Kangana Ranaut Net Worth: ಬಾಲಿವುಡ್‌ನಲ್ಲಿ ಹತ್ತಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಂಗನಾ ರನೌತ್ (Actress Kangana Ranaut) ಈ ಬಾರಿ ಲೋಕಸಭಾ ಚುನಾವಣೆಯಲ್ಲಿ (Lok Sabha election)  ಹಿಮಾಚಲ ಪ್ರದೇಶದ ಮಂಡಿಯಿಂದ ಬಿಜೆಪಿ ಅಭ್ಯರ್ಥಿಯಾಗಿ (BJP Candidate) ಕಣಕ್ಕಿಳಿಯಲಿದ್ದಾರೆ. ನಿನ್ನೆಯಷ್ಟೇ (ಮೇ 14) ಮಂಡಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕಂಗನಾ ರನೌತ್ ಬರೋಬ್ಬರಿ 91ಕೋಟಿ ರೂಪಾಯಿ ಆಸ್ತಿಯನ್ನು (Kangana Ranaut Net Worth) ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ನಟ ಮತ್ತು ಬಿಜೆಪಿ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ (Election Commission) ನೀಡಿರುವ ಅಫಿಡವಿಟ್‌ನಲ್ಲಿ ಅವರ ಒಟ್ಟು ಆಸ್ತಿ 91ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಅವರ ಒಟ್ಟು ಆಸ್ತಿಯಲ್ಲಿ 28.7ಕೋಟಿ ಮೌಲ್ಯದ ಚರಾಸ್ತಿ, 62.9ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. 


ಕಂಗನಾ ರನೌತ್  ವಿದ್ಯಾಭ್ಯಾಸ (Kangana Ranaut education): 
ಕಂಗನಾ ರನೌತ್ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಾವು ಚಂಡೀಗಧದ ಖಾಸಗಿ ಶಾಲೆಯಲ್ಲಿ 12ನೇ ತರಗತಿವರೆಗೆ ಮಾತ್ರ ಓದಿರುವುದಾಗಿ ತಿಳಿಸಿದ್ದಾರೆ. 


5ಕೋಟಿ ಮೌಲ್ಯದ ಚಿನ್ನದ ಒಡತಿ ಕಂಗನಾ ರನೌತ್ (Kangana Ranaut owns gold worth 5 crores): 
ನಟಿ ಕಂಗನಾ ರನೌತ್ ಅವರ ಬಳಿ ಸುಮಾರು 5 ಕೋಟಿ ರೂ. ಮೌಲ್ಯದ 6.7 ಕೆಜಿ ಚಿನ್ನಾಭರಣಗಳು, 50 ಲಕ್ಷ ಮೌಲ್ಯದ 60 ಕೆಜಿ ಬೆಳ್ಳಿ ಹಾಗೂ 3 ಕೋಟಿ ಮೌಲ್ಯದ ವಜ್ರದ ಆಭರಣಗಳಿವೆ. ಅಷ್ಟೇ ಅಲ್ಲಾದೆ, ಇವರ ಬಳಿ 2 ಲಕ್ಷ ರೂಪಾಯಿ ನಗದು ಮತ್ತು ಸುಮಾರು 1.35 ಕೋಟಿ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದರೆ, 17 ಕೋಟಿ ರೂ. ಸಾಲವನ್ನು ಹೊಂದಿರುವುದಾಗಿ ಅವರು ತಮ್ಮ ನಾಮಪತ್ರದಲ್ಲಿ ಘೋಷಿಸಿದ್ದಾರೆ. 


ಇದನ್ನೂ ಓದಿ- Lok Sabha Election 2024: "10 ವರ್ಷಗಳ ವೈಫಲ್ಯಗಳನ್ನು ಮರೆಮಾಚಲು ಅನೇಕ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ" - ವಿ.ಆರ್.ಸುದರ್ಶನ್


ಕಂಗನಾ ರನೌತ್ ಚಂಡೀಗಢದಲ್ಲಿ ನಾಲ್ಕು ವಾಣಿಜ್ಯ ಘಟಕಗಳು, ಮುಂಬೈನಲ್ಲಿ ವಾಣಿಜ್ಯ ಆಸ್ತಿ, ಮನಾಳಿಯಲ್ಲಿ ವಾಣಿಜ್ಯ ಕಟ್ಟಡ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಇದರಲ್ಲಿ ಮುಂಬೈನ 16 ಕೋಟಿ ರೂ. ಮೌಲ್ಯದ ಮೂರು ಫ್ಲಾಟ್'ಗಳು ಮನಾಳಿಯ 15 ಕೋಟಿ ರೂ. ಮೌಲ್ಯದ ಬಂಗಲೆಯೂ ಸೇರಿದೆ. 


ಕಂಗನಾ ರನೌತ್ ಬಳಿಯಿದೆ ಕೋಟ್ಯಾಂತರ ರೂ. ಬೆಲೆ ಬಾಳುವ ಮೂರು ಐಷಾರಾಮಿ ಕಾರುಗಳು: 
ಹೌದು, ಕಂಗನಾ ರನೌತ್ (Kangana Ranaut) 98 ಲಕ್ಷ ರೂ. ಮೌಲ್ಯದ BMW, 58 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಮತ್ತು 3.91 ಕೋಟಿ ರೂ. ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಕಾರುಗಳನ್ನು ಹೊಂದಿದ್ದಾರೆ. ಇದಲ್ಲದೆ, 53 ಸಾವಿರ ಮೌಲ್ಯದ ವೆಸ್ಪಾ ಸ್ಕೂಟರ್ ಕೂಡ ಇವರ ಬಳಿ ಇದೆ. 


ಇದನ್ನೂ ಓದಿ- ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಚಿಂತೆ ಬಿಡಿ ಅದು ಐದು ವರ್ಷ ಸುಭದ್ರವಾಗಿದೆ: ಸಿಎಂ ಸಿದ್ದರಾಮಯ್ಯ


ಕಂಗನಾ ರನೌತ್ ಹೆಸರಿನಲ್ಲಿ 50 ಎಲ್‌ಐ‌ಸಿ ಪಾಲಿಸಿಗಳು: 
ಕಂಗನಾ ರನೌತ್ ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ, ಅವರ ಹೆಸರಿನಲ್ಲಿ ಒಟ್ಟು 50 ಎಲ್‌ಐ‌ಸಿ (LIC) ಪಾಲಿಸಿಗಳಿವೆ. 


ಗಮನಾರ್ಹವಾಗಿ 2022-23ರ ಆರ್ಥಿಕ ವರ್ಷದಲ್ಲಿ 4 ಕೋಟಿ ರೂ. ಆದಾಯ ಹೊಂದಿದ್ದ ಕಂಗನಾ ರನೌತ್ ಕಳೆದ ವರ್ಷ ಸುಮಾರು 12.3 ಕೋಟಿ ಆದಾಯವನ್ನು ಗಳಿಸಿದ್ದಾರೆ. 


ಕಂಗನಾ ರನೌತ್ ಸಲ್ಲಿಸಿರುವ ಅಫಿಡವಿಟ್‌ ಪ್ರಕಾರ,  ಆಕೆ ಎಂಟು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.