Kabzaa OTT Rights : ದಾಖಲೆಯ ಮೊತ್ತಕ್ಕೆ ʻಕಬ್ಜʼ OTT ಹಕ್ಕುಗಳ ಮಾರಾಟ!
Kabzaa Movie : ಬಹು ನಿರೀಕ್ಷಿತ ಹೈ ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಚಿತ್ರ ಕಬ್ಜ ನಾಳೆ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಉಪೇಂದ್ರ, ಶ್ರಿಯಾ ಶರಣ್, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಹಲವಾರು ನಟರನ್ನು ಒಳಗೊಂಡಿರುವ ಈ ಚಿತ್ರವನ್ನು ಆರ್. ಚಂದ್ರು ಅವರು ನಿರ್ದೇಶಿಸಿದ್ಧಾರೆ.
Kabzaa Movie : ಬಹು ನಿರೀಕ್ಷಿತ ಹೈ ಆಕ್ಟೇನ್ ಆಕ್ಷನ್ ಥ್ರಿಲ್ಲರ್ ಚಿತ್ರ ಕಬ್ಜ ನಾಳೆ ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ಉಪೇಂದ್ರ, ಶ್ರಿಯಾ ಶರಣ್, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಜಗಪತಿ ಬಾಬು, ಪ್ರಕಾಶ್ ರಾಜ್ ಸೇರಿದಂತೆ ಹಲವಾರು ನಟರನ್ನು ಒಳಗೊಂಡಿರುವ ಈ ಚಿತ್ರವನ್ನು ಆರ್. ಚಂದ್ರು ಅವರು ನಿರ್ದೇಶಿಸಿದ್ಧಾರೆ. ವರದಿಯ ಪ್ರಕಾರ, ಕಬ್ಜ ಸಿನಿಮಾದ OTT ಹಕ್ಕುಗಳನ್ನು ಈಗಾಗಲೇ ಪ್ರಮುಖ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗೆ ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಕಬ್ಜ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋಗೆ 140 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ.
ಕಬ್ಜ ಮಾರ್ಚ್ 17, 2023 ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಶ್ವಾದ್ಯಂತ 4,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ : ಶಿವಾಜಿ ಸುರತ್ಕಲ್ 2 ಚಿತ್ರದ ಟ್ವಿಂಕಲ್ ಸಾಂಗ್ ರಿಲೀಸ್
ಕಬ್ಜವನ್ನು ಭಾರತದಲ್ಲಿ ದರೋಡೆಕೋರರ ಕಥೆಯನ್ನು ನಿರೂಪಿಸುವ ರೆಟ್ರೋ ಕಾಲದ ಕತೆ ಹೇಳುವ ಚಲನಚಿತ್ರ ಎಂದು ಹೇಳಲಾಗುತ್ತದೆ, ಇದು 1942 ರಿಂದ 1984 ರ ನಡುವೆ ನಡೆಯುತ್ತದೆ ಮತ್ತು ಮಾಫಿಯಾ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುವ ಸ್ವಾತಂತ್ರ್ಯ ಹೋರಾಟಗಾರನ ಮಗನ ಸುತ್ತ ಕತೆ ಸುತ್ತುತ್ತದೆ.
ಚಿತ್ರವನ್ನು ಹಿಂದಿಯಲ್ಲಿ ವಿತರಿಸಲಿರುವ ಆನಂದ್ ಪಂಡಿತ್ ಅವರು “ಚಿತ್ರವು ಭೂಗತ ಜಗತ್ತಿನ ಕಾಲ್ಪನಿಕ ಕಥೆಯಾಗಿದೆ ಮತ್ತು ಯಾವುದೇ ಭೂಗತ ಪಾತಕಿಯಿಂದ ಸ್ಫೂರ್ತಿ ಪಡೆದಿಲ್ಲ. ಕಬ್ಜ ಚಿತ್ರವು ಸ್ವಾತಂತ್ರ್ಯದ ಅವಧಿಯನ್ನು ಬಿಂಬಿಸುವ ಅವಧಿಯ ಚಿತ್ರವಾಗಿದೆ. ಅಂಡರ್‌ವರ್ಲ್ಡ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿದೆ" ಎಂದು ಹೇಳಿದ್ದರು.
ಇದನ್ನೂ ಓದಿ : Kabzaa Movie : ವಿಶ್ವದಾದ್ಯಂತ 4,000 ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ ʻಕಬ್ಜʼ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.