Kalki 2898 AD OTT: ಪ್ಯಾನ್ ಇಂಡಿಯಾದ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಚಿತ್ರ 'ಕಲ್ಕಿ 2898 AD' ರಿಲೀಸ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಪೌರಾಣಿಕ ವೈಜ್ಞಾನಿಕ ಆಗಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಣಗಳಿಸಿದೆ. ಇನ್ನೂ ಈ ಸಿನೆಮಾ ಜೂನ್ 27 ರಂದು ಬಿಡುಗಡೆಯಾಗಿದ್ದು, ಮೂರು ದಿನಗಳಲ್ಲಿ 400 ಕೋಟಿ ರೂಪಾಯಿಗಳನ್ನು ತನ್ನ ಬೊಗಸೆಗೆ ಹಾಕಿಕೊಂಡಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಹಾಗೂ ದೀಪಿಕಾ ಪಡುಕೋಣೆ ಸೇರಿ ಸ್ಟಾರ್‌ ತಾರಾ ಬಣವೇ ಇದೆ. 


COMMERCIAL BREAK
SCROLL TO CONTINUE READING

ಕಲ್ಕಿ 2898 AD ಸಿನಿಮಾ ರಿಲೀಸ್‌ ಆಗಿ ಭರ್ಜರಿ ಯಶಸ್ಸು ಕಾಣುತ್ತಿರುವ ಬೆನ್ನಲ್ಲೆ ಸಿನಿಮಾ ಓಟಿಟಿ ರಿಲೀಸ್‌ ಯಾವಾಗ ಅನ್ನುವ ಪ್ರಶ್ನೆಗಳು ಮೂಡಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ 60 ದಿನಗಳ ಬಳಿಕ ಸ್ಟ್ರೀಮಿಂಗ್‌ ಆಗಲಿದೆ ಎನ್ನುವ ಸುದ್ದಿ ಕೂಡ ಕೇಳಿಬಂದಿತ್ತು. ಈ ಸುದ್ದಿ ಕೇಳಿ ಫ್ಯಾನ್ಸ್‌ ಸಿಕ್ಕಾ ಪಟ್ಟೆ ಕುಷಿಯಾಗಿದ್ದರು ಆದರೆ ಇದೀಗ ಚಿತ್ರದ OTT ಬಿಡುಗಡೆ ಯೋಜನೆಯನ್ನು ಬದಲಾಯಿಸಲಾಗಿದೆ ಎನ್ನುವ ವಿಷಯ ತಿಳಿದು ಬಂದಿದೆ.


ಅಮೇಜಾನ್‌ ಪ್ರೈಮ್‌ ಓಟಿಟಿ(Amazon Prime Video) ಪ್ಲಾಟ್‌ಫಾರ್ಮ್ ಈ ಚಿತ್ರಕ್ಕೆ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಕರೀದಿಸಿದ್ದು. ರಿಲೀಸ್‌ ಆದ ಎಂಟು ವಾರಗಳ ನಂತರ ಚಿತ್ರ ಓಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುವುದಾಗಿ ಸಿನಿಮಾ ತಂಡ ಹೇಳಿಕೊಂಡಿತ್ತು. ಆದರೆ ಇದೀಗ ಈ ಯೋಜನೆಯನ್ನು ಬದಲಾಯಿಸಲಾಗಿದೆ.


ಇದನ್ನೂ ಓದಿ: ʻಕಲ್ಕಿ 2898 ADʼ ಪಾರ್ಟ್‌ 2 ಬಗ್ಗೆ ಹೊರಬಿತ್ತು ಅಪ್‌ಡೇಟ್..! ಸಿನಿಮಾ ರಿಲೀಸ್‌ ಯಾವಾಗ ಗೊತ್ತಾ..?


'ಕಲ್ಕಿ 2898 AD' ಸಿನಿಮಾದ ಸೀಕ್ವೆಲ್ 'ಕಲ್ಕಿ 2' ಸಿನಿಮಾದ ಶೂಟಿಂಗ್‌ ಶುರುವಾಗಿದ್ದು, ಶೇಕಡ 60 ರಷ್ಟು ಸಿನಿಮಾದ ಶೂಟಿಂಗ್‌ ಕಂಪ್ಲೀಟ್‌ ಆಗಿದೆ. ಪಾರ್ಟ್‌ 2 ಅಲ್ಲಿ ಕಮಲ್ ಹಾಸನ್ ಹೆಚ್ಚು ಸ್ಕ್ರೀನ್ ಟೈಮ್ ಹೊಂದಿರಲಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ. 


ಕಲ್ಕಿ 2898 AD ವಿಶ್ವದಾದ್ಯಂತ ಮೂರು ದಿನಗಳಲ್ಲಿ ರೂ.415 ಕೋಟಿ ಗಳಿಸಿದೆ ಮತ್ತು ಪಾಸಿಟಿವ್ ಟಾಕ್‌ನೊಂದಿಗೆ ಕಲೆಕ್ಷನ್‌ ಮುಂದುವರೆಯುತ್ತಿದೆ. ಕಲ್ಕಿ 2898 AD ಮಹಾನ ಭಾರತೀಯ ಚಿತ್ರರಂಗದ ಹೊಸ ದಾಳಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಮತ್ತು ಪ್ರಶಂಸೆಗೆ ಒಳಗಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.