ಮುಂಬೈ: ಖ್ಯಾತ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಅವರಿಗೆ ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ವಾಸಿಸುವ ಹಕ್ಕಿಲ್ಲ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ. ಚಲನಚಿತ್ರ ಮಾಫಿಯಾಕ್ಕಿಂತ ಮುಂಬೈ ಪೋಲೀಸರನ್ನು ಕಂಡು ಹೆದರಿಕೆಯಾಗುತ್ತದೆ ಎಂದು ಕಂಗನಾ ರನೌತ್ ಇತ್ತೀಚೆಗೆ ತನ್ನ ಒಂದು ಟ್ವೀಟ್ ನಲ್ಲಿ ಹೇಳಿದ್ದರು. ಅವರ ಹೇಳಿಕೆಗೆ ಸಂಬಂಧಿಸಿದಂತೆ, ಅನಿಲ್ ದೇಶ್ಮುಖ್ ಅವರು ಮುಂಬೈ ಪೋಲೀಸರನ್ನು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಿಗೆ ಹೋಲಿಸುತ್ತಾರೆ ಎಂದು ಹೇಳಿದ್ದರು.


COMMERCIAL BREAK
SCROLL TO CONTINUE READING

ಈ ಬಗ್ಗೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್, "ಮುಂಬೈ ಪೊಲೀಸರನ್ನು ಸ್ಕಾಟ್ಲೆಂಡ್ ಯಾರ್ಡ್ಗೆ ಪೊಲೀಸರಿಗೆ ಹೋಲಿಸಲಾಗುತ್ತದೆ. ಕೆಲವರು ಮುಂಬೈ ಪೊಲೀಸರನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿಯೊಬ್ಬರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ಮುಂಬೈ ಪೊಲೀಸ್ ಬಗ್ಗೆ ಅವರು ಮಾಡಿರುವ ಹೋಲಿಕೆಯ ಕಾರಣ .. ಅವರಿಗೆ ಮಹಾರಾಷ್ಟ್ರ ಅಥವಾ ಮುಂಬೈನಲ್ಲಿ ವಾಸಿಸುವ ಹಕ್ಕಿಲ್ಲ. " ಎಂದಿದ್ದಾರೆ. 



ಮತ್ತೊಂದೆಡೆ ತಮ್ಮ ಇನ್ನೊಂದು ಟ್ವೀಟ್ ನಲ್ಲಿ ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರನ್ನು ಗುರಿಯಾಗಿಸಿದ್ದ ಕಂಗನಾ ರಣಾವತ್, ಮುಂಬೈ ಹೋಲಿಕೆಯನ್ನು PoK ಜೊತೆಗೆ ಮಾಡಿದ್ದರು. ಈ ಕುರಿತು ಟ್ವೀಟ್ ಮಾಡಿದ್ದ ಕಂಗನಾ, "ಶಿವಸೇನಾ ಮುಖಂಡ ಸಂಜಯ್ ರಾವುತ್ ನನಗೆ ಬಹಿರಂಗ ಧಮ್ಕಿ ನೀಡಿದ್ದು, ಮುಂಬೈಗೆ ಕಾಲಿಡದಂತೆ ಹೇಳಿದ್ದಾರೆ. ಮೊದಲು ಮುಂಬೈನ ರಸ್ತೆಗಳಲ್ಲಿ ಸ್ವಾತಂತ್ರ್ಯದ ಘೋಷಣೆಗಳು ಮೊಳಗಿದ್ದವು ಮತ್ತು ಇದೀಗ ಬಹಿರಂಗ ಧಮ್ಕಿಗಳು ಕೇಳಿಬರುತ್ತಿವೆ. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಏಕೆ ಕಂಡುಬರುತ್ತಿದೆ? "ಎಂದು ಕಂಗನಾ ಪ್ರಶ್ನಿಸಿದ್ದರು.


ಕಂಗನಾ ಹೇಳಿಕೆಗೆ ಇಂದು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್, ಕಂಗನಾ ರಣಾವತ್ ಅವರಿಗೆ ಮುಂಬೈ ನಲ್ಲಿರುವ ಯಾವುದೇ ಹಕ್ಕಿಲ್ಲ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಂಗನಾ ಕೂಡ "ಪಿಒಕೆ ಯಿಂದ ತಾಲಿಬಾನ್ ವರೆಗೆ ಒಂದೇ ದಿನದಲ್ಲಿ ಅವರು ನನ್ನ ಪ್ರಜಾಪ್ರಭುತ್ವ ಹಕ್ಕುಗಳ ಬಗ್ಗೆ ತಮ್ಮದೇ ಆದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ" ಎಂದಿದ್ದಾರೆ.