Kangana Ranaut Latest Statement: ಮಾಜಿ ಪ್ರಧಾನಿ Indira Gandhi ಸ್ಮರಿಸುತ್ತ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ ರಣಾವತ್
Kangana Ranaut New Post - ಕೃಷಿ ಕಾನೂನು ಹಿಂಪಡೆದ ಬಳಿಕ ಕಂಗನಾ ರಣಾವತ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇಂದಿರಾಗಾಂಧಿ (Indira Gandhi)ಅವರನ್ನು ಸ್ಮರಿಸುತ್ತಾ ಕಂಗನಾ ಇದೀಗ ಮತ್ತೊಂದು ಗಂಭೀರ ಹೇಳಿಕೆ ನೀಡಿದ್ದಾರೆ.
ನವದೆಹಲಿ: Kangana Ranaut New Post - ಕಾಂಟ್ರವರ್ಸಿಯಲ್ ಕ್ವೀನ್ ಕಂಗನಾ ರಣಾವತ್ (Kangana Ranaut) ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೃಷಿ ಕಾನೂನುಗಳನ್ನು (Farm Laws) ಹಿಂತೆಗೆದುಕೊಳ್ಳುವ ನಿರ್ಧಾರವು ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ನಿನ್ನೆಯಷ್ಟೇ ಹೇಳಿದ್ದ ಕಂಗನಾ ರಣಾವತ್ ಇದೀಗ ದೇಶದ ಮೊದಲು ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸ್ಮರಿಸುತ್ತ, ಇಂದು ಖಲಿಸ್ತಾನಿ ಭಯೋತ್ಪಾದಕರು ತಮಗೆ ಬೇಕಾದಂತೆ ಸರ್ಕಾರದ ಕೈಗಳನ್ನು ತಿರುವಿದರೂ ಕೂಡ ಅವರು ಓರ್ವ ಮಹಿಳೆಯನ್ನು ಎಂದಿಗೂ ಮರೆಯಬಾರದು. ನಮ್ಮ ದೇಶದ ಏಕೈಕ ಮಹಿಳಾ ಪ್ರಧಾನಿ ಅವರನ್ನು ತಮ್ಮ ಶೂ ಅಡಿಯಲ್ಲಿ ತುಳಿದಿದ್ದಾರೆ ಎಂದು ಕಂಗನಾ ಹೇಳಿದ್ದಾಳೆ.
ಈ ಕುರಿತು ಬರೆದುಕೊಂಡಿರುವ ಕಂಗನಾ (Kangana Ranaut), "ಖಲಿಸ್ತಾನಿ ಉಗ್ರರು ಇಂದು ತಮಗೆ ಬೇಕಾದಂತೆ ಸರ್ಕಾರದ ಕೈಯನ್ನು ತಿರುಚುತ್ತಿರಬಹುದು... ಆದರೆ ಆ ಮಹಿಳೆಯನ್ನು ಎಂದಿಗೂ ಮರೆಯಬೇಡಿ... ಏಕಮಾತ್ರ ಮಹಿಳಾ ಪ್ರಧಾನಿ ಅವರನ್ನು ತನ್ನ ಷೂ ಅಡಿ ಕ್ರಷ್ ಮಾಡಿದ್ದರು... ಅವಳು ಈ ದೇಶಕ್ಕೆ ಎಷ್ಟೇ ಕಷ್ಟ ನೀಡಿದ್ದರು, ಅವಳು ತನ್ನ ಪ್ರಾಣ ಪಣಕ್ಕಿಟ್ಟು ಅವರನ್ನು ಸೊಳ್ಳೆಗಳಂತೆ ಹೊಸಗಿಹಾಕಿದ್ದಳು.... ಆದರೆ ದೇಶ ಇಬ್ಭಾಗವಾಗಲು ಬಿಡಲಿಲ್ಲ... ಅವಳ ಸಾವು ಸಂಭವಿಸಿ ದಶಕ ಗತಿಸಿದರೂ ಕೂಡ ಇಂದಿಗೂ ಕೂಡ ಆಕೆಯ ಹೆಸರು ಕೇಳಿ ಅವರು ನಡುಗುತ್ತಾರೆ... ಇವರಿಗೆ ಅಂತಹ ಗುರುವೇ ಬೇಕು" ಎಂದಿದ್ದಾಳೆ.
ಗುರು ಪರ್ವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ದೇಶದ ರೈತರ ಒಂದು ವರ್ಗದ ಪ್ರತಿಭಟನೆ ನಡೆಸಿದ ನಂತರ 2020 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು (Repeal Farm Laws) ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ಘೋಷಿಸಿದ್ದಾರೆ. ಕಾನೂನು ಹಿಂಪಡೆಯುವ ಕುರಿತು, ‘ಈ ತಿಂಗಳ ಅಂತ್ಯದಲ್ಲಿ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಈ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ (Repeal) ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ’ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.