Kalki 2898AD Release Date Postponed: ತೆಲುಗು ಚಿತ್ರರಂಗದ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ಯಾನ್ ವರ್ಲ್ಡ್ ಸಿನಿಮಾ 'ಕಲ್ಕಿ 2898AD' ಭಾರೀ ನಿರೀಕ್ಷೆ ಮೂಡಿಸಿದೆ.  ಅಶ್ವಿನಿ ದತ್ ನಿರ್ಮಾಣ  ಈ ಚಿತ್ರಕ್ಕೆ ಡೈರೆಕ್ಟರ್‌ ನಾಗ್‌ ಅಶ್ವಿನ್ ಆಕ್ಷನ್‌ ಕಟ್‌ ಹೇಳಿದ್ದು, ಈ ಸಿನಿಮಾ ಇದೇ ಮೇ 9ಕ್ಕೆ ರಿಲೀಸ್‌ ಮಾಡಲಾಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. 


COMMERCIAL BREAK
SCROLL TO CONTINUE READING

'ಕಲ್ಕಿ 2898AD' ಸಿನಿಮಾ ವಿಷ್ಣುಪುರಾಣ, ಕಲ್ಕಿ ಪುರಾಣ, ಭಾಗವತ ಪುರಾಣಗಳನ್ನು ಆಧರಿಸಿ ಚಿತ್ರಕಥೆ ಕಟ್ಟಿಕೊಡಲಾಗುತ್ತಿದ್ದು, ಈಗಾಗಲೇ ಚಿತ್ರದ ಪೋಸ್ಟರ್ಸ್, ಟೀಸರ್ ರಿಲೀಸ್ ಆಗಿ ಫ್ಯಾನ್ಸ್‌ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಈ ಚಿತ್ರದ ರಿಲೀಸ್ ಡೇಟ್ ಪದೇ ಪದೆ ಬದಲಾಗುತ್ತಲೇಯಿದ್ದು, ಸದ್ಯ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಹೊರಬಿದ್ದಿದ್ದು, ಈ ಕಾರಣದಿಂದಾಗಿ ಚಿತ್ರತಂಡ ಈ ನಿರ್ಧಾರಕ್ಕೆ ಮುಂದಾಗಿದೆ.


ಇದನ್ನೂ ಓದಿ: Family Star: ಶೀಘ್ರದಲ್ಲೇ ತೆರೆಗೆ ಬರಲಿದೆ ಫ್ಯಾಮಿಲಿ ಸ್ಟಾರ್‌: ವಿಜಯ್‌ ಹೇಳಿದ್ದೇನು?


ಇದೇ ವರ್ಷ ಲೋಕಸಭಾ ಚುನಾವಣೆ ಮಾತ್ರವಲ್ಲದೇ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣಾ ಡೇಟ್‌ ಕೂಡ ಅನೌನ್ಸ್‌ ಆಗಿದ್ದು,ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಸಹ ನಿಗದಿಯಾಗಿದೆ. ಚುನಾವಣೆ ಪ್ರಚಾರ, ಮತದಾನ, ಫಲಿತಾಂಶದ ಸಂದರ್ಭದಲ್ಲಿ ಸಿನಿಮಾಗಳನ್ನಿ ರಿಲೀಸ್‌ ಮಾಡಿದರೇ ಒಳ್ಳೆಯ ಕಲೆಕ್ಷನ್‌ ಆಗದೆಯಿರಬಹುದೆಂದು ಯೋಚಿಸಿ, ಎಲೆಕ್ಷನ್‌ ಸಮಯದಲ್ಲಿ ಚಿತ್ರವನ್ನು ರಿಲೀಸ್‌ ಮಾಡಲು ಹಿಂದೇಟು ಹಾಕುತ್ತಿದ್ದಾರೆ.


'ಕಲ್ಕಿ 2898AD' 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾವನ್ನು ಇಂತಹ ಸಂದರ್ಭದಲ್ಲಿ ತೆರೆಗೆ ತರುವುದು ಸರಿಯಲ್ಲವೆಂಬ ಚರ್ಚೆ ಪ್ರಾರಂಭವಾಗಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾನಿ ಸೇರಿದಂತೆ ಹಲವಾರು ಘಟಾನುಘಟಿ ಕಲಾವಿದರು ನಟಿಸಲಿದ್ದಾರೆ, ಹೀಗಾಗಿ ಇದು ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ ಚಿತ್ರವೆಂದು ಎನಿಸಿಕೊಳ್ಳುತ್ತಿದೆ.


ಇದನ್ನೂ ಓದಿ: Puneeth Rajkumar: ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ʻನಟಸಾರ್ವಭೌಮʼ ಅಪ್ಪು ಮುಡಿಗೇರಿದ ಪ್ರಶಸ್ತಿಗಳಿವು!


ಪ್ಯಾನ್ ವರ್ಲ್ಡ್ ಸಿನಿಮಾಗೆ ಸಂತೋಷ್ ನಾರಾಯಣ್ ಸಂಗೀತ ನೀಡಿದ್ದರೇ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಈ ಚಿತ್ರದ ವಿತರಣೆ ಹಕ್ಕನ್ನು ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಖರೀದಿಸಿದ್ದು, ಅತಿ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಸದ್ಯ ಚಿತ್ರತಂಡ ಮತ್ತೊಂದು ದಿನಾಂಕ ಹುಡುಕಾಟದಲ್ಲಿ ನಿರತವಾಗಿದ್ದು, ಈ ಚಿತ್ರ ಆಗಸ್ಟ್ 15ಕ್ಕೆ ಸಿನಿಮಾ ಬೆಳ್ಳಿತೆರೆಗೆ ಬರುತ್ತಾ ಅನ್ನೂ ಕುತೂಹಲವೂ ಮೂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ