Kabzaa box office collection day 2 : ನಟ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಎಲ್ಲೆಲ್ಲೂ ಆರ್ಭಟಿಸುತ್ತಿದೆ. ನೂವರು ಸೂಪರ್‌ ಸ್ಟಾರ್‌ಗಳ ಅಬ್ಬರಕ್ಕೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ. ಬಹುನಿರೀಕ್ಷಿತ ಕಬ್ಜ ಸಿನಿಮಾ ವಿಶ್ವಾದ್ಯಂತ ಸುಮಾರು 4 ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಕಂಡಿದೆ. ಕಬ್ಜ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ಮೊದಲ ದಿನ ಕಬ್ಜ ಗಲ್ಲಾಪೆಟ್ಟಿಯಲ್ಲಿ 54 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದೀಗ ಎರಡನೇ ದಿನದ ಕಲೆಕ್ಷನ್‌ ಮೂಲಕ ಬಾಕ್ಸಾಫೀಸ್‌ ಉಡೀಸ್‌ ಮಾಡಿದೆ. 


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಕಬ್ಜ ಬಾಕ್ಸಾಫೀಸ್‌ನಲ್ಲಿ ಒಂದನೇ ದಿನ ವಿಶ್ವಾದ್ಯಂತ ಎಲ್ಲಾ ಭಾಷೆಗಳಲ್ಲಿ 54 ಕೋಟಿ ರೂಪಾಯಿಗಳವರೆಗೆ ಗಳಿಸಿದೆ. ಆರ್ ಚಂದ್ರು ನಿರ್ದೇಶನದ ಈ ಬಿಗ್‌ ಬಜೆಟ್‌ ಸಿನಿಮಾ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಇತ್ತು. ಇದೀಗ ಎರಡನೇ ದಿನ 100 ಕೋಟಿ ಗಳಿಕೆ ಮಾಡಿದೆ.


ಇದನ್ನೂ ಓದಿ : Kabzaa collection: ಕಬ್ಜ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?


ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಮಾತನಾಡುವುದಾದರೆ, ಸಿನಿಪ್ರಿಯರು ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದಲ್ಲಿಯೇ ನಾನೂರು ಸ್ಕ್ರೀನ್ ಗಳಲ್ಲಿ‌ ಕಬ್ಜ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಉಪ್ಪಿ ನಟನೆ, ಕಿಚ್ಚನ ಖಾಕಿ ಖದರ್‌, ಶಿವರಾಜ್‌ಕುಮಾರ್‌ ಎಂಟ್ರಿ ಹಾಗೂ ಶ್ರಿಯಾ ಅಂದ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಕನ್ನಡ ಚಿತ್ರರಂಗದ ಮೂರು ದಿಗ್ಗಜರು ನಟಿಸಿರುವ ಸಿನಿಮಾ ಕಬ್ಜದಲ್ಲಿ ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳು ಸಿನಿಮಾದಲ್ಲಿದೆ.


1960-70 ರ ಕಾಲಘಟ್ಟದ ಕತೆ ಹೇಳುವ ಸಿನಿಮಾದಲ್ಲಿ ಉಪ್ಪಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದು, ನೋಡುಗರಿಗೆ ಥ್ರಿಲ್‌ ನೀಡುತ್ತಿದೆ. ಕಿಚ್ಚ ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಈ ಸಿನಿಮಾದಲ್ಲಿ ಮಿಂಚಿದ್ದು, ಶಿವಣ್ಣನ ಪಾತ್ರ ನೋಡುಗರ ಹೃದಯ ಗೆಲ್ಲುತ್ತಿದೆ. ಬಹುಭಾಷಾ ನಟಿ ಶ್ರಿಯಾ ಸರಣ್‌ ಬ್ಯೂಟಿ ಹಾಗೂ ನಟನಗೆ ಪ್ರೇಕ್ಷಕ ಪ್ರಭು ಫಿದಾ ಆಗುತ್ತಿದ್ದಾನೆ. ಹಾಗೆಯೇ ತೆಲುಗಿನ ಮುರಳಿ ಶರ್ಮಾ, ಕೋಟಾ ಶ್ರೀನಿವಾಸ್‌ ರಾವ್‌, ಪೊಸಾನಿ ಮುರಳಿ ಕೃಷ್ಣ, ದೇವ್‌ ಗಿಲ್‌, ನವಾಬ್‌ ಶಾ, ಜಾನ್‌ ಕೊಕೇನ್‌, ಕಬೀರ್‌ ದುಹಾನ್‌ ಸಿಂಗ್‌, ಕಾಮರಾಜನ್‌, ದಾನಿಶ್‌ ಅಖ್ತರ್‌, ಲಕ್ಕಿ ಲಕ್ಷ್ಮಣ್‌, ಅವಿನಾಶ್‌, ಸುನೀಲ್‌ ಪುರಾಣಿಕ್‌, ನೀನಾಸಂ ಅಶ್ವತ್ಥ, ಪ್ರಮೋದ್‌ ಶೆಟ್ಟಿ ಸೇರಿದಂತೆ ಬಹುದೊಡ್ಡ ತಾರಾಗಣ ಸಿನಿಮಾದಲ್ಲಿದೆ. 


ಇದನ್ನೂ ಓದಿ : Oscars 2023 ನಲ್ಲಿ RRR ತಂಡಕ್ಕಿರಲಿಲ್ಲ ಉಚಿತ ಟಿಕೆಟ್‌ ! ಶೋಗಾಗಿ ಕೋಟಿ ಕೋಟಿ ಖರ್ಚು ಮಾಡಿದ ರಾಜಮೌಳಿ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.