ದುಬೈನಲ್ಲಿ ಕಾಟೇರ ಹೌಸ್ಫುಲ್: ಅನಿವಾಸಿ ಕನ್ನಡಿಗರನ್ನು ಭೇಟಿಯಾದ ದರ್ಶನ್!
Kaatera Show In Dubai: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ದುಬೈನಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಾಯಿದ್ದು, ನಟ ದರ್ಶನ ಅನಿವಾಸಿ ಕನ್ನಡಿಗರನ್ನು ಭೇಟಿಯಾಗಲು ದುಬೈಗೆ ತೆರಳಿದ್ದರು.
Challenging Star Darshan At Dubai:ಚಂದನವನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿ, ಬಳಿಕ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಾಲು ಸಾಲು ಚಿತ್ರಗಳನ್ನು ಸೋತ ಬಳಿಕ ದರ್ಶನ್ ಹಿಟ್ ಸಿನಿಮಾ ನೀಡಿ, ಕಾಟೇರ ನೋಡಿದ ಪ್ರೇಕ್ಷಕರು ಇದು ದರ್ಶನ್ ದಿ ಬೆಸ್ಟ್ ಚಿತ್ರ ಎನ್ನುತ್ತಿದ್ದಾರೆ. ಕಾಟೇರ ಕಥೆ ಪ್ರೇಕ್ಷಕರ ಮನಗೆದ್ದಿದ್ದು, ಗಲ್ಲಾ ಪೆಟ್ಟಿಗೆಯಲ್ಲಿ ಕಾಟೇರ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಾಯಿದೆ.
ಹೌದು.. ಕಾಟೇರ ಸಿನಿಮಾ ದಾಖಲೆ ಮೇಲೆ ದಾಖಲೆ ಮಾಡುತ್ತಿದ್ದು, ಚಿತ್ರ ರಿಲೀಸ್ ಆದಾಗನಿಂದಲೂ ದಾಖಲೆ ಮಟ್ಟಕ್ಕೆ ಟಿಕೆಟ್ ಬುಕಿಂಗ್ ಕೂಡ ಆಗಿವೆ. ಸದ್ಯ ಈ ಚಿತ್ರ ಮೊದಲ ದಿನದಿಂದ ಹಿಡಿದು 7 ನೇ ದಿನದವರೆಗೂ ಕಲೆಕ್ಷನ್ ವಿಚಾರದಲ್ಲಿ ಡ್ರಾಪ್ ಆಗದೆ ಕೋಟಿ ಲೆಕ್ಕ ದಾಖಲೆ ಮಾಡಿದೆ. ಅಷ್ಟೊಂದು ಕ್ರೇಜ್ ಇರೋ ಈ ಚಿತ್ರ ಇದೀಗ 100 ಕೋಟಿ ಕ್ಲಬ್ ಸೇರಿಕೊಂಡಿದೆ.
ಒಮನ್‌ನಲ್ಲಿ ಕಾಟೇರ ಹೌಸ್ ಫುಲ್ ಪ್ರದರ್ಶನದ ವಿಡಿಯೋ ವೈರಲ್!
ಕಾಟೇರ ಸಿನಿಮಾ ಕನ್ನಡಿಗರ ಮೆಚ್ಚುಗೆಯನ್ನ ಪಡೆಯುತ್ತಿರೋ ಕಾಟೇರ ದಿನೇ ದಿನೇ ತನ್ನ ರಿಲೀಸ್ ವಿಸ್ತರಿಸುತ್ತಿದ್ದು, ನೆರೆ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಿದೆ. ಇದೀಗ ಬೇರೆ ಬೇರೆ ದೇಶಗಳಲ್ಲೂ ಡಿ-ಬಾಸ್ ಚಿತ್ರ ರಿಲೀಸ್ ಆಗಿದ್ದು, ಜನವರಿ-4 ರಂದು ಕತಾರ್ ಮತ್ತು ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗಿದೆ. ಜನವರಿ-5 ರಂದು ಅಮೆರಿಕಾದಲ್ಲಿ ಕನ್ನಡದ ಕಾಟೇರ ತೆರೆ ಕಂಡಿದೆ.
ಕಾಟೇರ ಸಿನಿಮಾ ರಿಲೀಸ್ ಆಗಿ ಒಂದು ವಾರ ಅಷ್ಟೆ ಕಳೆದಿದ್ದು, ಆದರೆ ಅಷ್ಟರಲ್ಲಿಯೇ ಟಿಕೆಟ್ ಬುಕಿಂಗ್, ಕಲೆಕ್ಷನ್, ಥಿಯೇಟರ್ ಅಬ್ಬರ ಹೀಗೆ ಎಲ್ಲರದಲ್ಲೂ ಗಮನ ಸೆಳೆದಿದೆ. ಈ ದಾಖಲೆಯ ನಡುವೆ ಕಾಟೇರ ಇದೀಗ ವಿದೇಶಕ್ಕೂ ಕಾಲಿಟ್ಟಿದೆ. ದುಬೈನಲ್ಲಿ ‘ಕಾಟೇರ’ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಕಾರಣ, ದರ್ಶನ್ ದುಬೈಗೆ ತೆರಳಿ, ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿ ಚಿತ್ರದ ಪ್ರಚಾರ ಮಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.