ನವದೆಹಲಿ: ಬಾಲಿವುಡ್ ನಲ್ಲಿ ಸಿಂಘಂ ಗರ್ಲ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಸೌತ್ ಸೂಪರ್ ಸ್ಟಾರ್ ಕಾಜಲ್ ಅಗರ್ವಾಲ್ (Kajal Aggarwal)  ಗೆ ಸಂಬಂಧಿಸಿದ ಸಂತಸದ ಸುದ್ದಿಯೊಂದು ಪ್ರಕಟಗೊಂಡಿದೆ. ಶೀಘ್ರದಲ್ಲಿಯೇ ಕಾಜಲ್ ತನ್ನ ರಿಯಲ್ ಲೈಫ್ ನಲ್ಲಿ ವಧುವಾಗಲು ಸಿದ್ಧತೆ ನಡೆಸಿದ್ದಾಳೆ. ತನ್ನ ಮದುವೆಯ ವಿಷಯದ ಕುರಿತಾದ ಮಾಹಿತಿ ಸ್ವತಃ ಕಾಜಲ್ ಅವರೇ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾಳೆ. ಕಾಜಲ್ ತನ್ನ ಮದುವೆಯ ಮಮತೆಯ ಕರೆಯೋಲೆಯನ್ನು ಸಾಮಾಹಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾಳೆ.


ಕಾಜಲ್ ಅಗರ್ವಾಲ್ ಅವರ Unseen Photos ವೈರಲ್


COMMERCIAL BREAK
SCROLL TO CONTINUE READING

ಕಳೆದ ವರ್ಷ, ಕಾಜಲ್ ಅಗರ್ವಾಲ್ ಅವರು ಚಿತ್ರರಂಗಕ್ಕೆ ಸೇರದ ವ್ಯಕ್ತಿಯನ್ನು ಮದುವೆಯಾಗುವುದಾಗಿ ಬಹಿರಂಗಪಡಿಸಿದ್ದರು. ಲಕ್ಷ್ಮಿ ಮಂಚು ಅವರ ತೆಲುಗು ಭಾಷೆಯ ಚಾಟ್ ಶೋ 'ಫೀಟ್ ಅಪ್ ವಿಥ್ ದಿ ಸ್ಟಾರ್ಸ್ ತೆನಲ್ಲಿ, ಕಾಜಲ್ ಅವರು 2020 ರಲ್ಲಿ ಸೆಟ್ಲ್ ಆಗಲು ಯೋಜಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. 'ತಮ್ಮ ಐಡಲ್ ಮ್ಯಾನ್ ಬಗ್ಗೆ ಮಾತನಾಡುತ್ತಾ, 'ಅಂತಹ ಹಲವು ವಿಷಯಗಳಿವೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಆ ವ್ಯಕ್ತಿ ಅಧಿಕಾರವಾದಿ, ಕಾಳಜಿಯುಳ್ಳ ಮತ್ತು ಆಧ್ಯಾತ್ಮಿಕ ಪ್ರವೃತ್ತಿಯವರಾಗಿರಬೇಕು' ಎಂದು ಕಾಜಲ್ ಹೇಳಿದ್ದರು.