ಕಂಗನಾ ವಾಟ್ಸಪ್​ ಮೆಸೇಜ್​ ಲೀಕ್ : ಬಾಲಿವುಡ್ ಇಂಡಸ್ಟ್ರಿಯಲ್ಲಿನ ಪಕ್ಷಪಾತಗಳ ಬಗ್ಗೆ ನಿರ್ದಾಕ್ಷಿಣ್ಯವಾಗಿ ಮಾತನಾಡುವ ಅಥವಾ ಸರಿ - ತಪ್ಪು ಎಂದು ಬೆರಳನ್ನು ತೋರಿಸುವ ರೆಬೆಲ್‌ ನಟಿ ಕಂಗನಾ ರಣಾವತ್‌ ಯಾವಾಗಲೂ ಒಂದಲ್ಲ ಇನ್ನೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಬೋಲ್ಡ್‌ ಆಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ನಟಿ ಕಂಗನಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಮನರಂಜನಾ ಕ್ಷೇತ್ರದ ಸದಸ್ಯರೊಬ್ಬರು ತಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಕಂಗನಾ ಇತ್ತೀಚೆಗೆ ಆರೋಪಿಸಿದ್ದಾರೆ. ಸದ್ಯ ಎಮರ್ಜೆನ್ಸಿ ಸಿನಿಮಾದ ಪೋಸ್ಟ್​ ಪ್ರೊಡಕ್ಷನ್​ ಕೆಲಸದಲ್ಲಿ ಬ್ಯುಸಿ ಇರುವ ಕಂಗನಾ, ಇದೀಗ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ನಟಿ ಕಂಗನಾ ರಣಾವತ್​ ಅವರ ವಾಟ್ಸಪ್​ ಮೆಸೇಜ್‌ ಲೀಕ್​ ಆಗಿದೆ ಎಂದು ಹೇಳಲಾಗುತ್ತಿದೆ. ಸ್ವತಃ ಕಂಗನಾ ಅವರೇ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮೇಲೆ ಗೂಢಚಾರಿಕೆ ಮಾಡಲಾಗಿದೆ. ಇದನ್ನೆಲ್ಲ ಮಾಡುತ್ತಿರುವುದು ಬಾಲಿವುಡ್‌​ನ ಸ್ಟಾರ್​ ದಂಪತಿ ಎಂದು ಕಂಗನಾ ಆರೋಪಿಸುತ್ತಿದ್ದಾರೆ. 


ಇದನ್ನೂ ಓದಿ : Veda OTT Release : ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ! ಈ ದಿನ ZEE5 ನಲ್ಲಿ ನಲ್ಲಿ ರಿಲೀಸ್


ನಟಿ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್‌ನ ಸ್ಟೋರಿ ವಿಭಾಗದಲ್ಲಿ ಎರಡು ವಿಚಾರಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಒಂದಷ್ಟು ದಿನಗಳಿಂದ ಅವರನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ. ತಾವು ಹೋದಲ್ಲಿ, ಬಂದಲ್ಲಿ ಅವರ ಫೋಟೋಗಳನ್ನು ಸೆರೆ ಹಿಡಿಯಲಾಗುತ್ತಿದೆ. ಇದಲ್ಲದೇ ಅವರ ಆನ್‌ಲೈನ್‌ ಚಟುವಟಿಕೆಗಳನ್ನು ಸಹ ಟ್ರ್ಯಾಪ್‌ ಮಾಡಲಾಗುತ್ತಿದೆ. ಇದನ್ನೆಲ್ಲ ಸ್ಟಾರ್​ ದಂಪತಿ ಮಾಡಿಸುತ್ತಿದ್ದು, ಅವರಿಗೆ ಕಂಗನಾ ಎಚ್ಚರಿಕೆ ನೀಡಿದ್ದಾರೆ.


"ನೆಪೋಟಿಸಂ ಮಾಫಿಯಾದ ಆ ವಿದೂಷಕ ಒಮ್ಮೆ ನನ್ನ ಮನೆಗೆ ಬಂದಿದ್ದ. ಆತ ಸ್ತ್ರಿಲೋಲ. ಹಾಗೆಯೇ ಗುರುತಿಸಿಕೊಂಡಿದ್ದಾನೆ. ತನ್ನ ಹೆಂಡತಿಯನ್ನು ನಿರ್ಮಾಪಕಿ ಆಗಲು ಒತ್ತಾಯಿಸುತ್ತಿದ್ದಾನೆ. ಹೆಂಡತಿಗೆ ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ಮಾಣ ಮಾಡಲು ಒತ್ತಾಯಿಸುತ್ತಿದ್ದಾನೆ. ಅವನು ನನ್ನ ಎಲ್ಲಾ ಡೇಟಾವನ್ನು ಹೇಗೆ ಪಡೆಯುತ್ತಿದ್ದಾನೆ ಮತ್ತು ಅವನು ಏನು ಮಾಡುತ್ತಿದ್ದಾನೆ ಗೊತ್ತು. ಏಕೆಂದರೆ ಅವನು ತೊಂದರೆಗೆ ಸಿಲುಕಿದರೆ ಅವಳು ಮತ್ತು ಅವಳ ಮಗು ಕೂಡ ತೊಂದರೆಗೆ ಒಳಗಾಗುತ್ತದೆ" ಎಂದು ಕಂಗನಾ ಬರೆದಿದ್ದಾರೆ. 


ಇದನ್ನೂ ಓದಿ : No Kissing ಪಾಲಿಸಿಗೆ ಬ್ರೇಕ್‌! ವಿಜಯ್ ದೇವರಕೊಂಡ ಜೊತೆ ತಮನ್ನಾ ಲಿಪ್‌ಲಾಕ್‌?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.