Kajal Aggarwal Entry To Kannappa: ಟಾಲಿವುಡ್‌ ಸ್ಟಾರ್‌ ನಟ ವಿಷ್ಣು ಮಂಚು ಅಭಿನಯದ ಬಹುನಿರೀಕ್ಷಿತ ʻಕಣ್ಣಪ್ಪʼ ಸಿನಿಮಾ ತಂಡಕ್ಕೆ ನಟಿ ಕಾಜಲ್‌ ಅಗರ್‌ವಾಲ್ ಸೇರಿಕೊಂಡಿದ್ದಾರೆ. ಹಲವಾರು ದಿನಗಳಿಂದ ಪಾತ್ರವರ್ಗದ ವಿಚಾರವಾಗಿ ಕಣ್ಣಪ್ಪ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದ್ದು, ಇದೀಗ ಈ ಚಿತ್ರತಂಡ ಹೊಸ ಅಪ್‌ಡೇಟ್‌ ನೀಡಿದೆ. 


COMMERCIAL BREAK
SCROLL TO CONTINUE READING

ತೆಲುಗು ನಟ ವಿಷ್ಣು ಮಂಚು ಮತ್ತು ಕಾಜಲ್ ಅಗರ್ವಾಲ್ ಇದಕ್ಕೂ ಮುಂಚೆ ಟಾಲಿವುಡ್‌ನ  ಮೊಸಗಲ್ಲು ಚಿತ್ರದಲ್ಲಿ ಸಹೋದರ ಮತ್ತು ಸಹೋದರಿಯಾಗಿ ತೆರೆ ಹಂಚಿಕೊಂಡಿದ್ದರು. ಇದೀಗ ಇವರಿಬ್ಬರೂ ಮತ್ತೆ ಪ್ಯಾನ್‌ ಇಂಡಿಯಾ ಸಿನಿಮಾ ʻಕಣ್ಣಪ್ಪʼ ಮೂಲಕ ಎರಡನೆ ಬಾರಿಗೆ ಮತ್ತೆ ಒಟ್ಟಿಗೆ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಕಾಜಲ್‌ ಪಾತ್ರದ ಬಗ್ಗೆ ಸಿನಿತಂಡ ರಿವೀಲ್‌ ಮಾಡಿಲ್ಲ.


ಇದನ್ನೂ ಓದಿ: Rashmika Mandanna To Pooja Hegde: ಬಾಲಿವುಡ್‌ನಲ್ಲಿ ಅಭಿನಯಸಿ ಸೈ ಎನಿಸಿಕೊಂಡಿರುವ ಸೌತ್‌ ತಾರೆಯರು ಯಾರೆಲ್ಲಾ ಗೊತ್ತೇ?


ನಟಿ ಕಾಜಲ್‌ ಅಗರ್‌ವಾಲ್‌ ವಿಶೇಷವಾದ ಪಾತ್ರವೊಂದರಲ್ಲಿ ನಟಿಸುವ ಮೂಲಕ ಕಣ್ಣಪ್ಪ ಸಿನಿಮಾದ ಕಾಣಿಸಿಕೊಳ್ಳಲಿದ್ದಾರೆ. ಕಣ್ಣಪ್ಪ ಚಿತ್ರ ಹೈ ಬಜೆಟ್‌ನ ಪ್ರಾಗ್ಜೆಟ್‌ ಆಗಿದ್ದು, ಸದ್ಯ ಶೂಟಿಂಗ್‌ ಕೆಲಸಗಳಲ್ಲಿ ಬ್ಯುಸಿಯಾಗಿ ನಡೆಯುತ್ತಿದೆ. ಇನ್ನೂ ಈ ಸಿನಿಮಾದಲ್ಲಿ ಮೋಹನ್ ಬಾಬು, ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್ ಮತ್ತು ಶರತ್‌ಕುಮಾರ್ ಸೇರಿ ದೊಡ್ಡ ತಾರಾಬಳಗವೇ ಇದೆ.


ಯಂಗ್‌ ರೆಬಲ್‌ ಸ್ಟಾರ್‌ ಪ್ರಭಾಸ್ ಸಹ ಕೆಲವು ದಿನಗಳ ಹಿಂದೆ ಕಣ್ಣಪ್ಪ ತಂಡವನ್ನು ಸೇರಿಕೊಂಡಿದ್ದು, ಇದೀಗ  ಕಾಜಲ್‌ ಅಗರ್‌ವಾಲ್‌  ಕೂಡ ಸೇರಿಕೊಂಡಿದ್ದಾರೆ. ಮೋಹನ್ ಬಾಬು ನಿರ್ಮಾಣದ  ಕಣ್ಣಪ್ಪ ಸಿನಿಮಾಗೆ ಮುಖೇಶ್ ಕುಮಾರ್ ಸಿಂಗ್ ಆಕ್ಷನ್‌ ಕಟ್‌ ಹೇಳುತ್ತಿದ್ದು, ಚಿತ್ರೀಕರಣದ ಮುಕ್ತಾಯದ ಹಂತ ಚಿತ್ರತಂಡ ಶೀಘ್ರದಲ್ಲಿ ರಿಲೀಸ್‌ ಡೇಟ್‌ ಕೂಡ ಅನೌನ್ಸ್‌ ಮಾಡಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.