ ಹರಿತವಾದ ಸಂಭಾಷಣೆ ಚಿತ್ರಕ್ಕೆ ಪ್ಲಸ್ ಆಗುವ ಸಾಧ್ಯತೆಯಿದ್ದು, "ಒಂದು ಬಂದೂಕ್ ಅಲ್ಲ ನೂರ್ ಪಿರಂಗಿನೆ ಅಡ್ಡ ಬಂದ್ರು ನನ್ ತಡ್ದು ನಿಲ್ಸಕ್ಕಾಗಲ್ಲ" ಡೈಲಾಗ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ.


ದರ್ಶನ್‌ನ "ಎಲ್ಲಾ ಹಾವುಗಳು ತಲೆ ಎತ್ತುತಾವೆ ಧಣಿ, ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತೋದು" ಅನ್ನೋ ಮತ್ತೊಂದು ಡೈಲಾಗ್ ಕೂಡ ಮಜವಾಗಿದ್ದು, ಇನ್ನು ಟ್ರೇಲರ್‌ ಕೊನೆಗೆ ದರ್ಶನ್ ಕೋಣ ಹಿಡಿದು ವಯಸ್ಸಾದ ವ್ಯಕ್ತಿಯ ಲುಕ್‌ನಲ್ಲಿ ಬರುವ ಸನ್ನಿವೇಶ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡುತ್ತಿದೆ. ಮೊದಲ ನೋಟದಲ್ಲೇ ಝಲಕ್‌ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ರಿಪೀಟ್ ಮೋಡ್‌ನಲ್ಲಿ 'ಕಾಟೇರ' ಟ್ರೇಲರ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಡಿಸೆಂಬರ್ 29ಕ್ಕೆ ಫಸ್ಟ್ ಡೇ ಫಸ್ಟ್ ಫಿಕ್ಸ್ ಎನ್ನುತ್ತಿದ್ದು, ಸದ್ಯ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ವೀವ್ಸ್ ಸಾಧಿಸಿ ಟ್ರೇಲರ್ ಸದ್ದು ಮಾಡ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.