ಮುಂಬೈ : ನಟಿ ಕಂಗನಾ ರಣಾವತ್ (Kangana Ranaut)ಮತ್ತು ಮಹಾರಾಷ್ಟ್ರ ಸರ್ಕಾರ ಇದೀಗ ಪರಸ್ಪರರ ಮುಖಾಮುಖಿಯಗಿದ್ದಾರೆ. . ನಟಿ ಕಂಗನಾ ರಣಾವತ್ ವಿರುದ್ಧದ ಡ್ರಗ್ಸ್ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಆದೇಶಿಸಿದ್ದಾರೆ. ಇದಕ್ಕೆ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಡ್ರಗ್ಸ್ ಜೊತೆಗೆ ಕನೆಕ್ಷನ್ ಹೊಂದಿದ ಸಾಕ್ಷಾಧಾರಗಳು ಸಿಕ್ಕರೆ ಮುಂಬೈ ಬಿಡುವೆ
ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್, ಡ್ರಗ್ಸ್ ಜೊತೆಗೆ ತಾನು ಹೊಂದಿರುವ ಕನೆಕ್ಷನ್ ಕುರಿತು ಸಾಕ್ಷಾಧಾರಗಳು ಸಿಕ್ಕರೆ ತಾನು ಮುಂಬೈ ಬಿಡುವುದಾಗಿ ಹೇಳಿದ್ದಾರೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಕಂಗನಾ, "ಮುಂಬೈ ಪೊಲೀಸರು ಹಾಗೂ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರ ಈ ಉಪಕಾರದಿಂದ ತುಂಬಾ ಖುಷಿಯಾಗಿದ್ದೇನೆ. ದಯವಿಟ್ಟು ನನ್ನ ಟೆಸ್ಟ್ ನಡೆಸಿ. ನನ್ನ ಕಾಲ್ ರಿಕಾರ್ಡ್ ಗಳನ್ನು ತನಿಖೆಗೆ ಒಳಪಡಿಸಿ. ಒಂದು ವೇಳೆ ಡ್ರಗ್ ಪೆಡ್ಲರ್ ಗಳ ಜೊತೆಗೆ ನನ್ನ ಕನೆಕ್ಷನ್ ಕುರಿತು ಯಾವುದೇ ಲಿಂಕ್ ಸಿಕ್ಕರೆ, ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುವೆ ಹಾಗೂ ಮುಂಬೈ ಅನ್ನು ಖಾಯಂ ರೂಪದಲ್ಲಿ ಬಿಟ್ಟುಬಿಡುವೆ. ನಿಮ್ಮ ಭೇಟಿಗಾಗಿ ಕಾಯುತ್ತಿರುವೆನು' ಎಂದಿದ್ದಾರೆ. 


DNA ಸಂದರ್ಶನದ ಆಧಾರ
ಝೀ ನ್ಯೂಸ್ ಗೆ ನೀಡಿದ ಒಂದು ಸಂದರ್ಶನದಲ್ಲಿ ಶೇಖರ್ ಸುಮನ್ ಪುತ್ರ ಅಧ್ಯಯನ್ ಸುಮನ್, 'ಕಂಗನಾ ಸ್ವತಃ ಡ್ರಗ್ಸ್ ಸೇವನೆ ಮಾಡುತ್ತಿದ್ದರು ಹಾಗೂ ತಮಗೂ ಕೂಡ ಸೇವನೆ ಮಾಡಲು ಒತ್ತಾಯಿಸುತ್ತಿದ್ದರು' ಎಂದಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಮಹಾ ಗೃಹ ಸಚಿವ ಅನಿಲ್ ದೇಶಮುಖ, ಮಹಾ ವಿಧಾನಸಭೆಯಲ್ಲಿ ಕಂಗನಾ ರಣಾವತ್ ಅವರ ಡ್ರಗ್ ಸೇವನೆಯ ಕುರಿತು ತನಿಖೆ ನಡೆದುವ ಬೇಡಿಕೆಗಳು ಕೇಳಿ ಬಂದ ಹಿನ್ನೆಲೆ ಈ ನಿರ್ಣಯ ಕೈಗೊಳ್ಳಲಾಗಿದ್ದು, ಪೊಲೀಸರು ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ.