Kangana Ranaut Slapped Case : ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಗೆ ಕಪಾಳಮೋಕ್ಷ ಮಾಡಿದ CISF ಮಹಿಳೆ ಯಾರು?
Kangana Ranaut: ಕಂಗನಾ ರಣಾವತ್ ಅವರಿಗೆ ಕಪಾಳಮೋಕ್ಷ ಮಾಡಿದ ಸಿಐಎಸ್ಎಫ್ ಮಹಿಳಾ ಜವಾನ ಕುಲ್ವಿಂದರ್ ಕೌರ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ..
Kangana Ranaut Slapped Case : ಹಿಮಾಚಲ ಪ್ರದೇಶದಿಂದ ಆಯ್ಕೆಯಾಗಿರುವ ಬಾಲಿವುಡ್ ನಟಿ ಹಾಗೂ ಲೋಕಸಭಾ ಸಂಸದ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್‌ಎಫ್ ಜವಾನರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಸಿಐಎಸ್‌ಎಫ್ ಸೇವೆಯಿಂದ ಅಮಾನತು ಮಾಡಲಾಗಿದೆ. ಕಂಗನಾ ಕಿವಿಗೆ ಬಡಿದ ಸಿಐಎಸ್ಎಫ್ ಮಹಿಳಾ ಜವಾನ ಕುಲ್ವಿಂದರ್ ಕೌರ್ ಬಗ್ಗೆ ತಿಳಿಯಲು ನೆಟ್ಟಿಗರು ಪ್ರಯತ್ನಿಸುತ್ತಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗಣಾಗೆ ಕಪಾಳ ಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ.
ಕುಲ್ವಿಂದರ್ ಕೌರ್ ಯಾರು?
ವರದಿಗಳ ಪ್ರಕಾರ, ಕುಲ್ವಿಂದರ್ ಕೌರ್ ಅವರ ಕುಟುಂಬದ ಹಿನ್ನೆಲೆ ರೈತ ಕುಟುಂಬವಾಗಿದೆ. ಕುಲ್ವಿಂದರ್ ಕೌರ್ ಕೂಡ 2009ರಲ್ಲಿ ಸಿಐಎಸ್‌ಎಫ್‌ಗೆ ಸೇರಿದ್ದರು. ಕುಲ್ವಿಂದರ್ ಅವರ ಪತಿ ಕೂಡ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಗನಾ ಪ್ರಕರಣ ಬೆಳಕಿಗೆ ಬಂದ ನಂತರ ಕುಲ್ವಿಂದರ್ ಅವರನ್ನು ಸಿಐಎಸ್‌ಎಫ್‌ನಿಂದ ಅಮಾನತುಗೊಳಿಸಲಾಗಿದೆ. ಇದಲ್ಲದೇ ಆಕೆಯ ವಿರುದ್ಧ ತನಿಖೆ ಆರಂಭಿಸಲಾಗಿದೆ.
ಸಿಐಎಸ್‌ಎಫ್‌ನಲ್ಲಿ ಕುಲ್ವಿಂದರ್ ಅವರ ಸೇವಾ ದಾಖಲೆಯು ಸ್ಪಷ್ಟವಾಗಿದೆ ಮತ್ತು ಅವರ ವಿರುದ್ಧ ಯಾವುದೇ ದೂರುಗಳು ಅಥವಾ ಆರೋಪಗಳಿಲ್ಲ. ಕುಲ್ವಿಂದರ್ ಕೌರ್ ಪಂಜಾಬ್‌ನ ಸುಲ್ತಾನ್‌ಪುರ ಲೋಧಿಯ ಮೂಲದವರು. ಕುಲ್ವಿಂದರ್ ಕೂಡ ತನ್ನ ಪತಿ ಮತ್ತು ಮಕ್ಕಳೊಂದಿಗೆ ಮೊಹಾಲಿಯಲ್ಲಿ ವಾಸಿಸುತ್ತಿದ್ದಾರೆ. ಕುಲ್ವಿಂದರ್ ಸಹೋದರ ಸಹ ರೈತ ಮುಖಂಡ.
ಘಟನೆ ಬಳಿಕ ಮಹಿಳಾ ಜವಾನ್ ಹೇಳಿದ್ದೇನು?
ಈ ಸಂಪೂರ್ಣ ವಿಚಾರವಾಗಿ ಮಹಿಳಾ ಜವಾನ ಪ್ರತಿಕ್ರಿಯಿಸಿದ್ದಾರೆ. ''ನನ್ನ ತಾಯಿ ಪ್ರತಿಭಟನೆಗೆ ಕುಳಿತಾಗ ರೈತರ ವಿರುದ್ಧ ಹೇಳಿಕೆ ನೀಡಿದ್ದರು'' ಹೀಗಾಗಿ ಕಂಗನಾ ರಣಾವತ್‌ಗೆ ಕಪಾಳ ಮೋಕ್ಷ ಮಾಡಲಾಗಿದೆ ಎಂದು ಸಿಐಎಸ್‌ಎಫ್ ಜವಾನ್ ಕುಲ್ವಿಂದರ್ ಕೌರ್ ಹೇಳಿಕೊಂಡಿದ್ದಾರೆ..
ಘಟನೆಯ ನಂತರ ಕಂಗನಾ ರಣಾವತ್ ಅವರ ವಿಡಿಯೋವೂ ಹೊರಬಿದ್ದಿದೆ. ಭದ್ರತಾ ತಪಾಸಣೆ ವೇಳೆ ಈ ಘಟನೆ ನಡೆದಿದೆ ಎಂದು ಕಂಗನಾ ವಿಡಿಯೋದಲ್ಲಿ ಹೇಳಿದ್ದಾರೆ. "ನಾನು ಹಾದು ಹೋಗುತ್ತಿದ್ದಾಗ ಇನ್ನೊಂದು ಕ್ಯಾಬಿನ್‌ನಲ್ಲಿ ಸಿಐಎಸ್‌ಎಫ್ ಸೆಕ್ಯುರಿಟಿ ಗಾರ್ಡ್ ಮಹಿಳೆ ಇದ್ದಳು. ನಾನು ದಾಟುವಾಗ ನನ್ನ ಮುಂದೆ ಬಂದು ಕಪಾಳಮೋಕ್ಷ ಮಾಡಿದಳು.. ನಾನು ಅವಳನ್ನು ಕೇಳಿದೆ, ಅವಳು ಯಾಕೆ ಹಾಗೆ ಮಾಡಿದಳು ಅಂತ? ಆಗ ರೈತ ಚಳವಳಿಗೆ ನನ್ನ ಬೆಂಬಲವಿದೆ ಎಂದು ಹೇಳಿದರು. ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಉಗ್ರಗಾಮಿತ್ವದ ಬಗ್ಗೆ ನಾನು ಈಗ ಆತಂಕಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.