ಐಸ್..ಐಸಾ.. ಪ್ರೀತಿಸಿದವರು ಎಲ್ಲರೂ ಒಮ್ಮೆ, ಇವತ್ತೇ ಕಂಬ್ಳಿಹುಳ ನೋಡಿ. ಬದುಕಲ್ಲಿ ಒಮ್ಮೆಯಾದರೂ ಹತಾಶರಾಗಿ ಕಾಲ‌ ಕಳೆದಿದ್ದೀರಾದರೆ, ಕಂಬ್ಳಿಹುಳ ಇವತ್ತೇ ನೋಡಿ. ಅಪ್ಪ ಅಮ್ಮನ ಜೊತೆ ಒಮ್ಮೆಯಾದರೂ ಸಿಟ್ಟಾಗಿದ್ದಿದ್ದರೆ, ಕಂಬ್ಳಿಹುಳ ಇವತ್ತೇ ನೋಡಿ. ಫ್ರೆಂಡ್ಸ್ ನ ಒಮ್ಮೆಯಾದರೂ ಮಿಸ್, ಮಾಡಿದ್ರೆ ಇವತ್ತೇ ಕಂಬ್ಳಿಹುಳ ನೋಡಿ. 


COMMERCIAL BREAK
SCROLL TO CONTINUE READING

ಯೆಸ್, ಕರುನಾಡಿನ ಹೆಮ್ಮೆಯ ಪ್ರತಿಭಾವಂತ ಯುವಕರ ತಂಡ ಸೇರಿಕೊಂಡು ಅದ್ಭುತ ಕಂಬ್ಳಿಹುಳ ನ ರೆಡಿ ಮಾಡಿದ್ದಾರೆ. ಮಲೆನಾಡಿನ ಮಣ್ಣಿನ ಘಮಲು ಸಿನಿಮಾ ನೋಡಿದಾಗ ಮೂಗಿಗೆ  ಬಡಿದ ಅನುಭವ ಆಹಾ ಅನಿಸುತ್ತೆ. ಇಲ್ಲಿ ಯಾರೂ ನಟನೆ ಮಾಡಿಲ್ಲ.. ಎಲ್ಲವೂ ಫುಲ್ ನ್ಯಾಚುರಲ್ ಅನಿಸುತ್ತೆ. ನಮ್ಮ ಸುತ್ತಮುತ್ತ ಮತ್ತು ನಮ್ಮ ನಿಮ್ಮ ಜೀವನದಲ್ಲಿ ಆಗಿರೋ ಇಂಚಿಂಚು ಅನುಭವ ಕಂಬ್ಳಿಹುಳದಲ್ಲಿ ಸಿಗುತ್ತೆ. ದೃಶ್ಯ ವೈಭವ ಮನಸ್ಸಿಗೆ ಮುದ ನೀಡುತ್ತೆ.


ಇದನ್ನೂ ಓದಿ- ಹೊಸಬರ 'ಕಂಬ್ಳಿಹುಳ'ಕ್ಕೆ ಸ್ಯಾಂಡಲ್‌ವುಡ್‌ ಸಿನಿ ತಾರೆಯರ ಸಾಥ್


ಹದಿಹರೆಯದ ಪ್ರಣಯ ಹಾಗೂ ಮಲೆನಾಡು ಹಿನ್ನೆಲೆಯುಳ್ಳ ಈ ಚಿತ್ರಕ್ಕೆ ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಹೆಗ್ಡೆ ನಾಯಕ ಹಾಗೂ ನಾಯಕಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಿರ್ದೇಶಕ ನವೀನ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ನವನ್ ಪ್ರಯತ್ನಕ್ಕೆ ಸಲಾಂ ಹೇಳಲೇಬೇಕು.


ಇದನ್ನೂ ಓದಿ- ಇದ್ಯಾವ ನ್ಯಾಯ ಗುರು...! : ಟ್ರೋಲ್‌ ಮಾಡಲು ರಶ್ಮಿಕಾ ಮಾಡಿದ ತಪ್ಪಾದ್ರು ಏನು..?


ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜಿ ಮತ್ತು ಸಂಧ್ಯಾ ನಿನಾಸಂ ಪೋಷಕ ಪಾತ್ರಗಳನ್ನು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಿವಪ್ರಸಾದ್ ಸಂಗೀತ ಸಂಯೋಜಿಸಿದ್ದು, ಸತೀಶ್ ರಾಜೇಂದ್ರ ಛಾಯಾಗ್ರಾಹಣ, ರಾಘವೇಂದ್ರ ಟಿ.ಕೆ. ಸಂಕಲನ ಸಿನಿಮಾಕ್ಕಿದೆ. ಸೋ ಹೊಸಬರ ಕಂಬ್ಳಿಹುಳಕ್ಕೆ ನಿಮ್ಮ ಬೆಂಬಲ ಇರಲಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.