ಹೀರೋಗಳು ಮಂಚಕ್ಕೆ ಕರೆದಾಗ ನಾನು ಹೋಗಿಲ್ಲ.ಅದಕ್ಕಾಗಿ ಎಲ್ಲಾ ನನ್ನ ಹುಚ್ಚಿ ಅಂದ್ರು -ಕಂಗನಾ ರಣಾವತ್
ಬಾಲಿವುಡ್ ಮಂದಿ ನನ್ನ ನಡತೆಯನ್ನ ಜಂಭ ಅಂತ ಹೇಳ್ತಾರೆ.. ಯಾಕೆಂದರೆ ನಾನು ಬೇರೆ ಹುಡುಗಿಯರ ಹಾಗೆ ಎಲ್ಲದಕ್ಕೂ ನಕ್ಕಿಲ್ಲ, ಐಟಂ ಸಾಂಗ್ ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನಾನು ಹುಚ್ಚಿಯಾದೆ` ಅಂತ ಬರೆದಿದ್ದಾರೆ .
Kangana Ranaut: ಒಂದಷ್ಟು ದಿನಗಳಿಂದ ಕಂಗನಾ ರಣಾವತ್ ಇದ್ದಿದ್ದನ್ನ ನೇರವಾಗಿ ಹೇಳೋ ಮೂಲಕ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಬಾಲಿವುಡ್ನಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಕೆಲವೊಂದು ಸಲ ಹಲವು ಉದಾಹರಣೆಗಳನ್ನ ಕೊಡುತ್ತಾ ಹೇಳಿದ್ದಾರೆ. ಇದೀಗ ಮತ್ತೇ ನನ್ನ ಯಾಕೆ ಎಲ್ಲಾ ಹುಚ್ಚಿ ಅಂತ ಕರೀತಾರೆ ಗೊತ್ತಾ ಅಂತ ಒಂದಷ್ಟು ಶಾಕಿಂಗ್ ವಿಚಾರವನ್ನ ಟ್ವೀಟ್ ಮಾಡೋ ಮೂಲಕ ಶೇರ್ ಮಾಡಿದ್ದಾರೆ.
ಹಾಗಾದ್ರೆ ಅವರು ಬರೆದ ಟ್ವೀಟ್ ನಲ್ಲಿ ಏನಿದೆ ಅಂತ ನೋಡೋದಾದರೆ, ಬಾಲಿವುಡ್‌ನ ಹೀರೊಗಳ ರೂಮಿಗೆ ಹೋಗುವಂತೆ ಹಲವು ಬಾರಿ ನನ್ನನ್ನು ಒತ್ತಾಯ ಮಾಡುತ್ತಿದ್ದರು. ಅದನ್ನು ಒಪ್ಪದೆ ಇದ್ದಾಗ, ನನ್ನನ್ನು ಹುಚ್ಚಿ ಎಂದು ಕರೆದರು' ಎಂದಿದ್ದಾರೆ.
RRR: ರಾಜಮೌಳಿಯವರ 'RRR' ಚಿತ್ರದ 'ನಾಟು ನಾಟು' ಆಸ್ಕರ್ 2023 ಸಮಾರಂಭದಲ್ಲಿ ಪ್ರದರ್ಶನ
'ಬಾಲಿವುಡ್ ಮಂದಿ ನನ್ನ ನಡತೆಯನ್ನ ಜಂಭ ಅಂತ ಹೇಳ್ತಾರೆ.. ಯಾಕೆಂದರೆ ನಾನು ಬೇರೆ ಹುಡುಗಿಯರ ಹಾಗೆ ಎಲ್ಲದಕ್ಕೂ ನಕ್ಕಿಲ್ಲ, ಐಟಂ ಸಾಂಗ್ ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನಾನು ಹುಚ್ಚಿಯಾದೆ' ಅಂತ ಬರೆದಿದ್ದಾರೆ .
ಇದನ್ನೂ ಓದಿ- Mandala: ಅಜಯ್ ಸರ್ಪೇಷ್ಕರ್ ಮೊದಲ ‘ಮಂಡಲ’ ಚಿತ್ರ ಮಾರ್ಚ್ 10ಕ್ಕೆ ತೆರೆ ಮೇಲೆ
ನನ್ನ ವರ್ತನೆಯ ವಿರುದ್ಧ ನನ್ನನ್ನು ಜೈಲಿಗೆ ಕಳಿಸುತ್ತಾರೆಯೇ?
ತಮ್ಮನ್ನು ತಾವು ಸರಿ ಮಾಡಿಕೊಳ್ಳುವುದನ್ನು ಬಿಟ್ಟು, ನನ್ನನ್ನು ಸರಿ ಮಾಡುವುದಕ್ಕೆ ಬರುತ್ತಿದ್ದಾರೆ. ನನಗೋಸ್ಕರ ಏನೂ ಬೇಡ. ನಾನು ನನ್ನದೆಲ್ಲ ಆಸ್ತಿಯನ್ನು ಅಡವಿಟ್ಟು ಒಂದು ಸಿನಿಮಾ ಮಾಡಿದ್ದೇನೆ. ರಾಕ್ಷಸರ ನಿರ್ಣಾಮ ಆಗುತ್ತೆ. ತಲೆಗಳು ಉರುಳುತ್ತವೆ. ಯಾರೂ ನನ್ನನ್ನು ದೂಷಿಸಬೇಡಿ ಎಂದು ಕಂಗನಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ವಿರೋಧಿಗಳ ವಿರುದ್ಧ ನಾನು ಈಜುತ್ತೇನೆ ಎಂದರೆ ತೊಂದರೆಗಳು ಶುರುವಾಗುತ್ತವೆ. ನಾನು ತೊಂದರೆಗಳನ್ನು ಅನುಭವಿಸಿದ್ದೇ ಅವರ ವಿರುದ್ಧ ಮಾತನಾಡಿದೆ ಎನ್ನುವ ಕಾರಣಕ್ಕಾಗಿ. ನಾನು ಬೇರೆಯ ಹುಡುಗಿಯರ ತರಹ ಅಲ್ಲ. ಹಾಗಾಗಿ ನನ್ನನ್ನು ದುರಂಹಕಾರಿ ಅಂತಾನೂ ಕರೆದರು ಎನ್ನುತ್ತಾರೆ ಕಂಗನಾ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.