Kalki 2898 AD: ರಿಲೀಸ್ಗೂ ಮುನ್ನವೇ ಕಲ್ಕಿ ಟೀಸರ್ ವಿಡಿಯೋ ಲೀಕ್.. ಚಿತ್ರದಲ್ಲಿ ಪ್ರಭಾಸ್ ಪಾತ್ರ ಇದೇ!
Kalki 2898 AD Teaser Leak: ಇತ್ತೀಚೆಗಷ್ಟೇ ಪ್ರಭಾಸ್ ಅಭಿನಯದ ಸಲಾರ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡಿತ್ತು.. ನಂತರ ಡಾರ್ಲಿಂಗ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಅದೇ ಕಲ್ಕಿ ಸಿನಿಮಾ.. ಇದೀಗ ಈ ಚಿತ್ರದ ಟೀಸರ್ ವಿಡಿಯೋ ಆನ್ಲೈನ್ನಲ್ಲಿ ಲೀಕ್ ಆಗಿದೆ..
Kalki 2898 AD Teaser: 'ಕಲ್ಕಿ 2898AD' ಚಿತ್ರವು ಹಿಂದೂ ಪುರಾಣವನ್ನು ಆಧರಿಸಿದ ವೈಜ್ಞಾನಿಕ ಥ್ರಿಲ್ಲರ್ ಆಗಿದೆ.. ಪ್ರಭಾಸ್ ನಟಿಸಿರುವ ಈ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ. ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಇದೇ ಸಂಕ್ರಾಂತಿ ಹಬ್ಬಕ್ಕೆ ಬರಬೇಕಿತ್ತು. ಆದರೆ ಶೂಟಿಂಗ್ ಮತ್ತು ಗ್ರಾಫಿಕ್ಸ್ ಕೆಲಸ ವಿಳಂಬವಾದ ಕಾರಣ ತಡವಾಯಿತು. ಸದ್ಯ ಚಿತ್ರೀಕರಣ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ...
ಇನ್ನು ಇತ್ತೀಚೆಗೆಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿತ್ತು.. ಅದರ ಪ್ರಕಾರ ಜನವರಿ 13 ರಂದು ಅಂದರೆ ಇಂದು ಈ ಚಿತ್ರದ ಟೀಸರ್ ರಿಲೀಸ್‌ಗೆ ಸಮಯ ನಿಗದಿ ಪಡಿಸಲಾಗಿತ್ತು.. ಇದೀಗ ಆ ಟೀಸರ್ ಗೆ ಸಂಬಂಧಿಸಿದ ವಿಡಿಯೋವೊಂದು ಲೀಕ್ ಆಗಿದ್ದು.. ಅದರಲ್ಲಿ ಸಿನಿಮಾ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ.
Bigg Boss ಫಿನಾಲೆಗೆ ನೇರ ಪ್ರವೇಶ ಪಡೆದ ಮೊದಲ ಸ್ಪರ್ಧಿ ಇವರೇ.. ಘಟಾನುಘಟಿಗಳನ್ನೇ ಹಿಂದಿಕ್ಕಿದ ಈ ಗಟ್ಟಿಗಿತ್ತಿ ಯಾರು ಗೊತ್ತಾ?
ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಮೇ 9ಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿಡುಗಡೆಯಾದ ಮಹಾನಟಿ ಮತ್ತು ಮಹರ್ಷಿ ಚಿತ್ರಗಳು ಮೇ 9 ರಂದೇ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿವೆ.. ಸದ್ಯ 50 ಪ್ರಶಸ್ತಿಗಳನ್ನು ಪೂರೈಸುತ್ತಿರುವ ಈ ವೈಜಯಂತಿ ಮೂವೀಸ್ ತನ್ನ ಮುಂಬರುವ ಕಲ್ಕಿ ಚಿತ್ರವನ್ನು ಮೇ 9ಕ್ಕೆ ರಿಲೀಸ್ ಮಾಡುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ..
ಸದ್ಯ ಬಿಡುಗಡೆಯಾಗಲಿರುವ ಟೀಸರ್ ಸುಮಾರು 1 ನಿಮಿಷ 23 ಸೆಕೆಂಡ್‌ಗಳಷ್ಟು ಇರಲಿದೆ ಎನ್ನಲಾಗಿದೆ.. ಸೂಪರ್ ಹೀರೋ ಪರಿಕಲ್ಪನೆಯೊಂದಿಗೆ ಫ್ಯೂಚರಿಸ್ಟಿಕ್ ಸಿನಿಮಾವಾಗಿ ತಯಾರಾಗಿರುವ ಈ ಸಿನಿಮಾದಲ್ಲಿ ಬಳಸಿದ ತಂತ್ರಜ್ಞಾನ, ಆಯುಧಗಳು, ಟ್ರೋಪ್ ಗಳು, ವೇಷಭೂಷಣಗಳು... ಹೀಗೆ ಭವಿಷ್ಯದಲ್ಲಿ ಎಲ್ಲವೂ ಹೇಗೆ ಬದಲಾಗಬಹುದು ಎಂಬುದನ್ನು ಭಾರತೀಯ ಮೂಲದಿಂದಲೇ ರೂಪಿಸಲಾಗಿದ್ದು.. ಒಟ್ಟಾರೆಯಾಗಿ ಟೀಸರ್ ಮೂಲಕ ಎಲ್ಲರಿಗೂ ಆ ಕಾಲ್ಪನಿಕ ಲೋಕದ ಪರಿಚಯವಾಗಲಿದೆ.
ಇದನ್ನೂ ಓದಿ-Bigg Boss: ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸ್ತಾರಂತೆ ತುಕಾಲಿ! ಕಳಪೆ ಪಟ್ಟ ಪಡೆದ ಸಂತುಗೆ ಪಂತು ಆಶೀರ್ವಾದ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ