Bhairava anthem song : ಕೇವಲ 12 ದಿನಗಳಲ್ಲಿ ʼಕಲ್ಕಿ 2898 ಎಡಿʼ ಚಿತ್ರ ತೆರೆ ಕಾಣಲಿದೆ. ಇದರ ಬೆನ್ನಲ್ಲೆ ಚಿತ್ರ ತಂಡ ಪ್ರಚಾರದ ವೇಗ ಹೆಚ್ಚಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ನಡುವೆ ʼಭೈರವ ಗೀತೆʼ ಪ್ರೋಮೋ ರಿಲೀಸ್‌ ಆಗಿದ್ದು, ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.


COMMERCIAL BREAK
SCROLL TO CONTINUE READING

ಈ ಹಾಡನ್ನು ದಿಲ್ಜಿತ್ ದೊಸಾಂಜ್ ಹಾಡಿದ್ದಾರೆ. ಪ್ರೋಮೋದಲ್ಲಿ, ದಿಲ್ಜಿತ್‌ ಕಪ್ಪು ಕೋಟ್ ಧರಿಸಿ ಸಿಖ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ, ಪ್ರಭಾಸ್ ಯೋಧನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಸಿನಿಮಾಗೆ ವೇಗ ನೀಡಲಿದೆ. ಮೇಲಾಗಿ ಪ್ರಭಾಸ್ ಭೈರವನ ಪಾತ್ರದ ಕುರಿತು ಹಾಡನ್ನ ರಚಿಸಲಾಗಿದೆ.


ಇದನ್ನೂ ಓದಿ :'ರಾಬಿನ್‌ಹುಡ್‌'ಗೆ ಶ್ರೀಲೀಲಾ ಲೇಡಿಬಾಸ್..! ಮತ್ತೆ ಒಂದಾಯ್ತು 'ಎಕ್ಸ್-ಅರ್ಡಿನರಿ ಮ್ಯಾನ್' ಜೋಡಿ..!


ಪೂರ್ಣ ಹಾಡು ನಾಳೆ (ಭಾನುವಾರ) ಬಿಡುಗಡೆಯಾಗಲಿದೆ. ಇದರಲ್ಲಿ ಪ್ರಭಾಸ್ ಮತ್ತು ದಿಲ್ಜಿತ್‌ ನೃತ್ಯದ ಮೂಲಕ ಮನರಂಜಿಸಲು ರೆಡಿಯಾಗಿದ್ದಾರೆ. ಸಾಂಗ್‌ಗೆ ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ. ಕಲ್ಕಿ ಚಿತ್ರ ಇದೇ ತಿಂಗಳು 27 ರಂದು ಬಿಡುಗಡೆಯಾಗಲಿದೆ.  


ಇತ್ತೀಚಿಗೆ ಬಿಡುಗಡೆಯಾದ ಈ ಚಿತ್ರದ ಗ್ಲಿಂಪ್ಸ್, ಟೀಸರ್ ಮತ್ತು ಟ್ರೇಲರ್ ನಿರೀಕ್ಷೆ ಹೆಚ್ಚಿಸಿವೆ. ಹಾಲಿವುಡ್‌ ರೆಂಜ್‌ನಲ್ಲಿರುವ ಸಿನಿಮಾ ಎಷ್ಟರ ಮಟ್ಟಿಗೆ ಭಾರತೀಯರಿಗೆ ಕನೆಕ್ಟ್ ಆಗುತ್ತೆ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ನಿರ್ದೇಶಕ ನಾಗ್ ಅಶ್ವಿನ್ ಪೌರಾಣಿಕ ಮತ್ತು ವೈಜ್ಞಾನಿಕ ಕಾದಂಬರಿಗಳನ್ನು ಸೇರಿಸಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 


ಇದನ್ನೂ ಓದಿ :ಮುಂಬರುವ ʼಬಿಗ್ ಬಾಸ್‌ʼನಲ್ಲಿ ಭಾರೀ ಬದಲಾವಣೆ..! ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ ಈ ನಟ


ಭೂತ, ಭವಿಷ್ಯತ್‌ ಕಾಲದ ಥೀಮ್‌ ಹೊಂದಿರುವ ಈ ಸಿನಿಮಾ ಪ್ರೇಕ್ಷಕನನ್ನು ಇಂಪ್ರೆಸ್ ಮಾಡುತ್ತೋ ಇಲ್ಲವೋ ಅಂತ ಕಾದು ನೋಡಬೇಕಿದೆ. ಸುಮಾರು ಏಳುನೂರು ಕೋಟೆಗಳಿರುವ ಈ ಸಿನಿಮಾವನ್ನು ಅಶ್ವಿನಿದತ್ ನಿರ್ಮಿಸಿದ್ದಾರೆ. ಪ್ರಭಾಸ್ ಜೊತೆಗೆ ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಶೋಭನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ