Kaatera Title Controversy: ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಬೆಳ್ಳಿ ತೆರೆ ಮೇಲೆ ರಾರಾಜಿಸಿ ಈಗಾಗಲೇ ಐವತ್ತು ದಿನಗಳು ಕಳೆದಿವೆ. ಚಿತ್ರತಂಡ ಸದ್ಯ 50 ದಿನಗಳು ಪೂರೈಸಿದ ಹಿನ್ನೆಲೆ ಸೆಲೆಬ್ರೇಷನ್‌ ಕೂಡ ನಡೆದಿದ್ದು, ಆದರೆ ಟೈಟಲ್ ವಿವಾದ ಮಾತ್ರವಿನ್ನು ಚಾಲ್ತಿಯಲ್ಲಿದೆ.‌ ಈ ವಿಚಾರ ಎಲ್ಲಡೆ ಚರ್ಚೆಯಾಗುತ್ತಾಯಿದ್ದು, ಸದ್ಯ ಸಿನಿಮಾದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಕಾಟೇರ ಚಿತ್ರ ರಾಜ್ಯದಲ್ಲಿ ಮಾತ್ರವಲ್ಲದೇ ಹೊರ ರಾಜ್ಯ, ವಿದೇಶದಲ್ಲಿಯೂ ತೆರೆಕಂಡು ಸಾಕಷ್ಟು ಅರ್ಭಟಿಸಿ ಗೆಲವನ್ನು ಕಂಡಿದೆ. ಕಾಟೇರ ಸಿನಿಮಾ 50 ದಿನಗಳನ್ನು ಪೂರೈಸಿದೆ ಹಿನ್ನೆಲೆ ಬೆಂಗಳೂರಿನ ಪ್ರಸನ್ನ ಥಿಯೇಟರ್‌ನಲ್ಲಿ ಸಂಭ್ರಮ ಜರುಗಿದ್ದು, ಅಲ್ಲಿಗೆ ಆಗಮಿಸಿದ ರಾಕ್ ಲೈನ್ ವೆಂಕಟೇಶ್ ವೇದಿಕೆ ಮೇಲೆ ಕಾಟೇರ ಚಿತ್ರದ ಟೈಟಲ್‌ ಯಾರು ಕೊಟ್ಟಿದ್ದಾರೆಂದು ಹೇಳಿದ್ದಾರೆ. ಆ ವೇಳೆ ಮೆಜೆಸ್ಟಿಕ್‌ ಸಿನಿಮಾದ ನಿರ್ಮಾಪಕನ ಕುರಿತು ಮಾತನಾಡಿದ್ದಾರೆ.


ಇದನ್ನೂ ಓದಿ: ಆಗ ದರ್ಶನ್.. ಈಗ ಭರತ್.. ಎರಡು ದಶಕಗಳ ನಂತರ ಮತ್ತೆ ಮೆಜೆಸ್ಟಿಕ್ ನಲ್ಲಿ ಮರಿದಾಸನ ಹವಾ!


ನಿರ್ಮಾಪಕ ರಾಕ್‌ವೈನ್‌ ವೆಂಕಟೇಶ್‌ ಕಾಟೇರ ಸಿನಿಮಾ ಟೈಟಲ್ ಅನ್ನ ರಾಮ್ ಮೂರ್ತಿ ಅವರೇ ಕೊಟ್ಟಿದ್ದಾರೆಂದು ಹೇಳಿದ್ದಾರೆ. ಈ ಹಿಂದೆ ಕಾಟೇರ ಚಿತ್ರದ ಟೈಟಲ್‌ ಅನ್ನು ದರ್ಶನ್‌ ನಾನು ಇಟ್ಟಿದ್ದು, ಆದರೆ ಇದನ್ನ ಬೇರೆ ಯಾರೂ ಕೊಟ್ಟಿಲ್ಲ ಎಂದು ಹೇಳಿದ್ದರು. ಅದೇ ಸಮಯದಲ್ಲಿ ಮದಗಜ ಸಿನಿಮಾದ ನಿರ್ದೇಶಕ ಮಹೇಶ್ ಕೂಡ ಬಂದು ಚಿತ್ರದ ಟೈಟಲ್‌ ಯಾರ ಹತ್ತಿರ ಇತ್ತು ಅಂತ ಕೇಳಿಕೊಂಡಿದ್ದರು. 


ಇನ್ನೊಂದು ಕಡೆ ನಟ ದರ್ಶನ್‌ ನಿರ್ಮಾಪಕ ಉಮಾಪತಿಗೆ ಕಾಟೇರ ಚಿತ್ರದ ಕಥೆ ನಾನು ಮಾಡಿಸಿದ್ದು ಅಂತಲೇ ಹೇಳಿದ್ದೀರಿ ಅಲ್ಲವೇ? ಅಷ್ಟು ಒಳ್ಳೆಯ ಕಥೆಯನ್ನ ನೀವು ಯಾಕೆ ಬಿಟ್ರಿ? ನಿಮ್ಮ ಜಡ್ಜಮೆಂಟ್ ಸರಿ ಇದ್ಮೇಲೆ ಯಾಕೆ ಮಾಡಲಿಲ್ಲ  ಅಂತ ಪ್ರಶ್ನಿಸಿದರು. ಈ ರೀತಿ ಕಾಟೇರ ಚಿತ್ರದ ಟೈಟಲ್‌ ಸೌಂಡ್‌ ಮಾಡಿತ್ತು. ಒಂದು ಕಡೆ ದರ್ಶನ್‌, ಇನ್ನೊಂದೆಡೆ ನಿರ್ಮಾಪಕ ಉಮಾಪತಿ ಟೈಟಲ್ ನನ್ನದು ಅಂತ ಹೇಳಿದ್ದರು. ಒಂದು ಸಿನಿಮಾ ಸೂಪರ್‌ ಹಿಟ್‌ ಆದರೇ ಸಾಕು ಹೇಗೆಲ್ಲಾ ವಿವಾದಕ್ಕೆ ಒಳಗಾಗುತ್ತದೆ ಅನ್ನೋದಕ್ಕೆ ಒಳ್ಳೆಯ ಉದಾಹರಣೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.