Kaatera world television premiere : ಅಭಿಮಾನಿಗಳು ಮೆಚ್ಚಿದ ಕನ್ನಡ ಸಿನಿಮಾಗಳನ್ನ ಕಿರುತೆರೆಯಲ್ಲಿನೆ ನೋಡುವ ಅವಕಾಶ ಮಾಡಿಕೊಡುವ ಕೆಲಸವನ್ನು ಜೀ ಕನ್ನಡ ವಾಹಿನಿ, ಹಲವು ವರ್ಷಗಳಿಂದ ಮಾಡುತ್ತಲೆ ಬಂದಿದೆ. ಅದೇ ಸಂಪ್ರದಾಯವನ್ನ ಈಗಲೂ ಮುಂದುವರಿಸಲು ಹೊರಟಿರುವ ಜೀ ಕನ್ನಡ, ಈ ಬಾರಿ 2023ರ ಸೂಪರ್‌ ಹಿಟ್‌ಸಿನಿಮಾ ʼಕಾಟೇರ್ ʼ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಮಾಡಲು ಸಿದ್ದತೆ ನಡೆಸಿದೆ.


COMMERCIAL BREAK
SCROLL TO CONTINUE READING

ಹೌದು.. ಮಾಸ್ ಸಿನಿಮಾ ಮಾಡಿದ್ರು. ಕ್ಲಾಸ್ ಆಡಿಯನ್ಸ್‌ಗಳನ್ನ ಮನೋರಂಜಿಸುವುದನ್ನು ಮರೆಯದ ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೆಳ್ಳಿತೆರೆಯ ಎನಾರ್ 'ಮಾಸ್' ಹಿಟ್ ಸಿನಿಮಾ ಎಂದೇ ಖ್ಯಾತಿ ಪಡೆದ ಕಾಟೇರ ನೋಡಲು ಕಾದಿರುವ ಕನ್ನಡಿಗರಿಗೆ, ಈ ಯುಗಾದಿ ಹಬ್ಬ ಸಖತ್ ಸ್ಪೆಷಲ್ ಆಗಲಿದೆ. ಭಾರತದ ನೆಲದಲ್ಲಿ ಹಾಸು ಹೊಕ್ಕಾಗಿ ಹೋಗಿದ್ದ ಜಾತಿ ಪದ್ದತಿ, ಮೇಲು ಕೀಳು ಎಂಬ ತಾರತಮ್ಯ ಮನುಷ್ಯನ್ನನ್ನು ಮನುಷ್ಯರೇ ಹೇಗೆ ನಡೆಸಿಕೊಳ್ಳುತ್ತಿದ್ದರು ಎಂದು ತೋರಿಸುವುದರ ಜೊತೆಗೆ, ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ಭಾರತದಲ್ಲಿ ಬಂದಾಗ, ಅಂದಿನ ಜನ ಅನುಭವಿಸಿದ ನೋವು ಯಾತನೆಗಳನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹೆಣೆದಿರುವ ಕಾಟೇರ ಸಿನಿಮಾ, ಜನರ ಮನಸ್ಸನ ಗೆಲ್ಲುವ ಮೂಲಕ ಬಾಕ್ಸ್ ಆಫೀಸಿನಲ್ಲಿ ಸೂಪರ್ ಹಿಟ್ ಆಯಿತು.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನ ಅವರ ಜೋಡಿಯನ್ನ ಮೆಚ್ಚಿಕೊಂಡಿರುವ ಅಭಿಮಾನಿಗಳು, ಸಿನಿಮಾದ ಹಾಡಿನಿಂದ ಹಿಡಿದು ಡೈಲಾಗ್ ವರೆಗೆ ಎಲ್ಲವನ್ನು ಟ್ರೆಂಡಿಂಗ್ ಮಾಡುವ ಮೂಲಕ ತಮ್ಮ ಪ್ರೀತಿಯನ್ ತೋರಿಸಿದ್ದು ಈಗ ಇತಿಹಾಸ, ಸಿನಿಮಾ ರಿಲೀಸ್ ಆಗಿ 4 ತಿಂಗಳು ಕಳೆದರು ಕ್ರೇಜ್ ಕಮ್ಮಿಯಾಗದ ಕಾಟೇರ ಸಿನಿಮಾವನ್ನು ಥಿಯೇಟರ್‌ನಿಂದ ಹೋಂ ಥಿಯೇಟರ್‌ಗೆ ತರುವ ಕೆಲಸವನ್ನ ಇದೇ ಎಪ್ರಿಲ್ 7 ನೇ ತಾರೀಖು ಭಾನುವಾರ ಸಂಜೆ 7.00ಕ್ಕೆ ನಿಮ್ಮ ನೆಚ್ಚಿನ ಜೀ ಕನ್ನಡ ಮಾಡುತ್ತಿದೆ.


ಈ ಯುಗಾದಿ ಹಬ್ಬದಂದು ಮನೋರಂಜನೆಯ ಮತ್ತೊಂದು ಪರ್ವ ಶುರುಮಾಡಲಿರುವ ಜೀ ಕನ್ನಡ, ಅಭಿಮಾನಿಗಳ ಮನೆಮನಗಳಿಗೆ ಹೊಸತನದ ಜೊತೆ ಮನರಂಜನೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ