ಮುಂಬೈ: ಖ್ಯಾತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪುತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ಕಂಗನಾ ರಾಣಾವತ್ ಹೇಳಿಕೆ ಮುಂದೆಬಂದಿದೆ. ಸುಶಾಂತ್ ಸಿಂಗ್ ರಾಜಪುಟ್ ಸಾವಿಗೆ ಶೋಕ ವ್ಯಕ್ತಪಡಿಸಿರುವ ಕಂಗನಾ ಬಾಲಿವುಡ್ ಜನರ ವಿರುದ್ಧ ಕಿಡಿ ಕಾರಿದ್ದಾರೆ.


COMMERCIAL BREAK
SCROLL TO CONTINUE READING

"ಸುಶಾಂತ್ ಸಾವು ನಮ್ಮೆಲ್ಲರನ್ನೂ ಕುಸಿದು ಬೀಳುವಂತೆ ಮಾಡಿದೆ. ಆದರೆ, ಕೆಲ ಜನರು ಇಂತಹ ಕೆಲಸ ಮಾಡುವಲ್ಲಿ ನಿಷ್ಣಾತರಾಗಿದ್ದು, ಇದರ ವಿರುದ್ಧ ಹೇಗೆ ಮಾತನಾಡಬೇಕು ಎಂಬುದು ಅವರಿಗೆ ತಿಳಿಸಿದೆ. ಯಾರ ಮೆದುಳು ಅತ್ಯಂತ ಸೂಕ್ಷ್ಮವಾಗಿದೆಯೋ ಅವರು ಡಿಪ್ರೆಶನ್ ಗೆ ಗುರಿಯಾಗಿ ಸುಸೈಡ್ ಮಾಡಿಕೊಳ್ಳುತ್ತಾರೆ" ಎಂದು ಕಂಗನಾ ಹೇಳಿದ್ದಾರೆ.


" ಇಂಜಿನಿಯರಿಂಗ್ ನಲ್ಲಿ ಟಾಪ್ ಮಾಡಿ , ರಾಂಕ್ ಹೋಲ್ಡರ್ ಎನಿಸಿಕೊಂಡಿರುವ ವ್ಯಕ್ತಿಯ ಮೆದುಳು ವೀಕ್ ಆಗಿರಲು ಹೇಗೆ ಸಾಧ್ಯ? ಸುಶಾಂತ್ ಅವರ ಅಂತಿಮ ಪೋಸ್ಟ್ ಅನ್ನು ಒಮ್ಮೆ ವಿಕ್ಷೀಸಿ, ಅದರಲ್ಲಿ ಸುಶಾಂತ್ ಜನರಿಗೆ ತನ್ನ ಚಿತ್ರ ನೋಡುವಂತೆ ಮನವಿ ಮಾಡುತ್ತಿದ್ದು, ಇಲ್ಲದೆ ಹೋದಲ್ಲಿ ಅವರನ್ನು ಚಿತ್ರೋದ್ಯೋಮದಿಂದ ಹೊರತೆಗೆಯಲಾಗುವುದು. ಚಿತ್ರೋದ್ಯೋಮದಲ್ಲಿ ನನಗೆ ಗಾಡ್ ಫಾದರ್ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಘಟನೆಯಲ್ಲಿ ಅಡಿಪಾಯ ಇಲ್ಲ ಎಂಬುದು ನನ್ನನ್ನು ಆಶ್ಚರ್ಯಕ್ಕೆ ಈಡು ಮಾಡಿದೆ. ಕಳೆದ ಆರು ವರ್ಷಗಳಲ್ಲಿ ಸುಶಾಂತ್ ' ಕಾಯಿ ಪೋ ಚೆ'ನಂತಹ ಚಿತ್ರ ನೀಡಿದರು ಕೂಡ ಅವರ ಅಭಿನಯವನ್ನು ಮೆಚ್ಚಲಾಗಲಿಲ್ಲ ಹಾಗೂ ಅವರಿಗೆ ಅವಾರ್ಡ್ ನೀಡಲಾಗಿಲ್ಲ" ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.


"ಚಿಚೊರೆ"ನಂತಹ ಚಿತ್ರಕ್ಕೂ ಕೂಡ ಅವಾರ್ಡ್ ಸಿಗುವುದಿಲ್ಲ. "ಗಲಿ ಬಾಯ್" ನಂತಹ ಕೆಟ್ಟ ಚಿತ್ರಕ್ಕೆ ಅವಾರ್ಡ್ ಸಿಗುತ್ತದೆ. ನಮಗೆ ನಿಮ್ಮಿಂದ ಏನೂ ಬೇಕಾಗಿಲ್ಲ. ಆದರೆ, ನಾವು ಮಾಡುವ ಕೆಲಸಕ್ಕೆ ಮೆಚ್ಚುಗೆಯಾದರು ವ್ಯಕ್ತಪಡಿಸಿ. ನನ್ನ ಮೇಲೆ ಆರು ಪ್ರಕರಣಗಳನ್ನು ಏಕೆ ದಾಖಲಿಸಲಾಯಿತು? ನನ್ನ ಚಿತ್ರವನ್ನು ಫ್ಲಾಪ್ ಎಂದೇಕೆ ಘೋಷಿಸಲಾಯಿತು? ನಿನ್ನ ಟೈಮ್ ಸರಿಯಾಗಿಲ್ಲ ಎಂದು ಜನರು ನನಗೆ ಏಕೆ ಸಂದೇಶ ಕಳುಹಿಸುತ್ತಾರೆ? ಅಂತಹ-ಇಂತಹ ಹೆಜ್ಜೆ ಇಡಬೇಡ ಎಂದು ಯಾಕೆ ಹೇಳುತ್ತಾರೆ. ನನ್ನ ಮೈಂಡ್ ನಲ್ಲಿ ಇಂತಹ ಮಾತುಗಳನ್ನು ಏಕೆ ಬಿತ್ತಲಾಗುತ್ತದೆ. ಇದು ಸುಸೈಡ್ ಅಲ್ಲ ಇದೊಂದು ಪ್ಲಾನ್ಡ್ ಮರ್ಡರ್ ಆಗಿದೆ. ನೀನೋರ್ವ ವರ್ಥ್ ಲೆಸ್ ಆಗಿದ್ದೀಯಾ ಎನ್ನುವವರ ಮಾತು ಕೇಳಿದ್ದೆ ಸುಶಾಂತ್ ತಪ್ಪು. ತನ್ನ ತಾಯಿಯ ಮಾತನ್ನು ಆತ ಕೇಳಲಿಲ್ಲ. ಇತಿಹಾಸ ಯಾರು ಬರೆಯಲಿದ್ದಾರೆ ಎಂಬುದನ್ನು ನಾವು ಆಯ್ಕೆ ಮಾಡಬೇಕಿದೆ" ಎಂದು ಕಂಗನಾ ಸಿಡಿದು ಮಾತನಾಡಿದ್ದಾರೆ.